ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮೋ ಟಿವಿ ವಿರುದ್ಧ ಆಯೋಗಕ್ಕೆ ದೂರಿತ್ತ ಎಎಪಿ, ಕಾಂಗ್ರೆಸ್

|
Google Oneindia Kannada News

ನವದೆಹಲಿ, ಏಪ್ರಿಲ್ 02: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಸಾಧನೆಗಳನ್ನು ಇನ್ನಷ್ಟು ವಿಸ್ತಾರವಾಗಿ ತಲುಪಿಸಲು ಇತ್ತೀಚೆಗೆ ಆರಂಭವಾದ "ನಮೋ ಟಿವಿ' ಬಂದ್ ಮಾಡುವಂತೆ ಕೋರಿ ಆಮ್ ಆದ್ಮಿ ಪಕ್ಷ ಹಾಗೂ ಕಾಂಗ್ರೆಸ್ ಪಕ್ಷವು ಚುನಾವಣಾ ಆಯೋಗಕ್ಕೆ ದೂರು ನೀಡಿವೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ನರೇಂದ್ರ ಮೋದಿ ಹೆಸರಿನ ಎರಡು ಅಕ್ಷರ NaMo ಬಳಸಿ ಟಿವಿ ಚಾನಲ್ ಗೆ ಹೆಸರಿಡಲಾಗಿದೆ. ಪ್ರಮುಖ ಡಿಟಿಎಚ್ ಮತ್ತು ಕೇಬಲ್ ಟಿವಿ ಜಾಲದಲ್ಲಿ ಲಭ್ಯವಿದೆ, ಮೋದಿ ಹೆಸರಿನ ಮೊಬೈಲ್ ಅಪ್ಲಿಕೇಶನ್ ಕೂಡಾ ಇದೆ. ಪ್ರತ್ಯೇಕ ಇಂಟರ್‌ನೆಟ್ ಟಿವಿ ಚಾನಲ್ ಕೂಡಾ ಇದೆ, ಇದೆಲ್ಲದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಎಎಪಿ, ಈ ಬಗ್ಗೆ ಆಯೋಗಕ್ಕೆ ತಿಳಿಸಿದ್ದಾರೆಯೇ? ಮೋದಿ ಅವರ ಭಾವಚಿತ್ರ ಹಾಗೂ ಭಾಷಣಗಳ ಪ್ರಸಾರವು ನೀತಿ ಸಂಹಿತೆ ಉಲ್ಲಂಘನೆಯಾಗುವುದಿಲ್ಲವೆ? ಎಂದು ಪ್ರಶ್ನಿಸಿದೆ.

ಟಿವಿ ಭಾಷಣಕ್ಕೆ ಮೋದಿ ಅನುಮತಿ ಪಡೆದಿರಲಿಲ್ಲ: ಚುನಾವಣಾ ಆಯೋಗಟಿವಿ ಭಾಷಣಕ್ಕೆ ಮೋದಿ ಅನುಮತಿ ಪಡೆದಿರಲಿಲ್ಲ: ಚುನಾವಣಾ ಆಯೋಗ

"ಚುನಾವಣಾ ಆಯೋಗಕ್ಕೆ ಮೂರು ಮನವಿಗಳನ್ನು ಸಲ್ಲಿಸಲಾಗಿದ್ದು, ತನ್ನ ಭಾಷಣವನ್ನು ಪ್ರಸಾರ ಮಾಡುವ ಸಲುವಾಗಿ ಬಿಜೆಪಿ ದೂರದರ್ಶನ ಹಾಗೂ ಇತರ ಚಾನಲ್‌ಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಆಯೋಗದ ಗಮನಕ್ಕೆ ತರಲಾಗಿದೆ" ಎಂದು ಕಾಂಗ್ರೆಸ್ ಮುಖಂಡ ಕಪಿಲ್ ಸಿಬಾಲ್ ನೇತೃತ್ವದ ನಿಯೋಗವು ಹೇಳಿದೆ.

Lok Sabha elections: AAP writes to EC against NAMO TV launch

ಪ್ರಜಾಪ್ರತಿನಿಧಿ ಕಾಯ್ದೆ ಮತ್ತು ಚುನಾವಣಾ ಆಯೋಗದ ಸೂಚನೆ ಅನ್ವಯ ಈ ರೀತಿ ಚುನಾವಣಾ ಪ್ರಚಾರ ಮಾಡುವಂತಿಲ್ಲ. ಟಿವಿ ಚಾನಲ್‌ಗಳಿಗೆ ನೀತಿಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಆಮ್ ಆದ್ಮಿ ಪಕ್ಷ ಆಯೋಗವನ್ನು ಕೋರಿದೆ

English summary
The Aam Aadmi Party (AAP) wrote to the Election Commission (EC) on Monday complaining against the recently-launched "Namo TV", asking the poll panel if political parties having TV channels was in adherence to the Model Code of Conduct.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X