ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download
LIVE

DK Shivakumar Bail LIVE Updates: ಡಿಕೆಶಿಗೆ ಜಾಮೀನಿಲ್ಲ, ಸೆ 17 ರ ವರೆಗೆ ಇಡಿ ವಶಕ್ಕೆ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 13: ಮಾಜಿ ಸಚಿವ, ಕಾಂಗ್ರೆಸ್‌ ಮುಖಂಡ ಡಿ. ಕೆ. ಶಿವಕುಮಾರ್ ಇಡಿ ಬಂಧನಕ್ಕೆ ಒಳಗಾಗಿ ಇಂದಿಗೆ 11 ದಿನಗಳಾಗಿವೆ. ಇಂದಿಗೆ ಇಡಿ ಕಸ್ಟಡಿ ಅಂತ್ಯವಾಗಿದ್ದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆ.

ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ನಾಲ್ಕು ದಿನ ವಿಚಾರಣೆ ಬಳಿಕ ಸೆಪ್ಟೆಂಬರ್ 03 ರಂದು ಡಿ. ಕೆ. ಶಿವಕುಮಾರ್ ಅವರನ್ನು ಬಂಧಿಸಿದ್ದರು. ಅವರನ್ನು ಸೆಪ್ಟೆಂಬರ್ 13 ರ ವರೆಗೆ ಇಡಿ ವಶಕ್ಕೆ ನೀಡಿಲಾಗಿತ್ತು. ಹಾಗಾಗಿ ಇಂದು ಅವರನ್ನು ಇಡಿ ವಿಶೇಷ ನ್ಯಾಯಾಲಯಕ್ಕೆ ಅವರನ್ನು ಹಾಜರುಪಡಿಸಲಾಗುತ್ತಿದೆ.

ಡಿ. ಕೆ. ಶಿವಕುಮಾರ್ ಇಡಿ ಕಸ್ಟಡಿ ಅಂತ್ಯ; ಮುಂದಿರುವ 4 ಆಯ್ಕೆಡಿ. ಕೆ. ಶಿವಕುಮಾರ್ ಇಡಿ ಕಸ್ಟಡಿ ಅಂತ್ಯ; ಮುಂದಿರುವ 4 ಆಯ್ಕೆ

LIVE Updates: DK Shivakumar ED Arrest, Bail Possibility

ಡಿ. ಕೆ. ಶಿವಕುಮಾರ್ ಅವರ ಪರ ವಕೀಲರು ಜಾಮೀನಿಗಾಗಿ ಅರ್ಜಿ ಹೂಡಿದ್ದು, ಡಿ. ಕೆ. ಶಿವಕುಮಾರ್ ಅವರಿಗೆ ಜಾಮೀನು ನೀಡಲಾಗುತ್ತದೆಯೋ ಅಥವಾ ಅವರನ್ನು ಮತ್ತೆ ಇಡಿ ವಶಕ್ಕೆ ನೀಡಲಾಗುತ್ತದೆಯೋ ಅಥವಾ ನ್ಯಾಯಾಂಗ ಬಂಧನ ಹೇರಿ ಜೈಲಿಗೆ ಕಳುಹಿಸಲಾಗುತ್ತದೆಯೋ ಕೆಲವೇ ಗಂಟೆಗಳಲ್ಲಿ ಗೊತ್ತಾಗಲಿದೆ.

Newest FirstOldest First
6:08 PM, 13 Sep

ಡಿ.ಕೆ.ಶಿವಕುಮಾರ್ ಅವರ ಜಾಮೀನು ಅರ್ಜಿಗೆ ಆಕ್ಷೇಪಣೆಯನ್ನು ಇಡಿ ಸೋಮವಾರ ಸಲ್ಲಿಸಲಿದ್ದು, ಸೋಮವಾರ ಈ ಬಗ್ಗೆ ವಿಚಾರಣೆ ನಡೆಯಲಿದೆ.
6:07 PM, 13 Sep

