ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದು ವರ್ಷ ಇವಿಎಂ ಕೊಡಿ, ದೋಷ ಕಂಡು ಹಿಡಿತೀವಿ: ಪಿತ್ರೋಡಾ

|
Google Oneindia Kannada News

ನವದೆಹಲಿ, ಏಪ್ರಿಲ್ 18: ವಿದ್ಯುನ್ಮಾನ ಮತಯಂತ್ರದಲ್ಲಿ ದೋಷವಿದೆ. ಆದರೆ ಅದೇನೆಂದು ನಮಗೂ ತಿಳಿದಿಲ್ಲ. ಯಾರಾದರೂ ಒಂದು ವರ್ಷ ಅಧ್ಯಯನಕ್ಕೆ ಇವಿಎಂ ಕೊಟ್ಟರೆ ನಾವು ಅದನ್ನು ಕಂಡುಹಿಡಿಯಲು ಸಾಧ್ಯ ಎಂದು ಸಾಗರೋತ್ತರ ಕಾಂಗ್ರೆಸ್‌ನ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ ಹೇಳಿದ್ದಾರೆ.

'ನಾಚಿಕೆಯಾಗಬೇಕು!' ಪಿತ್ರೋಡಾಗೆ ಮೋದಿ ಅಂಥ ಖಡಕ್ ಉತ್ತರ ನೀಡಿದ್ದೇಕೆ?'ನಾಚಿಕೆಯಾಗಬೇಕು!' ಪಿತ್ರೋಡಾಗೆ ಮೋದಿ ಅಂಥ ಖಡಕ್ ಉತ್ತರ ನೀಡಿದ್ದೇಕೆ?

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಒಬ್ಬ ಎಂಜಿನಿಯರ್ ಆಗಿ, ತಂತ್ರಜ್ಞಾನ ಪರಿಣತನಾಗಿ ಇವಿಎಂ ಕುರಿತು ನನಗೆ ತೃಪ್ತಿಯಿಲ್ಲ. ಆದರೆ, ಅದರಲ್ಲಿನ ದೋಷ ಇಂಥದ್ದೇ ಎಂದು ಹೇಳಲು ನನಗೆ ಸಾಧ್ಯವಾಗುತ್ತಿಲ್ಲ. ಏಕೆಂದರೆ ನಮ್ಮ ಬಳಿ ಇವಿಎಂ ಇಲ್ಲ. ಒಂದು ವರ್ಷದ ಮಟ್ಟಿಗೆ ಅಧ್ಯಯನಕ್ಕಾಗಿ ಯಾರಾದರೂ ಇವಿಎಂ ನೀಡಿದರೆ ನಿಮಗೆ ಏನನ್ನಾದರೂ ಹೇಳಲು ನಮಗೆ ಸಾಧ್ಯ ಎಂದು ಹೇಳಿದರು.

Lok Sabha Elections 2019 Congress sam pitroda problem in evm someone give us for 1 year to study

ಇವಿಎಂನ ವಿನ್ಯಾಸ, ಅದರ ಸಾಫ್ಟ್‌ವೇರ್ಅನ್ನು ಅರ್ಥಮಾಡಿಕೊಳ್ಳಬೇಕು. ಅದರಲ್ಲಿನ ಪ್ರತಿ ಸಣ್ಣ ಸಂಕೇತವನ್ನೂ ವಿಶ್ಲೇಷಣೆಗೆ ಒಳಪಡಿಸಬೇಕು. ಅದಾದ ಬಳಿಕವಷ್ಟೇ ನೀವು ಏನಾದರೂ ಹೇಳಲು ಸಾಧ್ಯ. ಆದರೆ ಒಂದಂತೂ ಸ್ಪಷ್ಟ, ಅದರಲ್ಲಿ ಏನೋ ಸಮಸ್ಯೆ ಇದೆ. ಅದೇನೆಂದು ನಮಗೆ ತಿಳಿದಿಲ್ಲ ಎಂದರು.

ಕಾಂಗ್ರೆಸ್‌ನ ಪ್ರಣಾಳಿಕೆ ತಯಾರಿಸಲು ಜನರ ಅಹವಾಲುಗಳನ್ನು ಆಲಿಸಲಾಗಿದೆ. ನಾವು 5-6 ತಿಂಗಳು ಜನರ ಅಹವಾಲು ಆಲಿಸಲೆಂದೇ ಮೀಸಲಿಟ್ಟಿದ್ದೆವು. ನಾವು ದೇಶದಿಂದ ದೇಶಕ್ಕೆ ಹೋಗಿದ್ದೇವೆ. ಗ್ರಾಮಸ್ಥರೊಂದಿಗೆ ಮಾತನಾಡಿದ್ದೇವೆ. ಪರಿಣತರೊಂದಿಗೆ ಮಾತನಾಡಿದ್ದೇವೆ. ದುಬೈನಲ್ಲಿ 12 ದೇಶಗಳಿಂದ ಬಂದಿದ್ದ ಸದಸ್ಯರೊಂದಿಗೆ ಬೃಹತ್ ಸಭೆ ನಡೆಸಿದ್ದೇವೆ ಎಂದು ತಿಳಿಸಿದರು.

ಮೋದಿ ಕೆಂಡಾಮಂಡಲವಾಗುವಂತೆ ಸ್ಯಾಮ್ ಪಿತ್ರೋಡಾ ನೀಡಿದ ಹೇಳಿಕೆಯೇನು? ಮೋದಿ ಕೆಂಡಾಮಂಡಲವಾಗುವಂತೆ ಸ್ಯಾಮ್ ಪಿತ್ರೋಡಾ ನೀಡಿದ ಹೇಳಿಕೆಯೇನು?

ಪ್ರಣಾಳಿಕೆಯಲ್ಲಿ 52 ಅಂಶಗಳನ್ನು ಪಟ್ಟಿಮಾಡಲಾಗಿದೆ. ಒಂದು ವೇಳೆ ಅಧಿಕಾರಕ್ಕೆ ಬಂದಾಗ ಈ ಪ್ರಣಾಳಿಕೆಯನ್ನು ಜಾರಿ ಮಾಡಲಾಗುವುದು ಎಂಬ ಭರವಸೆ ನೀಡುತ್ತೇನೆ. ಇದು ಸುಳ್ಳು ಭರವಸೆಯಲ್ಲ. ನಾವು ಏನಾದರೂ ಹೇಳಿದರೆ ಅದನ್ನು ಮಾಡುತ್ತೇವೆ ಎಂದರು.

English summary
Lok Sabha Elections 2019: Indian overseas Congress Chief Sam Pitroda said that, there is some problem in EVM, If someone gives us EVM to study for 1 year, we will be able to tell you something.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X