ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ಮತ್ತು ಮಹಾರಾಷ್ಟ್ರದಲ್ಲಿ ಮತ್ತೆ ಲಾಕ್‌ಡೌನ್‌ ಜಾರಿಯಾಗುತ್ತಾ?

|
Google Oneindia Kannada News

ದೆಹಲಿ, ಜೂನ್ 12: ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಕೇಸ್‌ಗಳು ಸಂಖ್ಯೆ ಹೆಚ್ಚಾಗುತ್ತಿದೆ. ಭಾರತದಲ್ಲಿ ಪ್ರತಿದಿನ 10 ಸಾವಿರ ಪ್ರಕರಣಗಳು ದಾಖಲಾಗುತ್ತಿದೆ. ವಿಶೇಷವಾಗಿ ಕೊರೊನಾ ಹಾಟ್‌ಸ್ಪಾಟ್‌ ರಾಜ್ಯಗಳಾದ ಮಹಾರಾಷ್ಟ್ರ ಮತ್ತು ದೆಹಲಿಯಲ್ಲಿ ಹೆಚ್ಚು ಕೇಸ್ ವರದಿಯಾಗುತ್ತಿದೆ.

Recommended Video

Bengaluru corona cases are getting scarier everyday | Bengaluru | Oneindia Kannada

ದೆಹಲಿ ಮತ್ತು ಮಹಾರಾಷ್ಟ್ರದಲ್ಲಿ ಕೊರೊನಾ ನಿಯಂತ್ರಣ ಕಷ್ಟವಾಗಿರುವುದರಿಂದ ರಾಜ್ಯಗಳಲ್ಲಿ ಮತ್ತೆ ಲಾಕ್‌ಡೌನ್‌ ಜಾರಿಯಾಗಬಹುದು ಎಂಬ ಚರ್ಚೆ ಸದ್ದು ಮಾಡ್ತಿದೆ. ಆದರೆ, ಎರಡೂ ರಾಜ್ಯಗಳಲ್ಲಿ ಮತ್ತೆ ಲಾಕ್‌ಡೌನ್‌ ಮಾಡುವ ಅವಕಾಶ ಇಲ್ಲ ಎಂದು ಸರ್ಕಾರವೇ ಹೇಳಿದೆ.

Big Breaking: ಒಂದೇ ದಿನ 10952 ಕೇಸ್: ವಿಶ್ವದಲ್ಲಿ 4ನೇ ಸ್ಥಾನಕ್ಕೇರಿದ ಭಾರತBig Breaking: ಒಂದೇ ದಿನ 10952 ಕೇಸ್: ವಿಶ್ವದಲ್ಲಿ 4ನೇ ಸ್ಥಾನಕ್ಕೇರಿದ ಭಾರತ

ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾ ತಡೆಯಲು ಮತ್ತೆ ಲಾಕ್‌ಡೌನ್ ವಿಸ್ತರಿಸಲು ಚರ್ಚೆಗಳು ನಡೆದಿದೆಯೇ ಎಂದು ಕೇಳಿದಕ್ಕೆ ಪ್ರತಿಕ್ರಿಯೆ ನೀಡಿದ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ''ಲಾಕ್‌ಡೌನ್‌ ವಿಸ್ತರಿಸುವುದಿಲ್ಲ'' ಎಂದು ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಕೂಡ ಟ್ವೀಟ್ ಮಾಡಿದ್ದು, ''ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್‌ ಮಾಡುವುದಿಲ್ಲ. ಜನರು ಗಾಬರಿಗೆ ಒಳಗಾಗಬೇಡಿ. ಗುಂಪು ಸೇರಬೇಡಿ. ಸರ್ಕಾರದ ನಿಯಮಗಳನ್ನು ಪಾಲಿಸಿ'' ಎಂದು ಹೇಳಿದ್ದಾರೆ.

Lockdown will not be re-announced in delhi and maharashtra

ಮಹಾರಾಷ್ಟ್ರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 97,648 ದಾಟಿದೆ. ಈ ಪೈಕಿ ಮುಂಬೈ ನಗರದಲ್ಲಿ ಒಟ್ಟು 54,085 ಕೇಸ್, ಪುಣೆಯಲ್ಲಿ 10,882 ಸೋಂಕು, ಥಾಣೆಯಲ್ಲಿ 15,679 ಕೇಸ್ ವರದಿಯಾಗಿದೆ. ದೆಹಲಿಯಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 34,687ಕ್ಕೆ ಏರಿದೆ. 1085 ಜನರು ಇದುವರೆಗೂ ಕೊವಿಡ್‌ಗೆ ಬಲಿಯಾಗಿದ್ದಾರೆ.

English summary
Delhi Health Minister Satyendar Jain and Maharashtra Chief Minister Uddhav Thackeray clarified that 'Lockdown will not be re-announced'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X