ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಬ್ಬಕ್ಕೂ ಮೊದಲೇ ಗೃಹಸಾಲ ತುಟ್ಟಿ: ಜೇಬಿಗೆ ಬಿತ್ತು ಕತ್ತರಿ

|
Google Oneindia Kannada News

ನವದೆಹಲಿ , ಅ.3: ಗೃಹ ಮತ್ತು ವಾಹನಗಳ ಮೇಲಿನ ಬಡ್ಡಿ ದರವನ್ನು ಆರ್‌ಬಿಐ ನೀತಿ ಪ್ರಕಾರ ಎಸ್‌ಬಿಐ, ಎಚ್‌ಡಿಎಫ್ ಸಿ ಮತ್ತು ಐಸಿಐಸಿಐ ಬ್ಯಾಂಕ್‌ಗಳು 5ರಿಂದ 10 ಬಿಪಿಎಸ್ ನಷ್ಟು ಏರಿಕೆ ಮಾಡಿದೆ.

ಅಕ್ಟೋಬರ್ 3ರಿಂದ ಅನ್ವಯವಾಗುವಂತೆ ಏರಿಕೆ ಮಾಡಲಾಗಿದೆ. ಎಚ್‌ಡಿಎಫ್ ಸಿ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಎಸ್‌ಬಿಐ ಬ್ಯಾಂಕ್ ಸೇರಿದಂತೆ ಹಲವು ಬ್ಯಾಂಕ್ ಗಳು ಬಡ್ಡಿದರ ಏರಿಕೆ ಮಾಡಿವೆ.

 ಸ್ಟೇಟ್ ಬ್ಯಾಂಕ್ ಗ್ರಾಹಕರಿಗೆ ದೊಡ್ಡ ಶಾಕ್: ಎಟಿಎಂ ವಿತ್ ಡ್ರಾ ಮಿತಿಯಲ್ಲಿ ಭಾರೀ ಕಡಿತ ಸ್ಟೇಟ್ ಬ್ಯಾಂಕ್ ಗ್ರಾಹಕರಿಗೆ ದೊಡ್ಡ ಶಾಕ್: ಎಟಿಎಂ ವಿತ್ ಡ್ರಾ ಮಿತಿಯಲ್ಲಿ ಭಾರೀ ಕಡಿತ

ಎಚ್‌ಡಿಎಫ್ ಸಿ ಬ್ಯಾಂಕ್ 10 ಆರ್‌ಪಿಎಲ್ ಆರ್ ಪಾಯಿಂಟ್ ನ್ನು ಏರಿಕೆ ಮಾಡಿದೆ, ಎಸ್​ಬಿಐ ಸಾಲಗಳ ಮೇಲಿನ ಬಡ್ಡಿದರ 5 ಬಿಪಿಎಸ್ ಏರಿಕೆ ಆಗಿರುವುದರಿಂದ 1 ವರ್ಷದ ಎಂಸಿಎಲ್​ಆರ್​ನ ಬಡ್ಡಿ ದರ ಶೇ.8.5 ಆಗಲಿದೆ. ಐಸಿಐಸಿಐ ಸಾಲಗಳ ಮೇಲಿನ ಎಂಸಿಎಲ್​ಆರ್ ಶೇ.8.65, ಎಚ್​ಡಿಎಫ್​ಸಿ ಗೃಹ ಸಾಲದ ಮೇಲಿನ ಬಡ್ಡಿದರ 10 ಬಿಪಿಎಸ್ ಹೆಚ್ಚಾಗಿವೆ.

Loans get costlier before festival

30 ಲಕ್ಷ ರೂ.ವರೆಗಿನ ಗೃಹ ಸಾಲದ ಮೇಲಿನ ಬಡ್ಡಿದರ ಶೇ.8.85, 30-75 ಲಕ್ಷ ರೂ.ವರೆಗಿನ ಸಾಲದ ಮೇಲಿನ ಬಡ್ಡಿದರ ಶೇ.9 ಮತ್ತು 75 ಲಕ್ಷ ರೂ.ಗೂ ಹೆಚ್ಚಿನ ಸಾಲದ ಬಡ್ಡಿದರ ಶೇ.9.05 ಆಗಿರಲಿದೆ.

