ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಟಲ್ ಬಿಹಾರಿ ವಾಜಪೇಯಿ ಇನ್ನಿಲ್ಲ: ಖಚಿತ ಪಡಿಸಿದ ಏಮ್ಸ್ ಆಸ್ಪತ್ರೆ

|
Google Oneindia Kannada News

Recommended Video

      ವಾಜಪೇಯಿ ಆರೋಗ್ಯ ಸ್ಥಿತಿ ಗಂಭೀರ..! | Oneindia Kannada

      ನವದೆಹಲಿ, ಆಗಸ್ಟ್ 16: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ(25.12.1924-16.08.2018) ಇಹಲೋಕ ತ್ಯಜಿಸಿದ್ದಾರೆ.

      ಬಹಳ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕೊನೆಯುಸಿರೆಳೆದಿದ್ದಾರೆ ಎಂದು ದೆಹಲಿಯ ಏಮ್ಸ್ ವೈದ್ಯರು ಬಿಡುಗಡೆ ಮಾಡಿದ ಅಧಿಕೃತ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

      ಮೂತ್ರಪಿಂಡ ಸೋಂಕಿನ ಸಮಸ್ಯೆಯಿಂದ ಜೂನ್ 11 ರಂದು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ವಾಜಪೇಯಿ ಅವರ ಆರೋಗ್ಯ ನಿನ್ನೆಯಿಂದ ಮತ್ತಷ್ಟು ಬಿಗಡಾಯಿಸಿತ್ತು. ಅವರಿಗೆ ಜೀವರಕ್ಷಕಗಳನ್ನು ಒದಗಿಸಲಾಗಿತ್ತು. ಆದರೆ ಯಾವುದೇ ಚಿಕಿತ್ಸೆಗೆ ಅವರು ಸ್ಪಂದಿಸದ ಕಾರಣ ಇಂದು ಸಂಜೆ 5:05 ಕ್ಕೆ ಕೊನೆಯುಸಿರೆಳೆದಿದ್ದಾರೆ.

      ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರ

      Former prime minister Atal Bihari Vajpayee passes away

      ಏಮ್ಸ್ ಆಸ್ಪತ್ರೆಯು ಮಾಜಿ ಪ್ರಧಾನಿಗಳ ಆರೋಗ್ಯ ವಿಚಾರಿಸಲು ಇಂದು ಬೆಳಗ್ಗಿನಿಂದಲೇ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸೇರಿದಂತೆ ದೇಶದ ವಿವಿಧ ಗಣ್ಯರು ತೆರಳಿದ್ದರು.
      ಇಡೀ ದೇಶವೂ ಅವರ ಆರೋಗ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸಿತ್ತು. ಆದರೆ ಯಾರ ಪ್ರಾರ್ಥನೆಯೂ ಫಲಕಾರಿಯಾಗದೆ ವಾಜಪೇಯಿ ಅವರು ಇಹಲೋಕ ತ್ಯಜಿಸಿದ್ದಾರೆ

      Former PM Atal Bihari Vajpayees health condition is very critical: LIVE UPDATES

      ವಾಜಪೇಯಿ ಅವರ ಆರೋಗ್ಯಕ್ಕೆ ಮತ್ತು ಅಗಲಿಕೆಗೆ ಸಂಬಂಧಿಸಿದಂತೆ ಬೆಳಗ್ಗೆಯಿಂದ ನಡೆದ ಬೆಳವಣಿಗೆಗಳ ಮಾಹಿತಿ ಇಲ್ಲಿದೆ

      Newest FirstOldest First
      6:46 PM, 16 Aug

      ಯಮುನಾ ನದಿ ತಟದ ರಾಷ್ಟ್ರೀಯ ಸ್ಮೃತಿ ಸ್ಥಳದಲ್ಲಿ ನಾಳೆ ಸಂಜೆ 5 ಗಂಟೆಗೆ ಅಂತ್ಯ ಸಂಸ್ಕಾರ ಸಾಧ್ಯತೆ
      6:45 PM, 16 Aug

