ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಜನಶಕ್ತಿ ಸಂಸದ ಪ್ರಿನ್ಸ್‌ ರಾಜ್‌ಗೆ ನಿರೀಕ್ಷಣಾ ಜಾಮೀನು ನೀಡಿದ ದೆಹಲಿ ನ್ಯಾಯಾಲಯ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 26: ಲೋಕ ಜನಶಕ್ತಿ ಪಕ್ಷದ (ಎಲ್‌ಪಿಜಿ) ಮುಖಂಡ ಚಿರಾಗ್ ಪಾಸ್ವಾನ್ ಕಸಿನ್, ಪಕ್ಷದ ಸಂಸದ ಪ್ರಿನ್ಸ್‌ ರಾಜ್‌ ಅವರಿಗೆ ಅತ್ಯಾಚಾರ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಸಿಕ್ಕಿದೆ.

ಬಿಹಾರದ ಸಮಸ್ಟಿಪುರ ಕ್ಷೇತ್ರದ ಸಂಸದ ಪ್ರಿನ್ಸ್ ಪಾಸ್ವಾನ್ ಅವರಿಗೆ ಅಪರಾಧ ಹಿನ್ನೆಲೆ ಇಲ್ಲ ಎಂಬುದನ್ನು ಪರಿಗಣಿಸಿ, ದೆಹಲಿ ವಿಶೇಷ ನ್ಯಾಯಾಲಯವು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಈ ಪ್ರಕರಣದಲ್ಲಿ ಪ್ರಿನ್ಸ್ ರಕ್ಷಣೆಗೆ ಮುಂದಾಗಿದ್ದರಿಂದ ಚಿರಾಗ್ ವಿರುದ್ಧವೂ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಎಫ್ಐಆರ್ ಹಾಕಿದ್ದಾರೆ.

LJP MP Prince Raj gets anticipatory bail in rape case

ಜಾಮೀನು ನೀಡುವ ವೇಳೆ ವಿಶೇಷ ನ್ಯಾಯಾಧೀಶ ವಿಕಾಸ್‌ ಧುಲ್‌, ಅವರು ಸಂಸದರಾಗಿರುವುದರಿಂದ ಸಮಾಜದೊಂದಿಗೆ ಆಳವಾದ ಸಂಬಂಧವನ್ನು ಹೊಂದಿದ್ದು ನ್ಯಾಯಿಕ ವ್ಯಾಪ್ತಿಯಿಂದ ತಪ್ಪಿಸಿಕೊಳ್ಳುವ ಸಾಧ್ಯತೆ ಕಡಿಮೆ ಎಂದು ಅಭಿಪ್ರಾಯಪಟ್ಟರು.

ದೂರುದಾರೆಯು ಸಂಸದರ ವಿರುದ್ಧ ಎಫ್‌ಐಆರ್‌ ದಾಖಲಿಸಲು ಅಸಹಜವೆನಿಸುವಷ್ಟು ವಿಳಂಬ ಮಾಡಿರುವುದನ್ನು ಸಹ ನ್ಯಾಯಾಲಯವು ಗಣನೆಗೆ ತೆಗೆದುಕೊಂಡಿತು. ಈ ಹಿನ್ನೆಲೆಯಲ್ಲಿ ಅರ್ಜಿದಾರ ಸಂಸದರನ್ನು ದೂರುದಾರೆಯು ಸುಳ್ಳು ಆರೋಪದಲ್ಲಿ ಸಿಲುಕಿಸಲು ಪ್ರಯತ್ನಿಸಿರಬಹುದಾದ ಸಾಧ್ಯತೆಯನ್ನು ಅಲ್ಲಗಳೆಯಲಾಗದು ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿತು. ಸಂಸದರು ದೂರುದಾರೆಯ ವಿರುದ್ಧ ಮೊದಲು ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ದೂರುದಾರೆಯು ಸಂಸದರ ವಿರುದ್ಧ ಪ್ರತಿದೂರು ದಾಖಲಿಸಿ ಅವರ ಮೇಲೆ ಒತ್ತಡ ಹೇರಲು ಪ್ರಯತ್ನಿಸಿರಬಹುದಾದ ಸಾಧ್ಯತೆಯನ್ನೂ ನ್ಯಾಯಾಲಯವು ಪರಿಗಣಿಸಿದೆ.

