ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೈಕಮಾಂಡಿಗೆ ಕಪ್ಪ ಕೊಟ್ಟ ಯಡಿಯೂರಪ್ಪ ವಿರುದ್ಧ ಲೋಕಪಾಲ ತನಿಖೆಗೆ ಆಗ್ರಹ

|
Google Oneindia Kannada News

Recommended Video

ಚುನಾವಣಾ ಸಮಯದಲ್ಲಿ ಯಡಿಯೂರಪ್ಪಗೆ ಎದುರಾಯ್ತು ಮತ್ತೊಂದು ತಲೆನೋವು..?

ನವದೆಹಲಿ, ಮಾರ್ಚ್ 22: ಹೈಕಮಾಂಡ್ ಗೆ ಕಪ್ಪ ವಿಷಯಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ದಿವಂಗತ ಕೇಂದ್ರ ಸಚಿವ ಅನಂತ್ ಕುಮಾರ್ ಸಂಭಾಷಣೆ ಸಿಡಿ ಪ್ರಕರಣಕ್ಕೆ ಮತ್ತೆ ಚಿಗುರೊಡೆದಿದೆ.

ಯಡಿಯೂರಪ್ಪ ಅವರ ಡೈರಿಯಲ್ಲಿ ಎಲ್ಲಾ ವಿವರಗಳಿಗೆ, ಈ ಪ್ರಕರಣ ವಿವಿಧ ತನಿಖಾ ಸಂಸ್ಥೆಗಳಿಂದ ತನಿಖೆಯಲ್ಲಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಪ್ರಕರಣದ ತನಿಖೆಯನ್ನು ಲೋಕಪಾಲ ಸಂಸ್ಥೆ ಮಾಡಲಿ, ಚೌಕಿದಾರ್ ಚೋರ್ ಅಲ್ಲ ಎಂದು ಪ್ರಧಾನಿ ಮೋದಿ ಅವರು ನಿರೂಪಿಸಲಿ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲ ಅವರು ಸವಾಲು ಹಾಕಿದ್ದಾರೆ.

ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ

ಬಿಜೆಪಿ ಹೈಕಮಾಂಡ್‌ ಗೆ ಕಪ್ಪ ನೀಡಿರುವ ವಿಚಾರವನ್ನು ಇಬ್ಬರು ನಾಯಕರು ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಸಿಡಿಯನ್ನು ಕಾಂಗ್ರೆಸ್ ಈ ಹಿಂದೆ ಕೂಡಾ ಬಿಡುಗಡೆ ಮಾಡಿತ್ತು.

ಹೈಕಮಾಂಡಿಗೆ ಕಪ್ಪ : ಯಡಿಯೂರಪ್ಪ- ಅನಂತ್ ಮಾತನಾಡಿಕೊಂಡಿದ್ದು ಯಾರ ಬಗ್ಗೆ?ಹೈಕಮಾಂಡಿಗೆ ಕಪ್ಪ : ಯಡಿಯೂರಪ್ಪ- ಅನಂತ್ ಮಾತನಾಡಿಕೊಂಡಿದ್ದು ಯಾರ ಬಗ್ಗೆ?

ಯಡಿಯೂರಪ್ಪ ಅವರು ಕಪ್ಪ ಕಾಣಿಕೆ ನೀಡಿರುವ ಬಗ್ಗೆ ಡೈರಿಯಲ್ಲಿ ಉಲ್ಲೇಖವಿದೆ. ಅರುಣ್ ಜೇಟ್ಲಿ, ರಾಜನಾಥ್ ಸಿಂಗ್, ನಿತಿನ್ ಗಡ್ಕರಿ ಸೇರಿದಂತೆ ವಿವಿಧ ನಾಯಕರಿಗೆ 1800 ಕೋಟಿ ರು ನೀಡಿದ್ದಾರೆ ಈ ಬಗ್ಗೆ ತನಿಖೆ ನಡೆಯಲಿದೆ ಎಂದು ಸುರ್ಜೆವಾಲ ಆಗ್ರಹಿಸಿದರು.

1800 ಕೋಟಿ ರು ನಿಂದ 2690 ಕೋಟಿ ರು ತನಕ ಕಪ್ಪಕಾಣಿಕೆ

1800 ಕೋಟಿ ರು ನಿಂದ 2690 ಕೋಟಿ ರು ತನಕ ಕಪ್ಪಕಾಣಿಕೆ

ಕಾರವಾನ್ ಎಕ್ಸ್ ಪ್ರೆಸ್ ವರದಿಯನ್ನು ಉಲ್ಲೇಖಿಸಿರುವ ರಣದೀಪ್ ಸುರ್ಜೆವಾಲ ಅವರು, ಯಡಿಯೂರಪ್ಪ ಅವರ ಬಳಿ ಇದ್ದ ಡೈರಿಯಿಂದ ಐದು ಅಂಶಗಳು ಬೆಳಕಿಗೆ ಬಂದಿವೆ. ಒಟ್ಟಾರೆ, 2690 ಕೋಟಿ ರು ಸಂಗ್ರಹವಾಗಿದ್ದು, 1800 ಕೋಟಿ ರು ಕಪ್ಪಕಾಣಿಕೆಯನ್ನು ಯಡಿಯೂರಪ್ಪ ಅವರು ಸಿಎಂ ಆಗಿದ್ದ ಕಾಲದಲ್ಲಿ ಬಿಜೆಪಿ ಹೈಕಮಾಂಡಿಗೆ ನೀಡಿದ್ದಾರೆ.

ಐಟಿ ಇಲಾಖೆ ಬಳಿ ಡೈರಿ ಇರುವುದು ಸುಳ್ಳೆ?