ಮೊದಲಿಗೆ ಡಿ.ಕೆ.ಶಿವಕುಮಾರ್ ಅವರಿಗೆ ಸೂಕ್ತ ವೈದ್ಯಕೀಯ ಸವಲತ್ತು ನೀಡಿ ಆ ನಂತರ ಅವರನ್ನು ಪ್ರಶ್ನೆ ಮಾಡಿ ಎಂದು ಇಡಿಗೆ ನ್ಯಾಯಾಧೀಶರು ಸೂಚನೆ ನೀಡಿದ್ದಾರೆ.
6:06 PM, 13 Sep

ಡಿ.ಕೆ.ಶಿವಕುಮಾರ್ ಅವರನ್ನು ಸೆಪ್ಟೆಂಬರ್ 17 ರ ವರೆಗೆ ಇಡಿ ವಶಕ್ಕೆ ನೀಡಿ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ರಾಹುಲ್ ಕುಹರ್ ಆದೇಶ ನೀಡಿದ್ದಾರೆ.
5:12 PM, 13 Sep

ವಾದ ವಿವಾದ ಆಲಿಸಿದ ನ್ಯಾಯಾಧೀಶ ರಾಹುಲ್ ಕುಹರ್ ಅವರು ಆದೇಶವನ್ನು ಕಾಯ್ದಿರಿಸಿ ನ್ಯಾಯಾಲಯದಿಂದ ಹೊರಹೋಗಿದ್ದಾರೆ. ಕೆಲ ನಿಮಿಷದ ಬಳಿಕ, ಡಿ.ಕೆ.ಶಿವಕುಮಾರ್ ಅವರನ್ನು ಇಡಿ ವಶಕ್ಕೆ ನೀಡುವುದೋ ಅಥವಾ ನ್ಯಾಯಾಂಗ ಬಂಧನಕ್ಕೆ ಒಳಪಡಿಸುವುದೋ ಆದೇಶ ನೀಡುತ್ತಾರೆ.
5:12 PM, 13 Sep

ಡಿಕೆಶಿ ಅವರ ಪರವಾಗಿ ಸಲ್ಲಿಸಲಾಗಿದ್ದ ಜಾಮೀನು ಅರ್ಜಿಗೆ ಇಡಿ ಆಕ್ಷೇಪಣೆ ಸಲ್ಲಿಸದೇ ಇದ್ದದರ ಬಗ್ಗೆ ಸಿಂಘ್ವಿ ನ್ಯಾಯಾಲಯದ ಗಮನ ಸೆಳೆದರು. ಸೋಮವಾರದಂದು ಆಕ್ಷೇಪಣೆಯನ್ನು ಸಲ್ಲಿಸುವಂತೆ ನ್ಯಾಯಾಲಯವು ಇಡಿಗೆ ಸೂಚಿಸಿತು.
5:10 PM, 13 Sep

'ಇಡಿ ನನಗೆ ಸಮನ್ಸ್‌ ನೀಡಿದಾಗಲೆಲ್ಲಾ ನಾನು ಹಾಜರಾಗಿದ್ದೇನೆ. ನಾನು ಕಾನೂನು ಮೀರುವ ವ್ಯಕ್ತಿಯಲ್ಲ' ಎಂದು ಡಿ.ಕೆ.ಶಿವಕುಮಾರ್ ಅವರು ನ್ಯಾಯಾಲಯದಲ್ಲಿ ಹೇಳಿದರು. ಡಿಕೆಶಿ ಮಾತು ಕೇಳಿದ ನ್ಯಾಯಾಧೀಶರು, 'ನಿಮಗೆ ಸೂಕ್ತ ವೈದ್ಯಕೀಯ ವ್ಯವಸ್ಥೆ ಮಾಡಿಸಲಾಗುವುದು ಎಂದರು'.
5:05 PM, 13 Sep