ದೆಹಲಿಯಲ್ಲಿ ಪ್ರಿನ್ಸ್‌ ರಾಜ್‌ ವಿರುದ್ಧ ಜೂನ್ ತಿಂಗಳಲ್ಲಿ ಅತ್ಯಾಚಾರ ಎಸಗಿದ ಆರೋಪ ಹೊರೆಸಿ ಪಕ್ಷದ ಕಾರ್ಯಕರ್ತೆಯೊಬ್ಬರು ದೂರು ನೀಡಿದ್ದರು. ಮಹಿಳೆಯು ನೀಡಿದ ಮೂರು ಪುಟಗಳ ದೂರನ್ನು ಕೊನಟ್ ಪ್ಲೇಸ್ (Connaught) ಪೊಲೀಸ್ ಠಾಣೆಯಲ್ಲಿ ಸ್ವೀಕರಿಸಲಾಗಿತ್ತು. ನಶೆ ಏರುವ ಔಷಧಿ ಹಾಕಿದ ಪಾನೀಯ ಕುಡಿಸಿ ತಮ್ಮ ಮೇಲೆ ಅತ್ಯಾಚಾರ ನಡೆಸಿದರು ಎಂದು ಸಮಸ್ಟಿಪುರ್ ಸಂಸದ ಪ್ರಿನ್ಸ್‌ ರಾಜ್ ವಿರುದ್ಧ ದೂರು ಕೊಡಲಾಗಿತ್ತು.

ಸಂಸದ ಪ್ರಿನ್ಸ್ ವಿರುದ್ಧ ಒಂದು ತಿಂಗಳಾದರೂ ಯಾವುದೇ ತನಿಖೆ, ವಿಚಾರಣೆ ನಡೆಸದ ಕಾರಣ ನ್ಯಾಯಕ್ಕಾಗಿ ಸಂತ್ರಸ್ತ ಮಹಿಳೆ ನ್ಯಾಯಾಲಯದ ಮೊರೆ ಹೊಕ್ಕಿದ್ದರು. ಮನವಿ ಸ್ವೀಕರಿಸಿದ ದೆಹಲಿ ಕೋರ್ಟ್ ಸೆಪ್ಟೆಂಬರ್ 9ರಂದು ಈ ಬಗ್ಗೆ ಕ್ರಮ ಜರುಗಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿತ್ತು. ಇದರ ಬೆನ್ನಲ್ಲೇ ನಿರೀಕ್ಷಣಾ ಜಾಮೀನು ಕೋರಿ ಪ್ರಿನ್ಸ್ ಅವರು ದೆಹಲಿ ವಿಶೇಷ ನ್ಯಾಯಾಲಯದಲ್ಲಿ ಅರ್ಜಿ ಹಾಕಿದ್ದರು.

''ಪ್ರಿನ್ಸ್ ಹಾಗೂ ಚಿರಾಗ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಎಫ್ಐಆರ್ ಹಾಕಲಾಗಿದೆ, ಮೇ ತಿಂಗಳಲ್ಲಿ ದೂರು ದಾಖಲಿಸಲಾಗಿತ್ತು. ಸೆಪ್ಟೆಂಬರ್ 9ರಂದು ಕೋರ್ಟ್ ನಿರ್ದೇಶನದಂತೆ ದೆಹಲಿ ಪೊಲೀಸರು ಕ್ರಮ ಜರುಗಿಸಿದ್ದಾರೆ'' ಎಂದು ಮಹಿಳೆ ಪರ ವಕೀಲರಾದ ಸುದೇಶ್ ಕುಮಾರಿ ಜೆಥ್ವಾ ಹೇಳಿದ್ದಾರೆ.

