ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ರಕ್ಷಣೆಗೆ ಪೊಸಿಷನ್ ತೆಗೆದುಕೊಂಡ ಎಸ್ ಪಿಜಿ

By Srinath
|
Google Oneindia Kannada News

ನವದೆಹಲಿ, ಮೇ 16: ಎಕ್ಸಿಟ್ ಪೋಲ್ ಗಳ ಮೇಲೆ ವಿಶ್ವಾಸವಿರಿಸಿ ಕೇಂದ್ರ ಗೃಹ ಸಚಿವಾಲಯವು ನಾಳೆ ಅಧಿಕೃತವಾಗಿ ಫಲಿತಾಂಶಗಳು ಪ್ರಕಟವಾಗುವ ಸಂದರ್ಭದಲ್ಲೇ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮತ್ತು ಅವರ ಕುಟುಂಬಕ್ಕೆ Special Protection Group (SPG) ಭದ್ರತೆಯನ್ನೊದಗಿಸಲು ನಿರ್ಧರಿಸಿದೆ ಎಂದು ಮೂಲಗಳು ಹೇಳಿವೆ.

ಅತ್ತ ಫಲಿತಾಂಶ ಬಹಿರಂಗವಾಗಿ ಮೋದಿ ಪಕ್ಷ ಅಧಿಕಾರದ ಸನಿಹ ಬರುತ್ತಿದ್ದಂತೆ ಅವರನ್ನು ರಕ್ಷಿಸಲು ಬುಲೆಟ್ ಪ್ರೂಫ್ ವಾಹನ ಮತ್ತು ಜಾಮರ್ ವ್ಯವಸ್ಥೆಗಳೊಂದಿಗೆ ಮೋದಿಯನ್ನು ಸುತ್ತವರಿಯಲು SPG ಸನ್ನದ್ಧವಾಗಿದೆ ಎಂದು ತಿಳಿದುಬಂದಿದೆ.
(ಚುನಾವಣಾ ಫಲಿತಾಂಶದ ದಿನ ದೇಶಕ್ಕೆ ಉಗ್ರರ ಕಾಟ)

Lok Sabha election 2014 resluts- SPG gets ready to protect Narendra Modi

ಈ ಸಂಬಂಧ SPG ಈಗಾಗಲೇ ಗ್ರೌಂಡ್ ವರ್ಕ್ ಮಾಡಿದೆ. ಬಿಜೆಪಿ ಪಕ್ಷವು ಪ್ರಧಾನಿಯನ್ನಾಗಿ ಮೋದಿ ಹೆಸರನ್ನು ಔಪಚಾರಿಕವಾಗಿ ಪ್ರಕಟಿಸುವುದಕ್ಕೂ ಮುನ್ನ ಮತ್ತು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಈ ಸಂಬಂಧ ಅಧಿಕೃತವಾಗಿ ಮೋದಿಗೆ ಆಹ್ವಾನ ನೀಡುವುದಕ್ಕೂ ಮುನ್ನ ಮೇ 16ರಂದೇ ಮೋದಿ ರಕ್ಷಣೆಗೆ ನಿಲ್ಲಲು SPG ಸಿದ್ಧವಾಗಿದೆ ಎಂದು ತಿಳಿದುಬಂದಿದೆ. (ತಮ್ಮ ಮೋದಿಯ ಮದ್ವೆ ಬಗ್ಗೆ ಅಣ್ಣ ಸೋಮಭಾಯ್ ವಿವರಣೆ)

ಪ್ರಸ್ತುತ ಮೋದಿ ಅವರಿಗೆ Z-Plus category ಭದ್ರತೆ ಕಲ್ಪಿಸಲಾಗಿದೆ. National Security Guard ಮತ್ತು ಗುಜರಾತ್ ಪೊಲೀಸರು ಮೋದಿ ಸುತ್ತ ರಕ್ಷಣೆ ನಿಂತಿದ್ದಾರೆ.

ಬದಲಾದ ಕಾಲಮಾನದಲ್ಲಿ ಮೋದಿ ಪತ್ನಿ ಜಶೋದಾಬೆನ್ ಗೆ ಭದ್ರತೆ:

ಮೋದಿ ಭದ್ರತೆಯನ್ನು ಪರಾಮರ್ಶಿಸುತ್ತಿರುವ ಕೇಂದ್ರ ಗೃಹ ಸಚಿವಾಲಯವು ಮೋದಿ ಅವರ ಪತ್ನಿ ಜಶೋದಾಬೆನ್ ಅವರಿಗೂ SPG ಭದ್ರತೆಗೆ ಸೂಚಿಸಿದೆ ಎಂದು ತಿಳಿದುಬಂದಿದೆ. ಜಶೋದಾ ಅವರು ಪಸ್ತುತ ಗುಜರಾತಿನ ಮೆಹಸಾನ ಜಿಲ್ಲೆಯ ಬ್ರಹ್ಮನವಾಡ ಗ್ರಾಮದಲ್ಲಿ ಜಶೋದಾಬೆನ್ ಅವರು ಸಾಮಾನ್ಯರಂತೆ ತಮ್ಮ ಸೋದರರೊಂದಿಗೆ ಜೀವನ ಸಾಗಿಸುತ್ತಿದ್ದಾರೆ. ಆದರೆ ಮೆಹಸಾನ ಗ್ರಾಮದಲ್ಲಿ ಜಶೋದಾಬೆನ್ ಅವರ ರಕ್ಷಣೆಗೆ ನಿಲ್ಲುವುದು ಕಷ್ಟಸಾಧ್ಯವಾಗುವುದರಿಂದ ಅವರನ್ನು ಬೇರೆ ಕಡೆಗೆ ಸ್ಥಳಾಂತರಿಸುವ ಸಾಧ್ಯತೆಯಿದೆ.

ಇನ್ನು ಮೋದಿ ಅವರ ತಾಯಿ ಅವರು ಗಾಂಧಿನಗರದಲ್ಲಿ ವಾಸವಾಗಿರುವುದರಿಂದ ಅವರಿಗೆ SPG ರಕ್ಷಣೆ ನೀಡುವುದು ಕಷ್ಟವೇನೂ ಆಗಲಾರದು. ಗಮನಾರ್ಹವೆಂದರೆ SPG ಮಾರ್ಗಸೂಚಿ ಪ್ರಕಾಋ ಮೋದಿ ಅವರ ಮೂವರು ಸೋದರರು ಮತ್ತು ಇಬಬ್ರು ಸೋದರಿಯರಿಗೆ SPG ರಕ್ಷಣೆ ಸೌಲಭ್ಯ ಲಭ್ಯವಾಗುವುದಿಲ್ಲ. ಆದರೆ ಅವರಿಗೆ Z-category security ಕಲ್ಪಿಸಲಾಗುತ್ತದೆ.

English summary
Lok Sabha election 2014 resluts- SPG gets ready to protect Narendra Modi. Sensing the high probability of BJP leader Narendra Modi becoming the next Prime Minister if his party emerges winner after counting of votes on May 16, as predicted by the exit polls, the Special Protection Group (SPG)has begun preparations to protect the Gujarat Chief Minister and his family.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X