• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಣ್ಣದೋಕುಳಿಯಲಿ ರಂಗೇರುತ್ತಿದೆ ಲೋಕಸಭಾ ಚುನಾವಣೆ!

By Srinath
|

ನವದೆಹಲಿ, ಮಾರ್ಚ್ 12- ಈ ಬಾರಿ ಹೋಳಿ ಹಬ್ಬ ಹಿಂದೆಂದಿಗಿಂತಲೂ ಹೆಚ್ಚು ಕಲರ್ ಫುಲ್ ಆಗಲಿದೆ. ಏಕೆಂದರೆ ಲೋಕಸಭಾ ಚುನಾವಣೆ ಅಕ್ಷರಶಃ ರಂಗೇರುತ್ತಿದೆ. ಮಹಾಮಹಿಮ ನಾಯಕರ ಪರವಾಗಿ ಬೆಂಬಲಿಗರು ಕೈಗಳಲ್ಲಿ ಪಿಚಕಾರಿಗಳನ್ನಿಟ್ಟುಕೊಂಡು ಯುದ್ಧಕ್ಕೆ ನಿಂತಿದ್ದಾರೆ!

ಸಾಮಾನ್ಯವಾಗಿ ಡೋರೆಮನ್, ಛೋಟಾ ಭೀಮ್ ಕಾರ್ಟೂನ್ ಚಿತ್ರಗಳಲ್ಲಿ ಹೋಲಿ ಪಿಚಕಾರಿಗಳು ಮಾರಾಟಕ್ಕೆ ಸಿಗುತ್ತವೆ. ಆದರೆ ಈ ಬಾರಿ ಅವುಗಳ ಮೇಲೆ ಮೋದಿ, ರಾಹುಲ್ ಗಾಂಧಿ, ಕೇಜ್ರಿವಾಲ್ ಅವರ ಚಿತ್ರಗಳು ರಾರಾಜಿಸುತ್ತಿವೆ.

ಪ್ರಚಾರ ಗಿಮಿಕ್- ಮೋದಿ ಪಿಚಕಾರಿ ಜತೆಗೆ ಗುಲಾಲ್ ಫ್ರೀ:

ಆರಂಭದಲ್ಲಿ ಅಂಗಡಿಗಳವರು ಹತ್ತಾರು ಪಿಚಕಾರಿಗಳಿಗೆ ರಾಜಕೀಯ ನಾಯಕರ ಫೋಟೋ ಮೆತ್ತಿ ಸ್ಥಳೀಯವಾಗಿ ಮಾರಾಟ ಮಾಡತೊಡಗಿದರು. ಆದರೆ ಮುಂದೆ ಹೆಚ್ಚು ಜನರನ್ನು ಆಕರ್ಷಿಸತೊಡಗಿದೆ. ಜತೆಗೆ, ರಾಜಕಾರಣಿಗಳ ಕಣ್ಣಿಗೂ ಬಿದ್ದು, ಅದನ್ನು ಪ್ರಚಾರದ ಅತ್ಯುತ್ತಮ ಸಾಮಗ್ರಿಯನ್ನಾಗಿಸಿಕೊಂಡಿದ್ದಾರೆ. ಹಾಗಾಗಿ ಮಾರಾಟಗಾರರು ಭಾರಿ ಪ್ರಮಾಣದಲ್ಲಿ ರಾಜಕಾರಣಿಗಳ ಚಿತ್ರಗಳಿರುವ ಫ್ಯಾನ್ಸಿ ಪಿಚಕಾರಿಗಳನ್ನು ಮಾರಾಟಕ್ಕೆ ಬಿಡುತ್ತಿದ್ದಾರೆ.

ಮಾರಾಟಗಾರರು ರಾಜಕಾರಣಿಗಳ ಪಿಚಕಾರಿಗಳನ್ನು ಮಾರಾಟಕ್ಕೆ ಬಿಟ್ಟಿದ್ದೇ ಅವುಗಳ ಬೆಲೆ ದುಪ್ಪಟ್ಟು ಆಗಿವೆ. ಚಿಕ್ಕ ಸೈಜಿನ ಮೋದಿ ವಾಟರ್ ಗನ್ 140 ರೂ. ಗೆ ಮಾರಾಟವಾಗುತ್ತಿದೆ. ಲಾಭವನ್ನಷ್ಟೇ ಯೋಚಿಸುವ ಮಾರಾಟಗಾರರು ತಮ್ಮ ಬಳಿಯಿರುವ ಅಷ್ಟೂ ಸ್ಟಾಕಿಗೆ ಈಗ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯ ಫೋಟೋಗಳನ್ನು ಅಂಟಿಸಿದ್ದಾರೆ. ಬಿಸಿ ದೋಸಯಂತೆ ಪಿಚಕಾರಿಗಳು ಮಾರಾಟವಾಗುತ್ತಿವೆ. (ಲೋಕಸಭಾ ಚುನಾವಣೆ ವಿವರವಾದ ವೇಳಾಪಟ್ಟಿ ಇಲ್ಲಿದೆ)

ಮೋದಿ ಪಿಚಕಾರಿ ಜತೆಗೆ ಗುಲಾಲ್ ಫ್ರೀ:

ಇನ್ನೂ ಅನೇಕ ಭಾಗಗಳಲ್ಲಿ ಅಭ್ಯರ್ಥಿಗಳ ಹೆಸರುಗಳು ಅಧಿಕೃತವಾಗಿ ಪ್ರಕಟವಾಗಿಲ್ಲ. ಮಾರಾಟಗಾರರು ಅದಕ್ಕಾಗಿ ಕಾಯುತ್ತಿದ್ದಾರೆ. ಅಭ್ಯರ್ಥಿಗಳ ಹೆಸರು ಪ್ರಕಟವಾಗುತ್ತಿದ್ದಂತೆ ಅವರವರ ಫೋಟೋಗಳನ್ನು ಅಂಟಿಸಿ ಮಾರಾಟಮಾಡುವುದು ಇವರ ಇರಾದೆಯಾಗಿದೆ. ವ್ಯಾಪಾರಿಗಳಿಗೆ, ಮೋದಿ ಪಿಚಕಾರಿ (pichkari) ಜತೆಗೆ ಗುಲಾಲ್ (ಬಣ್ಣ) ಉಚಿತವಾಗಿ ನೀಡುವ ಆಲೋಚನೆಯೂ ಇದೆ. ಮುಂದೆ ಬೇಡಿಕೆ ನೋಡಿಕೊಂಡು ಆಮ್ ಆದ್ಮಿಯ ಅರವಿಂದ್ ಕೇಜ್ರಿವಾಲಾರ ಪಿಚಕಾರಿಗಳನ್ನೂ ಮಾರಾಟ ಮಾಡಲು ವ್ಯಾಪಾರಿಗಳು ನಿರ್ಧರಿಸಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Lok Sabha Election 2014- Modi and Kejriwal pichkaris to bring more color to Holi. Supporters of Narendra Modi and Arvind Kejriwal are arming themselves with pichkaris this Holi to take each other on. And holi Bazaars geared up with appropriately packaged water guns to keep both camps busy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more