ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಲಾಕ್‌ಡೌನ್‌: ಇಂಧನ ಮಾರಾಟದಲ್ಲಿ ಶೇಕಡಾ 50ರಷ್ಟು ಇಳಿಕೆ

|
Google Oneindia Kannada News

ದೆಹಲಿ, ಏಪ್ರಿಲ್ 19: ಕೊರೊನಾ ವೈರಸ್‌ ನಿಯಂತ್ರಿಸುವ ಉದ್ದೇಶದಿಂದ ದೇಶಾದ್ಯಂತ ಲಾಕ್‌ಡೌನ್‌ ಮಾಡಲಾಗಿದ್ದು, ಇದು ಆರ್ಥಿಕ ವಲಯದ ಮೇಲೆ ಭಾರಿ ಹೊಡೆತ ಬಿದ್ದಿದೆ. ಇಂಧನ ಉದ್ಯಮ ಮೇಲೆಯೂ ಲಾಕ್‌ಡೌನ್‌ ದೊಡ್ಡಮಟ್ಟದ ಪರಿಣಾಮ ಬೀರಿದ್ದು, ಏಪ್ರಿಲ್ ಮೊದಲ ಎರಡು ವಾರಗಳಲ್ಲಿ ಇಂಧನ ಮಾರಾಟದಲ್ಲಿ ಶೇಕಡಾ 50 ರಷ್ಟು ಇಳಿಕೆ ಕಂಡಿದೆ.

ಸರ್ಕಾರಿ ಸ್ವಾಮ್ಯದಲ್ಲಿರುವ ಇಂಡಿಯನ್ ಆಯಿಲ್ ಕಾರ್ಪೋರೇಷನ್, ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಮತ್ತು ಭಾರತ್ ಪೆಟ್ರೋಲಿಯಂಗಳು ದೇಶಾದ್ಯಂತ ಶೇಕಡಾ 90% ಸಗಟು ಮಳಿಗೆಗಳನ್ನು ಹೊಂದಿದ್ದು, ಎಲ್ಲ ಕಡೆಯೂ ಪೆಟ್ರೋಲ್, ಡಿಸೇಲ್ ಬೇಡಿಕೆ ಕುಸಿದಿದೆ.

ಕೊರೊನಾ ಸಂಕಷ್ಟದಿಂದ ಜನರನ್ನು ಕಾಪಾಡಿದ್ದು ಅನ್ನಭಾಗ್ಯವೇ ಹೊರತು ಮೋದಿ ಚಪ್ಪಾಳೆಯಲ್ಲಕೊರೊನಾ ಸಂಕಷ್ಟದಿಂದ ಜನರನ್ನು ಕಾಪಾಡಿದ್ದು ಅನ್ನಭಾಗ್ಯವೇ ಹೊರತು ಮೋದಿ ಚಪ್ಪಾಳೆಯಲ್ಲ

ಏಪ್ರಿಲ್ ಮೊದಲ ಎರಡು ವಾರ ಅಂದ್ರೆ 15ನೇ ತಾರೀಕಿನವರೆಗೂ ಇಂಧನದ ಬೇಡಿಕೆಯಲ್ಲಿ ಭಾರಿ ಇಳಿಕೆ ಕಂಡಿದೆ. ವರದಿಗಳ ಪ್ರಕಾರ ಅನಿಲ ತೈಲದಲ್ಲಿ ಶೇಕಡಾ 61 ರಷ್ಟು ಕುಸಿದಿದ್ದರೆ, ಗ್ಯಾಸೋಲಿನ್ ಮತ್ತು ಜೆಟ್ ಇಂಧನ ಮಾರಾಟವು ಶೇಕಡಾ 64 ಮತ್ತು 94 ರಷ್ಟು ಕುಸಿದಿದೆ.

Lockdown effect Indian Retail Fuel Cuts 50%

ಮೊದಲ ಹದಿನೈದು ದಿನದಲ್ಲಿ ಎಲ್‌ಪಿಜಿ ಮಾರಾಟದಲ್ಲಿ ಶೇ 21ರಷ್ಟು ಹೆಚ್ಚಳ ಕಂಡಿದೆ ಎನ್ನಲಾಗಿದೆ. ಲಾಕ್‌ಡೌನ್‌ ಪರಿಣಾಮ ಜೂನ್‌ ತಿಂಗಳವರೆಗೂ ಬಿಪಿಎಲ್ (ಉಜ್ವಲ ಯೋಜನೆ) ಕಾರ್ಡ್‌ದಾರರಿಗೆ ಉಚಿತ ಸಿಲಿಂಡರ್ ನೀಡುತ್ತಿದೆ.

ಅಂದ್ಹಾಗೆ, ಭಾರತದ ವಾರ್ಷಿಕ ಇಂಧನ ಬಳಕೆ - ತೈಲ ಬೇಡಿಕೆಯ ಪ್ರಾಕ್ಸಿ - 2020 ರಲ್ಲಿ ಶೇ 5.6 ರಷ್ಟು ಕುಸಿಯುತ್ತದೆ ಎಂದು ಅಂತರರಾಷ್ಟ್ರೀಯ ಇಂಧನ ಸಂಸ್ಥೆ (ಐಇಎ) ಮಾರ್ಚ್ ವರದಿಯನ್ನು ಆಧರಿಸಿ ಮುನ್ಸೂಚನೆ ನೀಡಿತ್ತು. ಲಾಕ್‌ಡೌನ್‌ ಪರಿಣಾಮ ಭಾರತದ ಗ್ಯಾಸೋಲಿನ್ ಬೇಡಿಕೆ ಶೇಕಡಾ 9 ರಷ್ಟು ಮತ್ತು ಡೀಸೆಲ್ ಶೇಕಡಾ 6.1 ರಷ್ಟು ಕುಸಿಯುತ್ತದೆ ಎಂದು ಅದು ಅಂದಾಜಿಸಿದೆ.

ಕುರಿ/ಮೇಕೆ ಸಾವು ಪರಿಹಾರ ರದ್ದುಪಡಿಸದಂತೆ ಸಿಎಂಗೆ ಶಾಸಕಿ ಪತ್ರಕುರಿ/ಮೇಕೆ ಸಾವು ಪರಿಹಾರ ರದ್ದುಪಡಿಸದಂತೆ ಸಿಎಂಗೆ ಶಾಸಕಿ ಪತ್ರ

ಪ್ರಸ್ತುತ ಮೇ 3ರ ತನಕ ದೇಶದಲ್ಲಿ ಲಾಕ್‌ಡೌನ್ ವಿಸ್ತರಿಸಿದೆ. ಅದಾದ ಬಳಿಕ ದೇಶದ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ ಕೆಲವು ಕೈಗಾರಿಕಾ ಚಟುವಟಿಕೆಗಳಿಗೆ ಅನುಮತಿ ನೀಡಲಾಗುತ್ತೆ ಎನ್ನಲಾಗುತ್ತಿದೆ.

English summary
Coronavirus Lockdown: Diesel sales by state retailers in the first 15 days of April dropped 50%.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X