ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download
LIVE

ಅನರ್ಹ ಶಾಸಕರ ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ

|
Google Oneindia Kannada News

ನವದೆಹಲಿ, ಅಕ್ಟೋಬರ್ 23: ಕರ್ನಾಟಕದ ಪಾಲಿಗೆ ಮಹತ್ವವಾದ ಎರಡು ವಿಚಾರಣೆ ಮತ್ತು ತೀರ್ಪು ಇಂದು ಸುಪ್ರೀಂಕೋರ್ಟ್ ಮತ್ತು ದೆಹಲಿ ಹೈಕೋರ್ಟ್‌ನಲ್ಲಿ ಪ್ರಕಟವಾಗಲಿದೆ.

ಸುಪ್ರೀಂಕೋರ್ಟ್‌ನಲ್ಲಿ ಹದಿನೇಳು ಜನ ಅನರ್ಹ ಶಾಸಕರ ಪ್ರಕರಣ ವಿಚಾರಣೆ ನಡೆಯಲಿದ್ದರೆ. ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ಇಡಿ ಯಿಂದ ಬಂಧನಕ್ಕೆ ಒಳಗಾಗಿ ನ್ಯಾಯಾಂಗ ಬಂಧನದಲ್ಲಿರುವ ಡಿ.ಕೆ.ಶಿವಕುಮಾರ್ ಜಾಮೀನು ಅರ್ಜಿ ವಿಚಾರಣೆ ಕುರಿತ ಆದೇಶವನ್ನು ದೆಹಲಿ ಹೈಕೋರ್ಟ್‌ ಇಂದು ಪ್ರಕಟಿಸಲಿದೆ.

ಜೈಲಿನಲ್ಲಿರುವ ಡಿಕೆಶಿಯನ್ನು ಭೇಟಿ ಮಾಡಿದ ಸೋನಿಯಾ ಗಾಂಧಿಜೈಲಿನಲ್ಲಿರುವ ಡಿಕೆಶಿಯನ್ನು ಭೇಟಿ ಮಾಡಿದ ಸೋನಿಯಾ ಗಾಂಧಿ

ಅನರ್ಹ ಶಾಸಕರ ವಿಚಾರಣೆ ಹಲವು ಬಾರಿ ಮುಂದೂಡಿದ ನಂತರ ಇಂದು ವಿಚಾರಣೆ ನಡೆಯಲಿದ್ದು, ಬಹುವಾಗಿ ಕುತೂಹಲ ಕೆರಳಿಸುವ ಈ ಪ್ರಕರಣದಲ್ಲಿ ಇಂದೇ ಆದೇಶ ಸಹ ನಿರೀಕ್ಷಿಸಲಾಗುತ್ತಿದೆ. ಇಂದಲ್ಲದಿದ್ದರೂ ಕೆಲವೇ ದಿನಗಳಲ್ಲಿ ಆದೇಶ ಹೊರಬೀಳುವುದಂತೂ ಖಾತ್ರಿ.

ಇನ್ನು ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ಇಡಿ ಅಧಿಕಾರಿಗಳಿಂದ ಸೆಪ್ಟೆಂಬರ್ 3 ರಂದು ಬಂಧಿತರಾಗಿರುವ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಜಾಮೀನು ಅರ್ಜಿ ವಿಚಾರಣೆ ದೆಹಲಿ ಹೈಕೋರ್ಟ್‌ನಲ್ಲಿ ಮುಗಿದಿದ್ದು ಇಂದು ತೀರ್ಪು ಪ್ರಕಟವಾಗಲಿದೆ.

ಅನರ್ಹ ಶಾಸಕರ ಪ್ರಕರಣ: 24 ಗಂಟೆಯಲ್ಲಿ ಮೂರು ಬಾರಿ ನಿರ್ಣಯ ಬದಲುಅನರ್ಹ ಶಾಸಕರ ಪ್ರಕರಣ: 24 ಗಂಟೆಯಲ್ಲಿ ಮೂರು ಬಾರಿ ನಿರ್ಣಯ ಬದಲು

ನಿನ್ನೆಯಷ್ಟೆ ಐಎನ್‌ಎಕ್ಸ್ ಮೀಡಿಯಾ ಹಗರಣ ಪ್ರಕರಣದಲ್ಲಿ ಪಿ.ಚಿದಂಬರಂ ಗೆ ಇದೇ ದೆಹಲಿ ಹೈಕೋರ್ಟ್‌ ಜಾಮೀನು ನೀಡಿದೆ. ಇದು ಡಿ.ಕೆ.ಶಿವಕುಮಾರ್ ಅವರಿಗೂ ಸಣ್ಣ ಭರವಸೆ ಮೂಡಿಸಿದೆ.

ರಾಜ್ಯ ರಾಜಕಾರಣದ ಮಟ್ಟಿಗೆ ಬಹಳ ಪ್ರಮುಖವಾದ ಅನರ್ಹ ಶಾಸಕರ ಪ್ರಕರಣದ ವಿಚಾರಣೆ ಬಗ್ಗೆ ಕ್ಷಣ-ಕ್ಷಣದ ಮಾಹಿತಿಯನ್ನು 'ಒನ್ ಇಂಡಿಯಾ ಕನ್ನಡ' ನೀಡಲಿದೆ.

Newest FirstOldest First
4:09 PM, 23 Oct

ಇಂದು ಸುಪ್ರೀಂಕೋರ್ಟ್‌ನಲ್ಲಿ ನಡೆಯಬೇಕಿದ್ದ ಅನರ್ಹ ಶಾಸಕರ ಅರ್ಜಿ ವಿಚಾರಣೆ ನಾಳೆಗೆ ಮುಂದೂಡಲಾಗಿದೆ.
2:37 PM, 23 Oct

ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್‌ಗೆ ಜಾಮೀನು ಮಂಜೂರಾಗಿದೆ
1:22 PM, 23 Oct

ಅನರ್ಹ ಶಾಸಕರ ಅರ್ಜಿ ವಿಚಾರಣೆ ಕೆಲವೇ ನಿಮಿಷಗಳಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಪ್ರಾರಂಭವಾಗಲಿದೆ.

English summary
Supreme Court hearing Karnataka disqualified MLAs case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X