ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Live in ಪಾಪ್ವೂ ಅಲ್ಲ ಅಪರಾಧವೂ ಅಲ್ಲ: ಹಾಗಾಗಿ...

By Srinath
|
Google Oneindia Kannada News

live-in-relationship-neither-crime-nor-sin-but-protect-women-sc
ನವದೆಹಲಿ, ನ. 29: ಮದುವೆ, ಗಂಡು-ಹೆಣ್ಣಿನ ಸಂಬಂಧಕ್ಕೆ ಹೊಸ ಕಾನೂನು ಚೌಕಟ್ಟು ತೊಡಿಸಲು ಯತ್ನಿಸಿರುವ ಸುಪ್ರೀಂಕೋರ್ಟ್, ಲಿವಿನ್‌ ಸಂಬಂಧ ಪಾಪವೂ ಅಲ್ಲ; ಅಪರಾಧವೂ ಅಲ್ಲ ಎಂದು ಹೇಳಿದೆ. ಆದರೆ ಇಂತಹ ಸಂಬಂಧದಲ್ಲಿ ಮಹಿಳೆ ಮತ್ತು ಮಕ್ಕಳು ಹೆಚ್ಚು ಬಾಧಿತರಾಗುತ್ತಾರೆ. ಹಾಗಾಗಿ, ಅದನ್ನು ಕಾನೂನುಬದ್ಧಗೊಳಿಸುವ ಶಾಸನ ರೂಪಿಸುವ ಜರೂರತ್ತು ಇದೆ ಎಂದು ಧಾವಂತ ವ್ಯಕ್ತಪಡಿಸಿದೆ.

ಇತ್ತೀಚೆಗೆ ಲಿವಿಂಗ್‌ ಟುಗೆದರ್‌ (ಸಾಂಪ್ರದಾಯಿಕವಾಗಿ ವಿವಾಹವಾಗದೆ ಜೊತೆಯಲ್ಲಿ ಬದುಕುವುದು) ಸಂಬಂಧ ಹೆಚ್ಚಾಗುತ್ತಿದೆ. ಆದರೆ ಲಿವಿಂಗ್‌ ಟುಗೆದರ್‌ ಸಂಬಂಧವು ಪ್ರಸ್ತುತ ವಿವಾಹದ ರೂಪದಲ್ಲಿಲ್ಲ. ಜತೆಗೆ ಇದಕ್ಕೆ ಕಾನೂನಿನ ಮಾನ್ಯತೆಯೂ ಇಲ್ಲ ಎಂದು ಕಳವಳ ವ್ಯಕ್ತಪಡಿಸಿದೆ. ಹಾಗಾಗಿ ಅದನ್ನು ಕಾನೂನುಬದ್ಧಗೊಳಿಸುವ ಶಾಸನ ರೂಪಿಸಿ ಎಂದು ಕೇಂದ್ರ ಸರ್ಕಾರಕ್ಕೆ ತಿಳಿಯ ಹೇಳಿದೆ.

ಭಾರತದಲ್ಲಿನ್ನೂ ವರ್ಜ್ಯ: ಇಂತಹ ಸಂಬಂಧಗಳಿಗೆ ಭಾರತದ ಕಾನೂನು ವ್ಯವಸ್ಥೆಯಲ್ಲಿ ಮಾನ್ಯತೆ ಇಲ್ಲ. ಜತೆಗೆ ಸಾಮಾಜಿಕ ವ್ಯವಸ್ಥೆಯಲ್ಲೂ ಮಾನ್ಯತೆಯಿಲ್ಲ. ಈ ರೀತಿ ಸಂಬಂಧ ಹೊಂದಿರುವವರನ್ನು ಸಮಾಜ ಇನ್ನೂ ಮುಕ್ತ ಮನಸ್ಸಿನಿಂದ ಸ್ವಾಗತಿಸುತ್ತಿಲ್ಲ. ಆದರೆ ಭಾರತದ ನಗರ ಪ್ರದೇಶಗಳಲ್ಲಿ ನಿಧಾನಕ್ಕೆ ಈ ತರಹದ ಸಂಬಂಧಗಳು ಜನಪ್ರಿಯಗೊಳ್ಳುತ್ತಿವೆ.

ಮಹಿಳೆ-ಮಕ್ಕಳೇ ಸಂತ್ರಸ್ತರು: ಲಿವಿಂಗ್‌ ಟುಗೆದರ್‌ ಸಂಬಂಧಗಳು ಮುರಿದುಬಿದ್ದಾಗ ಮಹಿಳೆಗೇ ಅನ್ಯಾಯವಾಗುತ್ತದೆ. ಈ ಸಂಬಂಧದ ಮೂಲಕ ಹುಟ್ಟುವ ಮಕ್ಕಳು ಮತ್ತು ತಾಯಿಯನ್ನು ರಕ್ಷಿಸುವ ಹಿನ್ನೆಲೆಯಲ್ಲಿ ಈ ಕಾನೂನು ಅನಿವಾರ್ಯವಾಗಿದೆ.ಲಿವಿಂಗ್‌ ಟುಗೆದರ್‌ ಸಂಬಂಧಕ್ಕೆ ಪೂರಕವಾಗಿ ವಿದೇಶಗಳಲ್ಲಿ ಕಾನೂನುಗಳನ್ನು ರೂಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಭಾರತದಲ್ಲೂ ಕಾನೂನನ್ನು ರೂಪಿಸಬೇಕು ಎಂದು ಸುಪ್ರೀಂಕೋರ್ಟ್ ಆಶಿಸಿದೆ.

ಲಿವಿಂಗ್‌ ಟುಗೆದರ್ ಮದುವೆಗೆ ಸಮಾನ: ನ್ಯಾಯಮೂರ್ತಿ ಕೆಎಸ್ ರಾಧಾಕೃಷ್ಣನ್‌ ಮತ್ತು ನ್ಯಾ ಪಿಸಿ ಗೋಸೆ ಅವರ ಸುಪ್ರೀಂ ನ್ಯಾಯಪೀಠ, ಇದಕ್ಕೆ ಸಂಬಂಧಪಟ್ಟ ಮಾರ್ಗದರ್ಶಿ ಸೂತ್ರಗಳನ್ನು ರಚಿಸಿದೆ. ಲಿವಿಂಗ್‌ ಟುಗೆದರ್ ಅನ್ನು 'ಮದುವೆಗೆ ಸಮಾನ' ಎಂದು ಪರಿಗಣಿಸಬೇಕು, ಈ ಮೂಲಕ ಈ ಸಂಬಂಧವನ್ನು ಕೌಂಟುಂಬಿಕ ಹಿಂಸೆ ಕಾಯ್ದೆಯಡಿ ತರಬೇಕು ಎಂದಿದೆ. ಇಂತಹ ಸಂಬಂಧಗಳು ಮದುವೆಗೆ ಸಮಾನವಾದ ಸ್ಥಾನ ಪಡೆದುಕೊಂಡಿಲ್ಲದ ಕಾರಣ, ಕೇಂದ್ರ ಸರಕಾರವು ಮುತುವರ್ಜಿವಹಿಸಿ ಕಾನೂನು ರಚಿಸಬೇಕು ಎಂದಿದೆ.

English summary
Live-in relationship neither crime nor sin but protect women children- Supreme Court. Live-in relationship is neither a crime nor a sin, the Supreme Court has held while asking Parliament to frame law for protection of women in such relationship and children born out of it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X