ಡಿಕೆಶಿ ಜಾಮೀನು ಅರ್ಜಿಗೆ ಇಡಿ ಈ ವರೆಗೆ ಪ್ರತಿಕ್ರಿಯೆ ನೀಡಿಲ್ಲ ಎಂಬುದನ್ನು ಸಿಂಘ್ವಿ ನ್ಯಾಯಾಲಯದ ಗಮನಕ್ಕೆ ತಂದರು. ಸೋಮವಾರ ಜಾಮೀನು ಅರ್ಜಿಗೆ ಪ್ರತಿಕ್ರಿಯೆ ನೀಡುವಂತೆ ನ್ಯಾಯಾಧೀಶರು ಇಡಿಗೆ ಸೂಚಿಸಿದರು.
Advertisement
5:03 PM, 13 Sep

ಡಿ.ಕೆ.ಶಿವಕುಮಾರ್ ಪಲಾಯನ ಮಾಡುತ್ತಿಲ್ಲ, ಇಡಿ ಯಾವಾಗ ಕರೆದರೂ ವಿಚಾರಣೆಗೆ ಹಾಜರಾಗುತ್ತಾರೆ ಎಂದು ಸಿಂಘ್ವಿ ನ್ಯಾಯಾಲಯಕ್ಕೆ ಹೇಳಿದರು.
5:02 PM, 13 Sep

ಹಾರಿಕೆ ಉತ್ತರ ನೀಡುತ್ತಿದ್ದಾರೆ ಎನ್ನುವುದು ವಶಕ್ಕೆ ಕೇಳಲು ಸೂಕ್ತ ಕಾರಣ ಅಲ್ಲ. ಡಿಕೆಶಿಯ 22 ವರ್ಷದ ಮಗಳನ್ನು ಇಡಿ ವಿಚಾರಣೆ ನಡೆಸಿದೆ ಇನ್ನು ಬಚ್ಚಿಟ್ಟುಕೊಳ್ಳಲು ಡಿಕೆಶಿ ಬಳಿ ಏನೂ ಉಳಿದಿಲ್ಲ ಎಂದು ಸಿಂಘ್ವಿ ವಾದಿಸಿದರು.
4:47 PM, 13 Sep

ಸೆಪ್ಟೆಂಬರ್ 3 ರಿಂದ ಡಿಕೆಶಿ ಇಡಿ ವಶದಲ್ಲಿದ್ದಾರೆ. ಅದಕ್ಕೆ ಮುನ್ನಾ ನಾಲ್ಕು ದಿನ ಡಿಕೆಶಿ ಅವರು ಇಡಿ ವಿಚಾರಣೆ ಎದುರಿಸಿದ್ದಾರೆ ಎಂದು ಸಿಂಘ್ವಿ ವಾದಿಸಿದರು.
4:47 PM, 13 Sep

ರಾಜೀವ್ ಪಿಳ್ಳೈ ಪ್ರಕರಣವನ್ನು ಸಿಂಘ್ವಿ ಅವರು ಓದಿ ಹೇಳಿದರು. ವೈದ್ಯಕೀಯ ಅವಶ್ಯಕತೆ ಬಗ್ಗೆ ಇದ್ದ ತೀರ್ಪು ಅದಾಗಿತ್ತು.
4:45 PM, 13 Sep

ಡಿ.ಕೆ.ಬಸು ಪ್ರಕರಣವನ್ನು ನ್ಯಾಯಾಲಯದ ನೆನಪಿಗೆ ತಂದ ಸಿಂಘ್ವಿ, ಅದೊಂದು 'ಕಸ್ಟೋಡಿಯಲ್ ಮರಣ' ಎಂದರು. ಇದೇ ವೇಳೆಗೆ ಕೋರ್ಟ್‌ ರೂಂ ನಲ್ಲಿಯೇ ಯಾರೊ ಒಬ್ಬರು ಸುಸ್ತಾಗಿ ತಲೆ ಸುತ್ತಿ ಬಿದ್ದರು.
Advertisement
4:40 PM, 13 Sep

