ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಕ್ ಡೌನ್ 4ನೇ ಹಂತ; ಜನರು ಕೊಟ್ಟಿದ್ದು 5 ಲಕ್ಷ ಸಲಹೆಗಳು

|
Google Oneindia Kannada News

ನವದೆಹಲಿ, ಮೇ 14 : ಕೊರೊನಾ ಹರಡದಂತೆ ತಡೆಯಲು 4ನೇ ಹಂತದ ಲಾಕ್ ಡೌನ್ ಜಾರಿಗೊಳಿಸಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ದೆಹಲಿ ಜನರು ಲಾಕ್ ಡೌನ್ ಸ್ವರೂಪ ಹೇಗಿರಬೇಕು ಎಂದು ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದ್ದಾರೆ.

ದೆಹಲಿ ಮುಖ್ಯಮಂತ್ರಿ ಮೇ 17ರ ಬಳಿಕ ಲಾಕ್ ಡೌನ್ ಸ್ವರೂಪ ಹೇಗಿರಬೇಕು? ಎಂದು ಸಲಹೆ ನೀಡುವಂತೆ ಜನರಿಗೆ ಮನವಿ ಮಾಡಿದ್ದರು. ಮುಖ್ಯಮಂತ್ರಿಗಳಿಗೆ ಇದುವರೆಗೂ 5 ಲಕ್ಷ ಸಲಹೆಗಳು ಬಂದಿದ್ದು, ಅವುಗಳ ಅಂಶಗಳನ್ನು ಕ್ರೋಢಿಕರಣ ಮಾಡಲಾಗುತ್ತಿದೆ.

ಲಾಕ್ ಡೌನ್ ತೆರವು; ಜನರ ಸಲಹೆ ಕೇಳಿದ ಕೇಜ್ರಿವಾಲ್ ಲಾಕ್ ಡೌನ್ ತೆರವು; ಜನರ ಸಲಹೆ ಕೇಳಿದ ಕೇಜ್ರಿವಾಲ್

ಆರೋಗ್ಯ ಸಚಿವ ಸತ್ಯೇಂಧರ್ ಜೈನ್ ಈ ಕುರಿತು ಮಾಹಿತಿ ನೀಡಿದ್ದಾರೆ. "ನಾವು ಸುಮಾರು 5 ಲಕ್ಷ ಸಲಹೆಗಳನ್ನು ಪಡೆದಿದ್ದೇವೆ. ಇದನ್ನು ಆಧರಿಸಿ ಮಾರ್ಗಸೂಚಿ ಮಾಡುತ್ತೇವೆ. 2 ಅಥವ 3 ದಿನದಲ್ಲಿ ಅದನ್ನು ಬಿಡುಗಡೆ ಮಾಡಲಾಗುತ್ತದೆ" ಎಂದು ಹೇಳಿದ್ದಾರೆ.

4ನೇ ಹಂತದ ಲಾಕ್‌ ಡೌನ್; ಏನಿರುತ್ತೆ, ಏನಿರಲ್ಲ? 4ನೇ ಹಂತದ ಲಾಕ್‌ ಡೌನ್; ಏನಿರುತ್ತೆ, ಏನಿರಲ್ಲ?

Lock Down 4Th Phase Around 5 Lakh Suggestions From People

"ರಾಜ್ಯದಲ್ಲಿ ಯಾವ ಸೇವೆ ಆರಂಭಿಸಬೇಕು, ಯಾವುದು ಇರಬಾರದು ಎಂದು ಮಾರ್ಗಸೂಚಿಯಲ್ಲಿ ಪ್ರಕಟಿಸುತ್ತೇವೆ. ಜನರು ಸಾಮಾಜಿಕ ಅಂತರವನ್ನು ಕಾಪಾಡುವುದು ಕಡ್ಡಾಯವಾಗಿರುತ್ತದೆ" ಎಂದು ಸತ್ಯೇಂಧರ್ ಜೈನ್ ತಿಳಿಸಿದ್ದಾರೆ.

ಭಾರತ ಲಾಕ್ ಡೌನ್ ಸಡಿಲಿಕೆ ಸುಳಿವು ಕೊಟ್ಟರಾ ಪ್ರಧಾನಮಂತ್ರಿ ಮೋದಿ? ಭಾರತ ಲಾಕ್ ಡೌನ್ ಸಡಿಲಿಕೆ ಸುಳಿವು ಕೊಟ್ಟರಾ ಪ್ರಧಾನಮಂತ್ರಿ ಮೋದಿ?

ದೆಹಲಿಯಲ್ಲಿ ಪ್ರಸ್ತುತ ಕೊರೊನಾ ಸೋಂಕಿತರ ಸಂಖ್ಯೆ 7210. ಕೇಂದ್ರ ದೆಹಲಿಯಲ್ಲಿ 184, ಪಶ್ಚಿಮ ದೆಹಲಿಯಲ್ಲಿ 122, ದಕ್ಷಿಣ ದೆಹಲಿಯಲ್ಲಿ 70, ಉತ್ತರ ದೆಹಲಿಯಲ್ಲಿ 60 ಕೊರೊನಾ ಪ್ರಕರಣಗಳು ದಾಖಲಾಗಿವೆ. 105 ಜನರು ಇದುವರೆಗೂ ಮೃತಪಟ್ಟಿದ್ದಾರೆ.

ಕೇಂದ್ರ ಗೃಹ ಇಲಾಖೆ ದೆಹಲಿಯನ್ನು ಕೆಂಪು ವಲಯಕ್ಕೆ ಸೇರಿಸಿದೆ. ದೆಹಲಿಯ 11ಜಿಲ್ಲೆಗಳು ರೆಡ್ ಝೋನ್‌ ಎಂದು ಘೋಷಣೆ ಮಾಡಿದೆ. ಆದರೆ, ದೆಹಲಿ ಸರ್ಕಾರ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ. ವಾರ್ಡ್‌ವಾರು ವಿಂಗಡನೆ ಮಾಡಬೇಕು ಎಂದು ಕೇಂದ್ರ ಕ್ಕೆ ಬೇಡಿಕೆ ಇಟ್ಟಿದೆ.

English summary
Delhi CM Arvind Kejriwal had sought suggestions from the public about lock down 4th phase. Around 5 lakh suggestions we got policy is being formulated and release in 2 to 3 days said health minister Satyendar Jain.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X