ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನರೇಂದ್ರ ಮೋದಿ 'ಡ್ರಗ್ ಅಡಿಕ್ಟ್' ಎಂದ ಎಎಪಿ ಮುಖಂಡ

|
Google Oneindia Kannada News

ನವದೆಹಲಿ, ಮೇ 6: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ತಮ್ಮ ಅಂತ್ಯದ ವೇಳೆಯಲ್ಲಿ ನಂಬರ್ ಒನ್ ಭ್ರಷ್ಟಾಚಾರಿಯಾಗಿದ್ದರು ಎಂದು ಟೀಕಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿರುವ ಭರದಲ್ಲಿ ಎಎಪಿಯ ವಕ್ತಾರ ಮತ್ತು ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ವಿವಾದಕ್ಕೀಡಾಗಿದ್ದಾರೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಪ್ರಧಾನಿ ನರೇಂದ್ರ ಮೋದಿ ಅವರನ್ನು 'ಮಾದಕ ದ್ರವ್ಯ ವ್ಯಸನಿ' ಎಂದು ಟೀಕಿಸಿರುವ ಸಂಜಯ್ ಸಿಂಗ್, ಮಾದಕ ವಸ್ತು ಸೇವಿಸಿ ಭಾಷಣ ಮಾಡಿದ ಮೋದಿ ಅವರ ವಿರುದ್ಧ ಚುನಾವಣಾ ಆಯೋಗ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಬಿಜೆಪಿಯಿಂದ ಎಎಪಿ ಶಾಸಕರಿಗೆ 10 ಕೋಟಿ ರೂ. ಆಮಿಷ: ಕೇಜ್ರಿವಾಲ್ ಶಾಕಿಂಗ್ ಹೇಳಿಕೆ ಬಿಜೆಪಿಯಿಂದ ಎಎಪಿ ಶಾಸಕರಿಗೆ 10 ಕೋಟಿ ರೂ. ಆಮಿಷ: ಕೇಜ್ರಿವಾಲ್ ಶಾಕಿಂಗ್ ಹೇಳಿಕೆ

'ಮೃತ ವ್ಯಕ್ತಿಯ ಕುರಿತು ಇಂತಹ ಕೆಟ್ಟ ಹೇಳಿಕೆಗಳನ್ನು ನೋಡುವುದು ಡ್ರಗ್ ಅಡಿಕ್ಟ್ ಮೋದಿ ಅವರಂತಹ ವ್ಯಕ್ತಿಯಿಂದ ಮಾತ್ರ ಸಾಧ್ಯ. ಮಾದಕದ್ರವ್ಯಗಳ ಮಾರಾಟವನ್ನು ಚುನಾವಣಾ ಆಯೋಗ ನಿರ್ಬಂಧಿಸಬೇಕು. ಮತ್ತು ಮಾದಕ ದ್ರವ್ಯಗಳ ಪ್ರಭಾವಕ್ಕೆ ಒಳಗಾಗಿ ಭಾಷಣ ಮಾಡುತ್ತಿರುವ ಮೋದಿ ಅವರ ವಿರುದ್ಧ ತನಿಖೆ ನಡೆಸಬೇಕು' ಎಂದು ಅವರು ಟ್ವೀಟ್ ಮಾಡಿದ್ದಾರೆ.

Lok Sabha elections 2019 aap leader Sanjay Singh called narendra modi a drug addict

ಸಂಜಯ್ ಸಿಂಗ್ ಅವರ ಹೇಳಿಕೆ ಭಾರಿ ವಿವಾದ ಸೃಷ್ಟಿಸಿದ್ದು, ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ಎಎಪಿ ತೊರೆದು ಬಿಜೆಪಿ ಸೇರಿದ ದೆಹಲಿಯ ಮತ್ತೊಬ್ಬ ಶಾಸಕ ಎಎಪಿ ತೊರೆದು ಬಿಜೆಪಿ ಸೇರಿದ ದೆಹಲಿಯ ಮತ್ತೊಬ್ಬ ಶಾಸಕ

'ನಿಮ್ಮ ತಂದೆಯವರ ಆಪ್ತರು ಅವರನ್ನು 'ಮಿಸ್ಟರ್ ಕ್ಲೀನ್' ಎಂದು ಕರೆಯುತ್ತಿದ್ದರು. ಆದರೆ, ಅವರ ಜೀವನ ನಂಬರ್ ಒನ್ ಭ್ರಷ್ಟಾಚಾರಿಯಾಗಿ ಅಂತ್ಯಕಂಡಿತು. ನಿಂದನೆಗಳ ಮೂಲಕ ನೀವು ಮೋದಿ ಅವರ 50 ವರ್ಷದ ಸುದೀರ್ಘ ಹೋರಾಟವನ್ನು ಪುಡಿಮಾಡಲಾರಿರಿ. ನನ್ನ ವರ್ಚಸ್ಸನ್ನು ಹಾಳು ಮಾಡುವ ಮೂಲಕ ಮತ್ತು ನನ್ನನ್ನು ಸಣ್ಣದಾಗಿ ಚಿತ್ರಿಸುವ ಮೂಲಕ ಈ ವ್ಯಕ್ತಿಗಳು ದೇಶದಲ್ಲಿ ಅಸ್ಥಿರ ಹಾಗೂ ದುರ್ಬಲ ಸರ್ಕಾರವನ್ನು ರಚಿಸಲು ಬಯಸಿದ್ದಾರೆ' ಎಂದು ಮೋದಿ ಹೇಳಿದ್ದರು.

English summary
Lok Sabha elections 2019: AAP spokesperson Sanjay Singh in a controversial remark called PM Narendra Modi a drug addict and Election Commission should invistigate him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X