ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಲ್ಲಿ ಲಾಕ್‌ಡೌನ್ ಮತ್ತೆ ವಿಸ್ತರಣೆ; ಮೆಟ್ರೋ ಸೇವೆ ಬಂದ್

|
Google Oneindia Kannada News

ನವದೆಹಲಿ, ಮೇ 09; ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಮತ್ತೆ ಒಂದು ವಾರಗಳ ಕಾಲ ಲಾಕ್‌ಡೌನ್ ವಿಸ್ತರಣೆ ಮಾಡಲಾಗಿದೆ. ಮೇ 17ರ ಬೆಳಗ್ಗೆ 5 ಗಂಟೆಯ ತನಕ ಲಾಕ್‌ಡೌನ್ ಜಾರಿಯಲ್ಲಿರುತ್ತದೆ.

ಭಾನುವಾರ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಈ ಕುರಿತು ಘೋಷಣೆ ಮಾಡಿದರು. ಕಳೆದ ಬಾರಿಗಿಂತ ಈ ಬಾರಿ ಲಾಕ್‌ಡೌನ್ ನಿಯಮಗಳನ್ನು ಕಠಿಣಗೊಳಿಸಲಾಗಿದ್ದು, ಮೆಟ್ರೋ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

ಆಮ್ಲಜನಕ ಕೊರತೆ: ಕೇಂದ್ರಕ್ಕೆ ಚಾಟಿ ಬೀಸಿದ ದೆಹಲಿ ಹೈಕೋರ್ಟ್ಆಮ್ಲಜನಕ ಕೊರತೆ: ಕೇಂದ್ರಕ್ಕೆ ಚಾಟಿ ಬೀಸಿದ ದೆಹಲಿ ಹೈಕೋರ್ಟ್

"ದೆಹಲಿಯಲ್ಲಿ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದೆ. ಆದರೆ, ನಾವು ಇದನ್ನು ಲಘುವಾಗಿ ಪರಿಗಣಿಸುವಂತಿಲ್ಲ. ಆದ್ದರಿಂದ ಲಾಕ್‌ಡೌನ್ ಒಂದು ವಾರ ವಿಸ್ತರಣೆ ಮಾಡಲಾಗುತ್ತಿದೆ" ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ದೆಹಲಿ: ಶ್ವಾನಗಳ ಸ್ಮಶಾನದಲ್ಲಿ ಕೊವಿಡ್-19 ಶವಗಳ ಅಂತ್ಯಸಂಸ್ಕಾರ!ದೆಹಲಿ: ಶ್ವಾನಗಳ ಸ್ಮಶಾನದಲ್ಲಿ ಕೊವಿಡ್-19 ಶವಗಳ ಅಂತ್ಯಸಂಸ್ಕಾರ!

 Lockdown In New Delhi Extended By Another Week

ಏಪ್ರಿಲ್ ಮಧ್ಯಭಾಗದಲ್ಲಿ ದೆಹಲಿಯಲ್ಲಿ ಸೋಂಕಿನ ಪ್ರಮಾಣ ಶೇ 35ರಷ್ಟಿತ್ತು. ಈಗ ಅದು ಶೇ 23ಕ್ಕೆ ಇಳಿಕೆಯಾಗಿದೆ. ಆದರೆ, ವೈದ್ಯರು ಮತ್ತು ತಜ್ಞರು ಕೋವಿಡ್ ಹರಡುವಿಕೆ ತಡೆಯಲು ಲಾಕ್‌ಡೌನ್ ವಿಸ್ತರಣೆ ಅಗತ್ಯವಿದೆ ಎಂದು ಸಲಹೆ ನೀಡಿದ್ದರು.

ದೆಹಲಿ: ಆಕ್ಸಿಜನ್ ಸಿಗದೆ ಮತ್ತೆ 20 ಮಂದಿ ಕೊರೊನಾ ಸೋಂಕಿತರು ಸಾವು ದೆಹಲಿ: ಆಕ್ಸಿಜನ್ ಸಿಗದೆ ಮತ್ತೆ 20 ಮಂದಿ ಕೊರೊನಾ ಸೋಂಕಿತರು ಸಾವು

ನವದೆಹಲಿಯಲ್ಲಿ ನಾಲ್ಕನೇ ಬಾರಿಗೆ ಲಾಕ್‌ಡೌನ್ ವಿಸ್ತರಣೆ ಮಾಡಲಾಗಿದೆ. ಇಂದು ಘೋಷಣೆ ಮಾಡಿರುವ ಲಾಕ್‌ಡೌನ್ ಮೇ 17ರ ಬೆಳಗ್ಗೆ 5 ಗಂಟೆಯ ತನಕ ಜಾರಿಯಲ್ಲಿರಲಿದೆ.

ಕಳೆದ 24 ಗಂಟೆಯಲ್ಲಿ ದೆಹಲಿಯಲ್ಲಿ 13,336 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. 273 ಜನರು ಮೃತಪಟ್ಟಿದ್ದಾರೆ. 14,738 ಜನರು ಗುಣಮುಖಗೊಂಡಿದ್ದಾರೆ.

ರಾಜ್ಯದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 13,23,567ಕ್ಕೆ ಏರಿಕೆಯಾಗಿದೆ. ಒಟ್ಟು ಮೃತಪಟ್ಟವರ ಸಂಖ್ಯೆ 19,344. ಇದುವರೆಗೂ 12,17,991 ಜನರು ಗುಣಮುಖಗೊಂಡಿದ್ದಾರೆ.

English summary
Delhi Chief Minister Arvind Kejriwal on Sunday announced that lockdown has extended in the city by another week. Even the metro services have been suspended this time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X