• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದೆಹಲಿಯ ಪ್ರಸಿದ್ಧ ಸಸ್ಯಾಹಾರಿ ರೆಸ್ಟೋರೆಂಟ್‌ನ ಸಾಂಬಾರಿನಲ್ಲಿ ಸಿಕ್ತು ಹಲ್ಲಿ

|

ನವದೆಹಲಿ, ಆಗಸ್ಟ್ 03: ಲಾಕ್‌ಡೌನ್ ಮುಗಿದು ಹೋಟೆಲ್‌, ರೆಸ್ಟೋರೆಂಟ್‌ಗಳು ತೆರೆದ ಬಳಿಕ ಮೊದಲ ಬಾರಿಗೆ ಮಸಾಲೆ ದೋಸೆ ಸವಿಯಲು ಶರವಣ ಭವನ ರೆಸ್ಟೋರೆಂಟ್‌ಗೆ ತೆರಳಿದ್ದ ಸ್ನೇಹಿತರು ಬೇಸರದಿಂದ ವಾಪಸಾಗಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

ವೀಕೆಂಡ್ ಮಸ್ತಿಗೆಂದು ಪಂಕಜ್ ಅಗರ್‌ವಾಲ್ ಎಂಬುವವರು ತಮ್ಮ ಸ್ನೇಹಿತರ ಜೊತೆ ನಗರದ ಹೋಟೆಲ್‌ಗೆ ಭೇಟಿ ನೀಡಿದ್ದರು.

ಬಿಸಿ ಬಿಸಿ ದೋಸೆ ಬಂದ ಕೂಡಲೇ ರುಚಿಯಾದ ಸಾಂಬಾರ್‌ನಲ್ಲಿ ಅದ್ದಿ ಬಾಯಿಗೆ ಇಟ್ಟು ವಾವ್ ಎನ್ನಬೇಕು ಎಂದು ಹೊರಟಿದ್ದರು. ಅಷ್ಟರೊಳಗೆ ಬಾಯಲ್ಲಿ ರಬ್ಬರಿನಂತಹ ಪದಾರ್ಥ ಸಿಕ್ಕಿದಂತೆ ಭಾಸವಾಗಿತ್ತು. ಸಾಂಬಾರ್‌ನಲ್ಲಿರೋ ಪದಾರ್ಥ ವಿರಬೇಕು ಎಂದು ಬಾಯಿಂದ ತೆಗೆದಾಗಲೇ ಗೊತ್ತಾಗಿದ್ದು ಅದು ಸತ್ತ ಹಲ್ಲಿ ಎಂದು.

ಆದರೆ ಅದರಲ್ಲಿ ಹಲ್ಲಿಯ ಅರ್ಥ ಭಾಗ ಮಾತ್ರ ಇತ್ತು, ಇನ್ನರ್ಧ ಎಲ್ಲಿ ಎಂದು ಹುಡುಕಾಡಿದರೂ ಸಿಗಲಿಲ್ಲ, ಬಳಿಕ ಸಿಬ್ಬಂದಿಯ ಮೇಲೆ ಕೂಗಾಡಿ , ಘಟನೆಯ ವಿಡಿಯೋವನ್ನು ಕೂಡ ಮಾಡಿದ್ದಾರೆ.

ಪಂಕಜ್ ಅಗರ್ ವಾಲ್ ಹೋಟೆಲ್ ನ ಮೆನು, ದೋಸೆ ಹಾಗೂ ಸತ್ತ ಹಲ್ಲಿಯ ಫೋಟೋ, ವಿಡಿಯೋಗಳನ್ನು ಟ್ವಿಟ್ಟರ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ. ಅಲ್ಲದೆ, ಗ್ರಾಹಕರ ಜೀವವನ್ನೂ ಲೆಕ್ಕಿಸದೆ , ಸ್ವಚ್ಛತೆಯಿಲ್ಲದೆ ಬೇಕಾಬಿಟ್ಟಿ ಊಟ-ತಿಂಡಿ ಸಪ್ಲೈ ಮಾಡುತ್ತಿರುವ ಆರೋಪದಲ್ಲಿ ಶರವಣ ಭವನದ ವಿರುದ್ಧ ಪೊಲೀಸರಿಗೆ ದೂರನ್ನೂ ಕೂಡ ನೀಡಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.

English summary
A Man Who had gone to dine in at one of Delhi's top restaurants, Saravana Bhavan, was left shocked after he found a dead lizard in his bowl of sambar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X