ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಸಂಸ್ಥಾಪನಾ ದಿನವೇ ಪಕ್ಷ ತೊರೆದು ಕಾಂಗ್ರೆಸ್ ಸೇರಿದ ಶತ್ರುಘ್ನ ಸಿನ್ಹಾ

|
Google Oneindia Kannada News

ನವದೆಹಲಿ, ಏ.6: ನಟ, ರಾಜಕಾರಣಿ ಶತ್ರುಘ್ನ ಸಿನ್ಹಾ ಬಿಜೆಪಿ ಸಂಸ್ಥಾಪನಾ ದಿನವೇ ಪಕ್ಷ ತೊರೆದು ಕಾಂಗ್ರೆಸ್‌ನ ಕೈ ಹಿಡಿದಿದ್ದಾರೆ. ಇದರಿಂದ ಇಷ್ಟು ದಿನ ಇದ್ದ ಎಲ್ಲಾ ಊಹಾಪೋಹಗಳಿಗೂ ತೆರೆ ಎಳೆದಂತಾಗಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಈ ಕುರಿತು ಅವರೇ ಸ್ವತಃ ಟ್ವೀಟ್ ಮಾಡಿದ್ದಾರೆ. ಬಿಹಾರದ ಪಟ್ನಾ ಸಾಹಿಬ್ ಕ್ಷೇತ್ರದಿಂದ ಎರಡು ಬಾರಿ ಬಿಜೆಪಿ ಪಕ್ಷದಿಂದ ಆಯ್ಕೆಯಾಗಿದ್ದ ಸಿನ್ಹಾ ಇತ್ತೀಚೆಗೆ ಬಿಜೆಪಿ ವಿರುದ್ಧವೇ ಬಂಡಾಯ ಘೋಷಿಸಿದ್ದರು.

ಬಿಜೆಪಿಯ ಶತ್ರುಘ್ನ ಸಿನ್ಹಾ ಪಟ್ನಾ ಸಾಹಿಬ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ? ಖಾಮೋಶ್!ಬಿಜೆಪಿಯ ಶತ್ರುಘ್ನ ಸಿನ್ಹಾ ಪಟ್ನಾ ಸಾಹಿಬ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ? ಖಾಮೋಶ್!

ಸಿನ್ಹಾ ಅವರನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸುತ್ತಾ ಬಂದಿದ್ದ ಸಿನ್ಹಾ ಅವರನ್ನು ಈ ಬಾರಿ ಬಿಜೆಪಿ ಮೂಲೆಗೆ ತಳ್ಳಿ ಪಾಟ್ನಾ ಸಾಹಿಬ್ ನಿಂದ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರಿಗೆ ಟಿಕೆಟ್ ನೀಡಿತ್ತು.

Lok Sabha Elections 2019 Shatrughan Sinha ends suspense joins Congress

ಸಿನ್ಹಾ ಓರ್ವ ಚಾಣಕ್ಯ ನಾಯಕರಾಗಿದ್ದು ದುರದೃಷ್ಟವಶಾತ್ ಅವರು ಇಷ್ಟು ದಿನ ತಮ್ಮ ವ್ಯಕ್ತಿಒತ್ವಕ್ಕೆ ಒಪ್ಪದ ಪಕ್ಷದಲ್ಲಿದ್ದರು ಎಂದು ವೇಣುಗೋಪಾಲ್ ಹೇಳಿದ್ದಾರೆ. ಇದಕ್ಕೆ ಮುನ್ನ ಇಂದು ಬೆಳಿಗ್ಗೆ ಟ್ವೀಟ್ ಮಾಡಿದ್ದ ಸಿನ್ಹಾ ನಾನು ಭಾರತೀಯ ಜನತಾ ಪಕ್ಷ ತೊರೆಯುತ್ತಿದ್ದೇನೆ.

ಯಾರು ಕುಬೇರರು, ಯಾರು ಕುಚೇಲರು? ಆಸ್ತಿಪಾಸ್ತಿ ವಿವರ ಬೇಕೆ?

ಇದು ನನಗೆ ಅತ್ಯಂತ ನೋವುಂಟು ಮಾಡಿದೆ. ಏಪ್ರಿಲ್ 6 ರಂದು ನಮ್ಮೆಲ್ಲರಿಗೂ ತಿಳಿದಿರುವಂತೆ ಪಕ್ಷದ ಸಂಸ್ಥಾಪನಾ ದಿನ. ನಾನು ಈ ಪಾರ್ಟಿಯಲ್ಲಿ ಭಾರತ ರತ್ನ ನಾನಾಜಿ ದೇಶಮುಖ್, ದಿವಂಗತ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ಮಾರ್ಗದರ್ಶನ ಮತ್ತು ಆಶೀರ್ವಾದದೊಂದಿಗೆ ಬೆಳೆದಿದ್ದೇನೆ ಎಂದಿದ್ದಾರೆ.

English summary
Actor-turned-politician Shatrughan Sinha on Saturday ended the suspense over his political future and joined the Congress here with the hope it will provide him with the opportunity to serve people, society, and the nation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X