ಪ್ರತಿ ನಾಯಕರ ಹೆಸರು ಹಾಗೂ ಮೊತ್ತ ಉಲ್ಲೇಖವಾಗಿದ್ದು, ಪ್ರತಿ ಪುಟದಲ್ಲೂ ಬಿಎಸ್ ಯಡಿಯೂರಪ್ಪ ಅವರ ಸಹಿ ಇದೆ. ಈ ಡೈರಿಯನ್ನು ಕೇಂದ್ರ ತನಿಖಾ ತಂಡ ತನ್ನ ವಶದಲ್ಲಿರಿಸಿಕೊಂಡಿದೆ. ಸಿಸಿಬಿ, ಸಿಬಿಡಿಟಿ, ಐಟಿ ಇಲಾಖೆ ಎಲ್ಲಾ ತನಿಖಾ ಸಂಸ್ಥೆಯ ತನಿಖಾ ಪ್ರಗತಿ ಬಗ್ಗೆ ನಂಬಿಕೆಯಿಲ್ಲ, 2017ರಿಂದ ಈ ಡೈರಿ ಐಟಿ ಇಲಾಖೆ ಬಳಿ ಇದೆ ಆದರೂ ಕೇಂದ್ರ ತನಿಖಾ ಸಂಸ್ಥೆ ಏಕೆ ತನಿಖೆ ಮುಂದುವರೆಸಿಲ್ಲ ಎಂದು ಸುರ್ಜೆವಾಲ ಪ್ರಶ್ನಿಸಿದ್ದಾರೆ.

ಕರ್ನಾಟಕ ಕಾಂಗ್ರೆಸ್ ಬಹಿರಂಗ ಪಡಿಸಿದ್ದ ಆಡಿಯೋ ಸಿಡಿ

ಕರ್ನಾಟಕ ಕಾಂಗ್ರೆಸ್ ಬಹಿರಂಗ ಪಡಿಸಿದ್ದ ಆಡಿಯೋ ಸಿಡಿ

ವಿಎಸ್ ಉಗ್ರಪ್ಪ, ಸಚಿವರಾದ ಎಂ.ಬಿ.ಪಾಟೀಲ್, ಈಶ್ವರಖಂಡ್ರೆ, ಡಾ.ಶರಣಪ್ರಕಾಶ್ ಪಾಟೀಲ್, ವಿಧಾನಪರಿಷತ್ ಸದಸ್ಯ ಎಚ್.ಎಂ.ರೇವಣ್ಣ ಅವರು ಸುದ್ದಿಗೋಷ್ಠಿ ನಡೆಸಿ ಯಡಿಯೂರಪ್ಪ ಹಾಗೂ ಅನಂತ್ ಕುಮಾರ್ ನಡುವಿನ ಸಂಭಾಷಣೆಯ ಸಿಡಿಯನ್ನು 2017ರಲ್ಲಿ ಬಿಡುಗಡೆ ಮಾಡಿದ್ದರು. ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರ ಬಂಡವಾಳ 'ಡೈರಿ' ಯಲ್ಲಿ ಅಡಗಿದೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಾಂಬ್ ಸಿಡಿಸಿದ ಬಳಿಕ, ಕಾಂಗ್ರೆಸ್ ಪ್ರತಿ ಬಾಂಬ್ ಸಿಡಿಸಿದೆ.

ಸಿದ್ದರಾಮಯ್ಯ ಅವರು, ಹೈಕಮಾಂಡ್ ಗೆ 1000 ಕೋಟಿ ರು. ನೀಡಿದ್ದಾರೆ

ಸಿದ್ದರಾಮಯ್ಯ ಅವರು, ಹೈಕಮಾಂಡ್ ಗೆ 1000 ಕೋಟಿ ರು. ನೀಡಿದ್ದಾರೆ

ಸಿದ್ದರಾಮಯ್ಯ ಅವರು, ಹೈಕಮಾಂಡ್ ಗೆ 1000 ಕೋಟಿ ರು. ನೀಡಿದ್ದಾರೆಂಬ ವಿಚಾರ ಎಂಎಲ್ಸಿ ಗೋವಿಂದರಾಜು ಡೈರಿಯಲ್ಲಿರುವುದಾಗಿ ಯಡಿಯೂರಪ್ಪ ಬಾಂಬ್ ಸಿಡಿಸಿದ್ದರು. ನಂತರ ಬಿಜೆಪಿ ಕಚೇರಿಯಲ್ಲಿ ಬಿಎಸ್ ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ಅನಂತ್ ಕುಮಾರ್ ನಡುವೆ ನಡೆದ ಸಂಭಾಷಣೆಯ ಸಿಡಿಯನ್ನು ಕಾಂಗ್ರೆಸ್ ನಾಯಕರು ಬಿಡುಗಡೆ ಮಾಡಿದ್ದರು. ನಂತರ ಇಬ್ಬರು ನಾಯಕರ ವಿರುದ್ಧ ಮಲ್ಲೇಶ್ವರ ಪೊಲೀಸ್ ಠಾಣೆ, ಎಸಿಬಿ, ಸೈಬರ್ ಪೊಲೀಸರಿಗೆ ಕಾಂಗ್ರೆಸ್ ದೂರು ನೀಡಿತ್ತು.

English summary
Bribery CD case : Surjewala Expose Bribe Paid to BJP | Congress Spokesperson Randeep Surjewala said "We have caught a theft and the thief. BJP leaders have been caught in a corruption case." Surjewala is reading the contents of the diary which holds details of a transaction between BS Yeddyurappa and BJP leaders.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X