      ಇಂದು 7 ಗಂಟೆಗೆ ಕೃಷ್ಣ ಮೆನನ್ ರಸ್ತೆಯಲ್ಲಿರುವ ವಾಜಪೇಯಿ ನಿವಾಸಕ್ಕೆ ಪಾರ್ಥಿವ ಶರೀರ ರವಾನೆ.
      5:46 PM, 16 Aug

      ಸಂಜೆ 5:05 ಕ್ಕೆ ಅವರು ಅಸ್ತಂಗತರಾಗಿದ್ದಾರೆಂದು ಏಮ್ಸ್ ವೈದ್ಯರು ಅಧಿಕೃತ ಪ್ರಕಟಣೆಯಲ್ಲಿ ಖಚಿತಪಡಿಸಿದ್ದಾರೆ.
      5:29 PM, 16 Aug

      ಏಮ್ಸ್ ಆಸ್ಪತ್ರೆಗೆ ಧಾವಿಸಿದ ಬಿಎಸ್ಪಿ ನಾಯಕಿ ಮಾಯಾವತಿ
      5:27 PM, 16 Aug

      ಏಮ್ಸ್ ಆಸ್ಪತ್ರೆಗೆ ಆಗಮಿಸಿದ ಛತ್ತೀಸ್ ಗಢ ಮುಖ್ಯಮಂತ್ರಿ ರಮಣ್ ಸಿಂಗ್
      5:20 PM, 16 Aug

      ಏಮ್ಸ್ ಗೆ ಆಗಮಿಸಿದ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್
      5:15 PM, 16 Aug

      ವಾಜಪೇಯಿ ಆರೋಗ್ಯಕ್ಕಾಗಿ ದೇಶದಾದ್ಯಂತ ಅಭಿಮಾನಿಗಳ ಪ್ರಾರ್ಥನೆ.
      Advertisement
      4:56 PM, 16 Aug

      'ಛತ್ತೀಸ್ ಗಢ ಮತ್ತು ಇಡೀ ದೇಶವೂ ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಿದೆ. ಅವರು ಬೇಗ ಗುಣಮುಖರಾಗಲಿ, ದೀರ್ಘಾಯುವಾಗಲಿ'- ರಮಣ್ ಸಿಂಗ್, ಛತ್ತೀಸ್ ಗಢ ಮುಖ್ಯಮಂತ್ರಿ
      4:53 PM, 16 Aug

      ಏಮ್ಸ್ ಆಸ್ಪತ್ರೆಗೆ ಆಗಮಿಸಿದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಉಪಮುಖ್ಯಮಂತ್ರಿ ಸುಶೀಲ್ ಮೋದಿ.
      4:19 PM, 16 Aug

      ಏಮ್ಸ್ ಆಸ್ಪತ್ರೆಗೆ ಆಗಮಿಸಿದ ನೊಬೆಲ್ ಪ್ರಶಸ್ತಿ ವಿಜೇತ ಕೈಲಾಶ್ ಸತ್ಯಾರ್ಥಿ
      3:47 PM, 16 Aug

      ಏಮ್ಸ್ ಆಸ್ಪತ್ರೆಗೆ ಆಗಮಿಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ
      3:44 PM, 16 Aug

      ಏಮ್ಸ್ ಆಸ್ಪತ್ರೆಯಿಂಡ ನಿರ್ಗಮಿಸಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ.
      Advertisement
      3:11 PM, 16 Aug

      ವಾಜಪೇಯಿ ಅವರು ಆಸ್ಪತ್ರೆಯಲ್ಲಿದ್ದಾರೆ. ಅವರು ಬೇಗ ಗುಣಮುಖರಾಗಲಿ ಎಂದು ನಾವು ಪ್ರಾರ್ಥಿಸುತ್ತೇವೆ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ
      3:03 PM, 16 Aug

      ವಾಜಪೇಯಿ ಅವರ ಆರೋಗ್ಯ ತೀರಾ ಹದಗೆಟ್ಟಿದ್ದು, ಇನ್ನು ಕೆಲವೇ ಕ್ಷಣಗಳಲ್ಲಿ ಏಮ್ಸ್ ಆಸ್ಪತ್ರೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಲಿದೆ.
      2:51 PM, 16 Aug