''ಪಕ್ಷದ ಕಾರ್ಯಕರ್ತೆಯಾಗಿದ್ದ ಮಹಿಳೆಯು ಒಂದು ಪಾರ್ಟಿಯಲ್ಲಿ ಪ್ರಿನ್ಸ್ ರನ್ನು ಭೇಟಿ ಮಾಡಿದ್ದರು. ಮಹಿಳೆಗೆ ಕುಡಿಯಲು ಪಾನೀಯ ಕೊಟ್ಟಿದ್ದ ಪ್ರಿನ್ಸ್ ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ. ಆಕೆಗೆ ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಎಸಗಲಾಗಿದೆ. ಆಕೆಗೆ ಎಚ್ಚರವಾದಾಗ ಪ್ರಿನ್ಸ್ ಭುಜದ ಮೇಲೆ ಆಕೆ ತಲೆ ಇತ್ತು. ನಿನಗೆ ಪ್ರಜ್ಞೆ ತಪ್ಪಿತ್ತು, ಅರೈಕೆ ಮಾಡಿದೆ ಎಂದು ಪ್ರಿನ್ಸ್ ಆಕೆಯನ್ನು ಸಂತೈಸಲು ಯತ್ನಿಸಿದ್ದಾರೆ. ಆದರೆ, ಆಕೆ ಪದೇ ಪದೇ ಏನು ನಡೆಯಿತು ಎಂದು ಪ್ರಶ್ನಿಸಿದಾಗ, ವಿಡಿಯೋ ತೋರಿಸಿ ಹೆದರಿಸಲಾಗಿದೆ, ಮದುವೆಯಾಗುವುದಾಗಿ ನಂಬಿಸಿ ನಂತರ ಕೈಕೊಟ್ಟಿದ್ದಾರೆ'' ಎಂದು ಘಟನೆ ಬಗ್ಗೆ ವಕೀಲರು ವಿವರಿಸಿದ್ದಾರೆ.

ಆರೋಪ ಅಲ್ಲಗೆಳೆದ ಪ್ರಿನ್ಸ್ ನನ್ನ ಮೇಲಿನ ಆರೋಪಗಳು ಸತ್ಯಕ್ಕೆ ದೂರವಾಗಿದ್ದು, ಸುಳ್ಳು ಸುದ್ದಿ ಹಬ್ಬಿಸಿ ನನ್ನ ರಾಜಕೀಯ ಬದುಕಿಗೆ ಕಳಂಕ ತರಲು ಯತ್ನಿಸಲಾಗುತ್ತಿದೆ, ಇದು ದೊಡ್ಡ ಮಟ್ಟದ ಷಡ್ಯಂತ್ರವಾಗಿದೆ, ವೈಯಕ್ತಿಕವಾಗಿ ಹಾಗೂ ರಾಜಕೀಯ ಮಟ್ಟದಲ್ಲೂ ನನಗೆ ಹಾನಿಯುಂಟು ಮಾಡಲು ಯತ್ನಿಸಲಾಗಿದೆ ಎಂದು ಸಂಸದ ಪ್ರಿನ್ಸ್ ಸ್ಪಷ್ಟಪಡಿಸಿದ್ದರು. ಆ ಮಹಿಳೆ ಈ ಹಿಂದೆ ಕೂಡಾ ಇದೇ ರೀತಿ ಆರೋಪ ಮಾಡಿದ್ದರು. ಆಕೆ ವಿರುದ್ಧ ಫೆಬ್ರವರಿ ತಿಂಗಳಲ್ಲಿ ದೂರು ನೀಡಿದ್ದೆ, ಆಕೆ ವಿರುದ್ಧವೇ ಸುಳ್ಳು ಆರೋಪ ಹೊರೆಸಿದ್ದಕ್ಕೆ ಎಫ್ಐಆರ್ ಹಾಕಲಾಗಿದೆ ಎಂದಿದ್ದಾರೆ.

English summary
A Delhi court granted anticipatory bail to Lok Janshakti Party MP Prince Raj on Saturday. Raj had had sought protection from arrest in a rape case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X