ಡಿ.ಕೆ.ಶಿವಕುಮಾರ್ ಅಧಿಕ ರಕ್ತದ ಒತ್ತಡದಿಂದ ಬಳಲುತ್ತಿದ್ದಾರೆ. ಚುಚ್ಚುಮದ್ದು ನೀಡಿದ ಬಳಿಕವೂ 160/120 ಇರುವುದು ಸಾಮಾನ್ಯವಲ್ಲ. ಇಂದು ಏನೇನೋ ನಡೆದಿದೆಯೋ ಮರೆತುಬಿಡೋಣ, ನನ್ನ ವಾದದ ಪ್ರಕಾರ ಈ ವೇಳೆಗೆ ಡಿ.ಕೆ.ಶಿವಕುಮಾರ್ ಆಸ್ಪತ್ರೆಯಲ್ಲಿ ಇರಬೇಕಿತ್ತು ಎಂದು ಡಿಕೆಶಿ ಪರ ವಕೀಲರು ವಾದಿಸಿದರು.
4:38 PM, 13 Sep

ಡಿ.ಕೆ.ಶಿವಕುಮಾರ್ ಅವರನ್ನು 100 ಗಂಟೆಗೂ ಹೆಚ್ಚು ಕಾಲ ವಿಚಾರಣೆಗೆ ಒಳಪಡಿಸಲಾಗಿದೆ. ಅವರಿಗೆ ವೈದ್ದಯಕೀಯ ಚಿಕಿತ್ಸೆಯ ಅವಶ್ಯಕತೆ ಇದೆ ಎಂದು ಸಿಂಘ್ವಿ ವಾದ ಮಂಡಿಸಿದರು.
4:35 PM, 13 Sep

ಡಿ.ಕೆ.ಶಿವಕುಮಾರ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ವಾದ ಪ್ರಾರಂಭಿಸಿ, ಡಿಕೆಶಿ ಅವರ ಆರೋಗ್ಯದ ಬಗ್ಗೆ ನ್ಯಾಯಾಲಯದ ಗಮನ ಸೆಳೆದರು. ಆರೋಪಿಗೆ ವೈದ್ಯಕೀಯ ಚಿಕಿತ್ಸೆಯ ಅವಶ್ಯಕತೆ ಇದೆ ಎಂದು ಹೇಳಿದರು.
4:33 PM, 13 Sep

ನ್ಯಾಯಾಧೀಶರ ಪ್ರಶ್ನೆಗೆ ಉತ್ತರಿಸಿದ ನಟರಾಜ್, ಇತರ ಆರೋಪಿಯ ಹೇಳಿಕೆಗಳು ವ್ಯತಿರಿಕ್ತವಾಗಿದ್ದು, ಅವುಗಳ ಬಗ್ಗೆ ಆರೋಪಿಯು ಉತ್ತರ ನೀಡಲೇ ಬೇಕು ಎಂದು ಹೇಳಿದರು. ಜೊತೆಗೆ ಕೆಲವು ಬ್ಯಾಂಕ್ ಅಕೌಂಟ್ ಮಾಹಿತಿ ಅವುಗಳನ್ನೂ ಡಿಕೆಶಿ ಮುಂದೆ ಇಡಬೇಕು ಎಂದು ಹೇಳಿದರು.
4:31 PM, 13 Sep

ಆರೋಪಿ ಇನ್ನೂ ಐದು ದಿನ ನಿಮ್ಮ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡುವುದಿಲ್ಲ ಎಂದು ನನ್ನ ನಂಬಿಕೆ, ಹಾಗಿದ್ದ ಮೇಲೆ ಆತನನ್ನು (ಡಿಕೆಶಿ) ಮತ್ತೆ ವಶಕ್ಕೆ ಏಕೆ ಕೇಳುತ್ತಿದ್ದೀರಿ? ಎಂದು ನ್ಯಾಯಾಧೀಶರು ಪ್ರಶ್ನಿಸಿದರು.
4:29 PM, 13 Sep