ಸೆಪ್ಟೆಂಬರ್ 1ರಂದು ದೇಶದ ಅತಿದೊಡ್ಡ ಸಾಲ ನೀಡುವ ಬ್ಯಾಂಕ್ ಎನಿಸಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಾಲಗಳ ಮೇಲೆ ಬಡ್ಡಿ ದರವನ್ನು ಏರಿಕೆ ಮಾಡಿತ್ತು. ಆರ್.ಬಿ.ಐ. ಇತ್ತೀಚೆಗೆ ರೆಪೋ ದರವನ್ನು ಏರಿಕೆ ಮಾಡಿರುವ ಹಿನ್ನೆಲೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೂಡ ತನ್ನ ಸಾಲಗಳ ಮೇಲೆ 20 ಅಂಶ ಅಂದರೆ, ಶೇ. 0.2 ರಷ್ಟು ಬಡ್ಡಿಯನ್ನು ಏರಿಕೆ ಮಾಡಿದೆ.

ಎಸ್ಬಿಐ ನಂತರ ಗೃಹ ಸಾಲ ಬಡ್ಡಿ ದರ ಇಳಿಸಿದ ಎಚ್ಡಿಎಫ್ ಸಿಎಸ್ಬಿಐ ನಂತರ ಗೃಹ ಸಾಲ ಬಡ್ಡಿ ದರ ಇಳಿಸಿದ ಎಚ್ಡಿಎಫ್ ಸಿ

ಹೀಗಾಗಿ ಸ್ಟೇಟ್ ಬ್ಯಾಂಕ್‌ ಸಾಲಗಳ ಬಡ್ಡಿ ದರ ಈಗ ಶೇ. 7.9 ನಿಂದ 8.1 ಗೆ ಏರಿಕೆಯಾಗಿತ್ತು. ಏರಿಕೆಯ ಹಿನ್ನೆಲೆಯಲ್ಲಿ ಗೃಹ ಸಾಲ, ವಾಹನ ಸಾಲಗಳು ತುಟ್ಟಿಯಾಗಲಿವೆ. ಅಲ್ಪಾವಧಿ ಸಾಲಗಳ ಮೇಲೆ ಬಡ್ಡಿ ಏರಿಕೆ ಜೊತೆಗೆ ಮೂರು ವರ್ಷಗಳ ದೀರ್ಘಕಾಲದ ಸಾಲಗಳ ಮೇಲೆ ಬಡ್ಡಿ ಏರಿಕೆ ಮಾಡಿದ್ದು, ಈ ಏರಿಕೆಯಿಂದ ಉಳಿದ ಬ್ಯಾಂಕ್‌ಗಳೂ ಸಾಲಗಳ ಮೇಲಿನ ಬಡ್ಡಿಯನ್ನು ಏರಿಸಲಿವೆ.

ರೆಪೋದರ ಏರಿಕೆ ನಿರೀಕ್ಷೆ, ಮತ್ತೆ ಗೃಹ, ವಾಹನ ಸಾಲ ಮೇಲಕ್ಕೆ?ರೆಪೋದರ ಏರಿಕೆ ನಿರೀಕ್ಷೆ, ಮತ್ತೆ ಗೃಹ, ವಾಹನ ಸಾಲ ಮೇಲಕ್ಕೆ?

ಭಾರತೀಯ ರಿಸರ್ವ್ ಬ್ಯಾಂಕ್ ಜೂನ್ 6 ರಂದು ರೆಪೋ ದರವನ್ನು 0.25 ರಷ್ಟು ಏರಿಸುವ ಮೂಲಕ ಶೇ. 6.25ಕ್ಕೆ ಏರಿಕೆ ಮಾಡಿತ್ತು. ಆರ್.ಬಿ.ಐ. ನ ಈ ರೆಪೋ ದರ ಏರಿಕೆಯೇ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ, ಉಳಿದ ಬ್ಯಾಂಕ್‌ಗಳ ಬಡ್ಡಿ ದರವನ್ನು ಏರಿಸಲು ಕಾರಣವಾಗಿದೆ. ಇದೀಗ 75 ಲಕ್ಷರೂ ಗೂ ಹೆಚ್ಚಿನ ಸಾಲದ ಬಡ್ಡಿದರ ಶೇ.9.05ರಷ್ಟು ಆಗಲಿದೆ.

English summary
Including State Bank of India many public and private sector banks have increased rate of interest on home loans and other segment with effect from September 31.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X