      ಭದ್ರತಾ ದೃಷ್ಟಿಯಿಂದ ಏಮ್ಸ್ ಆಸ್ಪತ್ರೆಯಲ್ಲಿರುವ ಎಲ್ಲಾ ಸಿಸಿಟಿವಿ ಕ್ಯಾಮರಾಗಳನ್ನೂ ಸ್ಥಗಿತಗೊಳಿಸಲಾಗಿದೆ
      2:49 PM, 16 Aug

      ಏಮ್ಸ್ ಆಸ್ಪತ್ರೆಯಿಂದ ಹೊರಟ ಪ್ರಧಾನಿ ನರೇಂದ್ರ ಮೋದಿ
      2:32 PM, 16 Aug

      ದೆಹಲಿಯ ಏಮ್ಸ್ ನಿರ್ದೇಶಕರೊಂದಿಗೆ ಚರ್ಚೆ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ
      2:27 PM, 16 Aug

      ವಾಜಪೇಯಿ ಅವರ ದೆಹಲಿ ನಿವಾಸಕ್ಕೆ ಆಗಮಿಸಿದ ಕೇಂದ್ರ ಸಚಿವರು
      2:22 PM, 16 Aug

      ನಮಿತಾ ಭಟ್ಟಾಚಾರ್ಯ ಎಂಬ ಹೆಣ್ಣು ಮಗುವನ್ನು ದತ್ತು ತೆಗೆದುಕೊಂಡಿದ್ದ ವಾಜಪೇಯಿ.
      2:12 PM, 16 Aug

      ಅಟಲ್ ಬಿಹಾರಿ ವಾಜಪೇಯಿ ಅವರನ್ನು ಭೇಟಿ ಮಾಡುವ ಸಲುವಾಗಿ ನಾನಿಂದು ನನ್ನ ಎಲ್ಲಾ ಕೆಲಸವನ್ನೂ ರದ್ದುಮಾಡಿದ್ದೇನೆ. ಅವರೊಬ್ಬ ಮುತ್ಸದ್ಧಿ. ಅವರ ಸರ್ಕಾರ ಬೀಳುವ ಸಮಯದಲ್ಲಿ ನಾವು ಅವರಿಗೆ ಬೆಂಬಲ ನೀಡಿದ್ದೆವು. ಅವರ ಕೆಲಸದ ಶೈಲಿಯೇ ವಿಭಿನ್ನ. ಈಗಿನ ರಾಜಕಾರಣದಂಥಲ್ಲ- ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ
      2:01 PM, 16 Aug

      ಏಮ್ಸ್ ಆಸ್ಪತ್ರೆಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ
      1:40 PM, 16 Aug

      ಮಧ್ಯಾಹ್ನ 2 ಗಂಟೆಗೆ ಏಮ್ಸ್ ಗೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ
      1:28 PM, 16 Aug

      "ಅವರ ಕ್ಯಾಬಿನೆಟ್ ನಲ್ಲಿ ನಾನು ಎರಡು ವರ್ಷಗಳ ಕಾಲ ಕೆಲಸ ಮಾಡಿದ್ದೇನೆ. ಅವರ ಅನಾರೋಗ್ಯದ ಬಗ್ಗೆ ಕೇಳಿದರೆ ತೀರಾ ನೋವಾಗುತ್ತದೆ. ಅವರೊಬ್ಬ ಮಹಾನ್ ನಾಯಕ ಮತ್ತು ಅವರ ಜೊತೆ ಕೆಲಸ ಮಾಡುವುದು ಅತ್ಯುತ್ತಮ ಅನುಭವ. ಅವರನ್ನು ಭೇಟಿಯಾಗಲು ನಾನಿಂದು ದೆಹಲಿಗೆ ತೆರಳುತ್ತೇನೆ"- ನವೀನ್ ಪಟ್ನಾಯಕ್, ಒಡಿಶಾ ಮುಖ್ಯಮಂತ್ರಿ
      1:15 PM, 16 Aug

      ನಾಳೆ ದೆಹಲಿಗೆ ತೆರಳಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆರೋಗ್ಯ ವಿಚಾರಿಸಲಿರುವ ಕರ್ನಾಟಕ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ
      1:03 PM, 16 Aug