ಇನ್ನು ಐದು ದಿನಗಳಲ್ಲಿ ಆತ (ಡಿಕೆಶಿ) ಬಾಯಿ ಬಿಡುತ್ತಾರೆ ಎಂದು ಹೇಗೆ ಹೇಳುವಿರಿ? ಎಂದು ನ್ಯಾಯಾಧೀಶರು ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ನಟರಾಜ್, ಇನ್ನೂ ಕೆಲವು ದಾಖಲೆಗಳನ್ನು ಡಿಕೆಶಿ ಮುಂದೆ ಇಡಬೇಕಿದೆ ಎಂದು ಉತ್ತರಿಸಿದರು.
4:28 PM, 13 Sep

ಡಿ.ಕೆ.ಶಿವಕುಮಾರ್ ಅವರು ಒಬ್ಬರಿಗೆ ಮಾತ್ರವೇ ಗೊತ್ತಿರುವ ಹಲವು ಮಾಹಿತಿಗಳಿವೆ. ಅವುಗಳನ್ನು ಇಡಿ ಹೊರಗೆಡವ ಬೇಕಿದೆ ಹಾಗಾಗಿ ಇನ್ನೂ ಐದು ದಿನ ಡಿ.ಕೆ.ಶಿವಕುಮಾರ್ ಅವರನ್ನು ವಶಕ್ಕೆ ನೀಡಬೇಕು ಎಂದು ನಟರಾಜ್ ಮನವಿ ಮಾಡಿದರು.
4:26 PM, 13 Sep

ಇಡಿಯು ಈವರೆಗೆ 200 ಅಕ್ರಮ ಹಣದ ಬಗ್ಗೆ ಪತ್ತೆ ಹಚ್ಚಿದೆ ಇನ್ನೂ 800 ಕೋಟಿ ಬೇನಾಮಿ ಆಸ್ತಿ ಇರುವ ಬಗ್ಗೆ ಅನುಮಾನವಿದ್ದು, ಹಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವುಗಳನ್ನು ಆರೋಪಿಯ ಮುಂದೆ ಇಟ್ಟು ಉತ್ತರ ಪಡೆಯಬೇಕಿದೆ ಎಂದು ನಟರಾಜ್ ವಾದಿಸಿದರು.
4:23 PM, 13 Sep

ಡಿಕೆಶಿ ಅವರ ಕುಟುಂಬ ಸದಸ್ಯರ ಬ್ಯಾಂಕ್ ಖಾತೆಗಳು ಸಹ ಇಡಿ ಗಮನಕ್ಕೆ ಬಂದಿದ್ದು ಅವುಗಳ ಬಗ್ಗೆಯೂ ತನಿಖೆ ಆಗಬೇಕಿದೆ. ಡಿಕೆಶಿ ಪ್ರಭಾವಿ ವ್ಯಕ್ತಿ ಆಗಿದ್ದು ಅವರಿಗೆ ಜಾಮೀನು ನೀಡಿದರೆ ಸಾಕ್ಷ್ಯ ನಾಶ ಮಾಡುವ ಸಾಧ್ಯತೆ ಇದೆ ಎಂದು ನಟರಾಜ್ ವಾದಿಸಿದ್ದಾರೆ.
4:22 PM, 13 Sep

ಅವರು ಹೂಡಿಕೆ ಮಾಡಿರುವ ಹಣದ ಮೂಲವನ್ನು ಡಿಕೆಶಿ ತಿಳಿಸಿಲ್ಲ. ಅಕ್ರಮ ಹಣವನ್ನು 317 ಖಾತೆಗಳಿಗೆ ಡಿ.ಕೆ.ಶಿವಕುಮಾರ್ ವರ್ಗಾವಣೆ ಮಾಡಿದ್ದಾರೆ ಇದರ ಬಗ್ಗೆಯೂ ಮಾಹಿತಿ ನೀಡಿಲ್ಲ, ಡಿಕೆಶಿ ಅವರ ಬಹಳಷ್ಟು ಆಸ್ತಿ ಬೇನಾಮಿ ಆಗಿದೆ ಎಂದು ಇಡಿ ಪರ ವಕೀಲ ನಟರಾಜ್ ವಾದಿಸಿದ್ದಾರೆ.
4:19 PM, 13 Sep

