ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

4ನೇ ಹಂತದ ಚುನಾವಣೆ: ಕಮಲ್ ನಾಥ್ ಮಗ ಅತ್ಯಂತ ಸಿರಿವಂತ ಅಭ್ಯರ್ಥಿ

By ವಿಕ್ಕಿ ನಂಜಪ್ಪ
|
Google Oneindia Kannada News

ನವದೆಹಲಿ, ಏಪ್ರಿಲ್ 24: ನಾಲ್ಕನೇ ಹಂತದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳಲ್ಲಿ ಅತ್ಯಂತ ಸಿರಿವಂತ ಅಭ್ಯರ್ಥಿ ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್ ಅವರ ಮಗ ನಕುಲ್ ನಾಥ್. 660 ಕೋಟಿ ರೂಪಾಯಿ ಒಡೆಯರಾಗಿರುವ ನಕುಲ್ ನಾಥ್, ಎಲ್ಲರಿಗಿಂತ ಹೆಚ್ಚು ಶ್ರೀಮಂತ ಅಭ್ಯರ್ಥಿ.

ಲೋಕಸಭೆ ಚುನಾವಣೆ ವಿಶೇಷ ಪುಟ

ಅಸೋಸಿಯೆಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಸಲ್ಲಿಸಿರುವ ವರದಿ ಪ್ರಕಾರ, ಮಧ್ಯಪ್ರದೇಶದ ಛಿಂದ್ವಾರಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಕುಲ್ ನಾಥ್ ಅವರ ಆಸ್ತಿ ಮೌಲ್ಯ, 6,60,19,46,757 ರೂಪಾಯಿ. ಅವುಗಳಲ್ಲಿ ಚರ ಆಸ್ತಿ ಮೌಲ್ಯ 6,18,41,72,757 ರೂ. ಮತ್ತು ಸ್ಥಿರ ಆಸ್ತಿ ಮೌಲ್ಯ 41,77,74,000 ರೂ.

ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ಆಸ್ತಿ ಕೋಟಿ ರು ಹೆಚ್ಚಳ ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ಆಸ್ತಿ ಕೋಟಿ ರು ಹೆಚ್ಚಳ

ಎರಡನೆಯ ಸ್ಥಾನದಲ್ಲಿರುವ ಮುಂಬೈ ದಕ್ಷಿಣ ಕೇಂದ್ರದಿಂದ ಸ್ಪರ್ಧಿಸುತ್ತಿರುವ ವಂಚಿತ್ ಬಹುಜನ್ ಆಘಾದಿ ಪಕ್ಷದಿಂದ ಸ್ಪರ್ಧಿಸುತ್ತಿರುವ ಸಂಜಯ್ ಸುಶೀಲ್ ಭೋಸಲೆ ಅವರ ಆಸ್ತಿ ಮೌಲ್ಯ 125 ಕೋಟಿ ರೂ. ಅವರ ಚರ ಆಸ್ತಿ ಮೌಲ್ಯ 4,37,62,003 ರೂ ಮತ್ತು ಸ್ಥಿರ ಆಸ್ತಿ ಮೌಲ್ಯ 1,25,06,24,308 ರೂ.

Lok Sabha elections 2019 kamal nath son congress Chhindwara nakul nath richest candidate 4th phase

ಒಂದು ಕೋಟಿ ರೂ ಮೌಲ್ಯದ ಆಸ್ತಿ ಹೊಂದಿರುವ 306 (33%) ಅಭ್ಯರ್ಥಿಗಳು ನಾಲ್ಕನೆಯ ಹಂತದ ಚುನಾವಣಾ ಕಣದಲ್ಲಿದ್ದಾರೆ. ಪ್ರಮುಖ ಪಕ್ಷಗಳಲ್ಲಿ ಕಾಂಗ್ರೆಸ್‌ನ 57 ರಲ್ಲಿ 50 (88%), ಬಿಜೆಪಿಯ 57 ಅಭ್ಯರ್ಥಿಗಳಲ್ಲಿ 50 (88%), ಬಿಎಸ್ಪಿಯ 54ರಲ್ಲಿ 20 (37%), ಎಸ್‌ಎಚ್‌ಎಸ್‌ನ 21ರಲ್ಲಿ 13 (62%) ಮತ್ತು ಎಸ್‌ಪಿಯ 10ರಲ್ಲಿ 8 (80%) ಅಭ್ಯರ್ಥಿಗಳು ಒಂದು ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಆಸ್ತಿ ಹೊಂದಿದ್ದಾರೆ.

ಚಾಂದಿನಿ ಚೌಕ್ ಅಭ್ಯರ್ಥಿ ಕೇಂದ್ರ ಸಚಿವ ಹರ್ಷವರ್ಧನ್ ಆಸ್ತಿ ವಿವರ ಚಾಂದಿನಿ ಚೌಕ್ ಅಭ್ಯರ್ಥಿ ಕೇಂದ್ರ ಸಚಿವ ಹರ್ಷವರ್ಧನ್ ಆಸ್ತಿ ವಿವರ

ನಾಲ್ಕನೆಯ ಹಂತದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಸರಾಸರಿ ಸಂಪತ್ತಿನ ಮೌಲ್ಯ 4.53 ಕೋಟಿ ರೂ.

ಪ್ರಮುಖ ಪಕ್ಷಗಳ ಪೈಕಿ ಬಿಜೆಪಿಯ 57 ಅಭ್ಯರ್ಥಿಗಳ ಸರಾಸರಿ ಆಸ್ತಿ ಮೌಲ್ಯ 13.63 ಕೋಟಿ ರೂಪಾಯಿ ಇದೆ. ಕಾಂಗ್ರೆಸ್‌ನ 57 ಅಭ್ಯರ್ಥಿಗಳ ಸರಾಸರಿ ಆಸ್ತಿ ಮೌಲ್ಯ 29.03 ಕೋಟಿ ರೂ. ಬಿಎಸ್ಪಿಯ 54 ಅಭ್ಯರ್ಥಿಗಳ ಸರಾಸರಿ ಆಸ್ತಿ ಮೌಲ್ಯ 2.69 ಕೋಟಿ ರೂ ಮತ್ತು ಎಸ್‌ಎಚ್‌ಎಸ್‌ ಅಭ್ಯರ್ಥಿಗಳ ಸರಾಸರಿ ಆಸ್ತಿ ಮೌಲ್ಯ 17.85 ಕೋಟಿ ರೂ.

English summary
Lok Sabha elections 2019: Madya Pradesh Chief Minister Kamal Nath's son Nakul Nath is the richest candidate contesting the 4th phase.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X