      ಇನ್ನು ಕೆಲವೇ ಕ್ಷಣಗಳಲ್ಲಿ ಏಮ್ಸ್ ಆಸ್ಪತ್ರೆಯಿಂದ ಮತ್ತೊಂದು ಹೆಲ್ತ್ ಬುಲೆಟಿನ್ ಬಿಡುಗಡೆ.
      12:31 PM, 16 Aug

      ಅಟಲ್ ಬಿಹಾರಿ ವಾಜಪೇಯಿ ಅವರು ತೀರಿಹೋಗಿದ್ದಾರೆಂದು ಟ್ವೀಟ್ ಮಾಡಿ ಪ್ರಮಾದ ಎಸಗಿದ ತ್ರಿಪುರ ರಾಜ್ಯಪಾಲ ತಥಾಗತ ರಾಯ್. ನಂತರ ಟ್ವೀಟ್ ಅನ್ನು ಡಿಲೀಟ್ ಮಾಡಿ ಕ್ಷಮೆ ಯಾಚಿಸಿದ ರಾಯ್. 'ಖಾಸಗಿ ಟಿವಿ ಚಾನೆಲ್ ವೊಂದರಲ್ಲಿ ಈ ಸುದ್ದಿಯನ್ನು ನೋಡಿ, ನಿಖರ ಮಾಹಿತಿ ಎಂದು ಟ್ವೀಟ್ ಮಾಡಿದೆ'- ತಥಾಗತ ರಾಯ್
      12:27 PM, 16 Aug

      ಮಾಜಿ ಪ್ರಧಾನಿ ವಾಜಪೇಯಿ ಅವರ ಅನಾರೋಗ್ಯ ಬಗ್ಗೆ ಕೇಳಿ ತೀವ್ರ ನೋವಾಯಿತು. ಅವರಿಗೆ ಮತ್ತು ಅವರ ಕುಟುಂಬಕ್ಕೆ ನನ್ನ ಪ್ರಾರ್ಥನೆಗಳು. ನಾವಿಬ್ಬರೂ ಭೇಟಿಯಾದಾಗ ಅವರು ನನ್ನ ಮೇಲೆ ತೋರುತ್ತಿದ್ದ ಪ್ರೀತಿ, ಅಕ್ಕರೆಯನ್ನು ನಾನೆಂದಿಗೂ ಮರೆಯಲಾರೆ: ಮೆಹಬೂಬಾ ಮುಫ್ತಿ, ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ
      12:11 PM, 16 Aug

      ವಾಜಪೇಯಿ ಅವರ ಅನಾರೋಗ್ಯದ ಹಿನ್ನೆಲೆಯಲ್ಲಿ ತಮ್ಮ ಜನ್ಮದಿನಾಚರಣೆ(ಆ.16)ಯನ್ನು ರದ್ದುಗೊಳಿಸಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್. ಆಸ್ಪತ್ರೆಗೆ ಭೇಟಿ ನೀಡಿದ ಕೇಜ್ರಿವಾಲ್.
      12:08 PM, 16 Aug

      ಲಕ್ನೋದ ಎನ್ ಡಿ ಕಾನ್ವೆಂಟ್ ಪಬ್ಲಿಕ್ ಶಾಲೆಯಲ್ಲಿ ವಾಜಪೇಯಿ ಅವರ ಆರೋಗ್ಯಕ್ಕಾಗಿ ಪ್ರಾರ್ಥನೆ
      12:06 PM, 16 Aug

      ದೆಹಲಿಯ ಕೃಷ್ಣ ಮೆನನ್ ರಸ್ತೆಯಲ್ಲಿರುವ ವಾಜಪೇಯಿ ಅವರ ನಿವಾಸಕ್ಕೆ ಬಿಗಿ ಭದ್ರತೆ
      READ MORE

      English summary
      Former prime minister Atal Bihari Vajpayee's health condition is very critical, he is on life support system now. Delhi's AIIMs Hospital dictors told.
      ತಾಜಾ ಸುದ್ದಿ ತಕ್ಷಣ ಪಡೆಯಿರಿ
      Enable
      x
      Notification Settings X
      Time Settings
      Done
      Clear Notification X
      Do you want to clear all the notifications from your inbox?
      Settings X