ವಿಚಾರಣೆ ವೇಳೆ ಡಿ.ಕೆ.ಶಿವಕುಮಾರ್ ಸಂಬಂಧವಿಲ್ಲದ ಹಾರಿಕೆ ಉತ್ತರಗಳನ್ನು ನೀಡಿದ್ದಾರೆ. ತಪ್ಪಿಕೊಳ್ಳಲು ಸುಳ್ಳು ಮಾಹಿತಿಗಳನ್ನು ಡಿ.ಕೆ.ಶಿವಕುಮಾರ್ ನೀಡಿದ್ದಾರೆ ಎಂದು ಇಡಿ ಪರ ವಕೀಲರು ನ್ಯಾಯಾಲಯಕ್ಕೆ ಹೇಳಿದ್ದಾರೆ.
4:17 PM, 13 Sep

ಡಿ.ಕೆ.ಶಿವಕುಮಾರ್ ವಿಚಾರಣೆ ಆರಂಭವಾಗಿದ್ದು, ಇನ್ನಷ್ಟು ದಿನ ವಶಕ್ಕೆ ನೀಡುವಂತೆ ಇಡಿ ಪರ ವಕೀಲ ನಟರಾಜ್ ಅವರು ನ್ಯಾಯಾಲಯಕ್ಕೆ ಕೇಳಿದ್ದಾರೆ.
3:46 PM, 13 Sep

ಕೋರ್ಟ್‌ ಹಾಲ್‌ ಬಳಿ ಕಾದು ಕುಳಿತಿರುವ ಡಿ. ಕೆ. ಶಿವಕುಮಾರ್
3:39 PM, 13 Sep

ಇಡಿ ಮತ್ತೆ 4 ದಿನ ಡಿ. ಕೆ. ಶಿವಕುಮಾರ್‌ರನ್ನು ಕಸ್ಟಡಿಗೆ ನೀಡುವಂತೆ ಕೇಳುವ ಸಾಧ್ಯತೆ ಇದೆ.
3:37 PM, 13 Sep

ಅಜಯ್ ಕುಮಾರ್ ಕೋಹರ್ ನೇತೃತ್ವದ ಪೀಠದಲ್ಲಿ ಡಿ. ಕೆ. ಶಿವಕುಮಾರ್ ಜಾಮೀನು ಅರ್ಜಿಯ ವಿಚಾರಣೆ ನಡೆಯಲಿದೆ.
3:34 PM, 13 Sep

ನ್ಯಾಯಾಲಯಕ್ಕೆ ಬಿಗಿ ಭದ್ರತೆಯಲ್ಲಿ ಆಗಮಿಸಿದ ಮಾಜಿ ಸಚಿವ ಡಿ. ಕೆ. ಶಿವಕುಮಾರ್
3:33 PM, 13 Sep

ಡಿ. ಕೆ. ಶಿವಕುಮಾರ್ ಪರ ವಕೀಲ ದಯಾಳ್ ಕೃಷ್ಣನ್‌ಗೆ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ವೈದ್ಯ ಡಾ.ರಂಗನಾಥ್
3:28 PM, 13 Sep

ನ್ಯಾಯಾಲಯದಲ್ಲಿ ಸಮಾಲೋಚನೆ ನಡೆಸುತ್ತಿರುವ ಡಿ. ಕೆ. ಶಿವಕುಮಾರ್ ಪರ ವಕೀಲರು
READ MORE

English summary
Former minister, Congress leader DK Shivakumar presented before ED special court today. He was arrested on September 03 and given to ED custody ny special court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X