ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಸಭೆ ಚುನಾವಣೆ: ಅಡ್ವಾಣಿ, ಜೋಶಿ ಸ್ಪರ್ಧಿಸುತ್ತಾರಾ?

|
Google Oneindia Kannada News

ನವದೆಹಲಿ, ಜನವರಿ 25: ಹೊಸ ಮುಖಗಳಿಗೆ ಅವಕಾಶ ನೀಡುವ ಸಲುವಾಗಿ 75 ವರ್ಷ ದಾಟಿದ ಮುಖಂಡರು ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂಬ ಬಿಜೆಪಿಯ ನಿಲುವು ಈ ಬಾರಿಯ ಚುನಾವಣೆಯಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

ವಯಸ್ಸಿನ ಮಿತಿಯ ಗಡಿ ದಾಟಿರುವ ಬಿಜೆಪಿಯ ಹಿರಿಯ ನಾಯಕರಾದ ಎಲ್‌.ಕೆ. ಅಡ್ವಾಣಿ ಮತ್ತು ಮುರಳಿ ಮನೋಹರ ಜೋಶಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆಯೇ?

75 ವರ್ಷ ಮೇಲ್ಪಟ್ಟವರಿಗೆ ಬಿಜೆಪಿ ಟಿಕೆಟ್, ಸಚಿವ ಸ್ಥಾನವಿಲ್ಲ! 75 ವರ್ಷ ಮೇಲ್ಪಟ್ಟವರಿಗೆ ಬಿಜೆಪಿ ಟಿಕೆಟ್, ಸಚಿವ ಸ್ಥಾನವಿಲ್ಲ!

ಇದು ಅಡ್ವಾಣಿ ಹಾಗೂ ಜೋಶಿ ಅವರಿಗೆ ಬಿಟ್ಟಿದ್ದು ಎಂದು ಬಿಜೆಪಿ ತಿಳಿಸಿದೆ. 2014ರ ಲೋಕಸಭೆ ಚುನಾವಣೆಯಲ್ಲಿ ಅಡ್ವಾಣಿ ಅವರು ಗಾಂಧಿನಗರ ಕ್ಷೇತ್ರದಿಂದ ಜಯಗಳಿಸಿದ್ದರು. ವಾರಣಾಸಿ ಕ್ಷೇತ್ರವನ್ನು ನರೇಂದ್ರ ಮೋದಿ ಅವರಿಗೆ ಬಿಟ್ಟುಕೊಟ್ಟಿದ್ದ ಮುರಳಿ ಮನೋಹರ ಜೋಶಿ ಕಾನ್ಪುರದಿಂದ ಸ್ಪರ್ಧಿಸಿ ಗೆಲುವು ಕಂಡಿದ್ದರು.

lok sabha elections 2019 lk advani murli manohar joshi contest bjp

ಚುನಾವಣೆಗಳಲ್ಲಿ ಸ್ಪರ್ಧಿಸಲು 75 ವರ್ಷ ವಯಸ್ಸಿನ ಮಿತಿ ಹೇರಿಲ್ಲ. ಈ ವಯೋಮಿತಿ ಸಚಿವ ಹುದ್ದೆಗೆ ಮಾತ್ರ ಅನ್ವಯಿಸುತ್ತದೆ ಎಂದು ಬಿಜೆಪಿ ತಿಳಿಸಿದೆ.

ಮೋದಿ ಮನೆಗೆ ಹೋಗುವ ಸಮಯ ಬಂದಿದೆ: ಚಂದ್ರಬಾಬು ನಾಯ್ಡು ಮೋದಿ ಮನೆಗೆ ಹೋಗುವ ಸಮಯ ಬಂದಿದೆ: ಚಂದ್ರಬಾಬು ನಾಯ್ಡು

ಈಗಾಗಲೇ ಆರೋಗ್ಯದ ಕಾರಣವೊಡ್ಡಿ ಸುಷ್ಮಾ ಸ್ವರಾಜ್ ಮತ್ತು ಉಮಾ ಭಾರತಿ ತಾವು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಪ್ರಕಟಿಸಿದ್ದಾರೆ. ಆದರೆ, ಈ ಬಗ್ಗೆ ಇನ್ನೂ ಬಿಜೆಪಿ ನಿರ್ಧರಿಸಿಲ್ಲ.

ಲೋಕಸಭಾ ಚುನಾವಣೆ: ಮೊದಲ ಅಭ್ಯರ್ಥಿಯನ್ನು ಘೋಷಿಸಿದ ಬಿಜೆಪಿ ಲೋಕಸಭಾ ಚುನಾವಣೆ: ಮೊದಲ ಅಭ್ಯರ್ಥಿಯನ್ನು ಘೋಷಿಸಿದ ಬಿಜೆಪಿ

ಅಡ್ವಾಣಿ (91) ಮತ್ತು ಜೋಶಿ (84) ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿದ್ದಾರೆಯೇ ಅಥವಾ ಇಲ್ಲವೇ ಎಂಬುದು ಇನ್ನೂ ಖಚಿತವಾಗಿಲ್ಲ. ಈ ನಿರ್ಧಾರವನ್ನು ಅವರಿಗೇ ಬಿಡಲು ಪಕ್ಷ ನಿರ್ಧರಿಸಿದ್ದಾರೆ. ಪಕ್ಷ ಬಯಸಿದ್ದನ್ನು ತಾವು ಮಾಡಲು ಸಿದ್ಧರಿರುವುದಾಗಿ ಜೋಶಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

English summary
Lok Sabha elections 2019: BJP said the contest of veterans LK Advani and Murli Manohar Joshi in elections is upto them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X