ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಷರತ್ತು ವಿಧಿಸಿ ಮದ್ಯ ಮಾರಾಟಕ್ಕೆ ಕೇಂದ್ರ ಸರ್ಕಾರ ಸಮ್ಮತಿ

|
Google Oneindia Kannada News

ದೆಹಲಿ, ಮೇ 1: ಮದ್ಯಪ್ರಿಯರಿಗೆ ಕೇಂದ್ರ ಸರ್ಕಾರ ಭರ್ಜರಿ ಸುದ್ದಿ ನೀಡಿದೆ. ಮೇ 4ರ ನಂತರ ದೇಶಾದ್ಯಂತ ಮದ್ಯ ಮಾರಾಟಕ್ಕೆ ಕೇಂದ್ರ ಗೃಹ ಸಚಿವಾಲಯ ಅನುಮತಿ ನೀಡಿದೆ. ಭಾರತದಲ್ಲಿ ಮತ್ತೆ ಎರಡು ವಾರ ಲಾಕ್‌ಡೌನ್‌ ವಿಸ್ತರಣೆಯಾಗಿದ್ದು, ಕೆಲವು ಕಡೆ ವಿನಾಯಿತಿ ಘೋಷಣೆ ಮಾಡಲಾಗಿದೆ.

ರೆಡ್ ಜೋನ್, ಆರೆಂಜ್ ಜೋನ್ ಮತ್ತು ಗ್ರೀನ್ ಜೋನ್‌ ಜಿಲ್ಲೆಗಳಾಗಿ ವಿಂಗಡಿಸಿರುವ ಕೇಂದ್ರ ಸರ್ಕಾರ, ಲಾಕ್‌ಡೌನ್‌ನಲ್ಲಿ ಸಡಿಲಿಕೆ ಘೋಷಿಸಿದೆ. ಗ್ರೀನ್ ಜೋನ್ ಮತ್ತು ಆರೆಂಜ್‌ ಜೋನ್‌ನಲ್ಲಿ ವಿನಾಯಿತಿ ನೀಡಿದ್ದು, ಮದ್ಯ ಮಾರಾಟಕ್ಕು ಸಮ್ಮತಿಸಿರುವುದು ಮದ್ಯಪ್ರಿಯರಿಗೆ ಖುಷಿ ತಂದಿದೆ.

2 ದಿನದಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ಸಿಗದೇ ಇದ್ದಲ್ಲಿ 'ಬಿಯರ್ ನಾಶದ' ಆತಂಕ!2 ದಿನದಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ಸಿಗದೇ ಇದ್ದಲ್ಲಿ 'ಬಿಯರ್ ನಾಶದ' ಆತಂಕ!

ಇಂದು ಸಂಜೆ ಕೇಂದ್ರ ಗೃಹ ಸಚಿವಾಲಯ ಹೊರಡಿಸಿದ ಮಾರ್ಗಸೂಚಿಯ ಪ್ರಕಾರ, ಗ್ರೀನ್‌ ಜೋನ್‌ಗಳಲ್ಲಿ ಮಾತ್ರ ಮದ್ಯ ಮಾರಾಟಕ್ಕೆ ಸಮ್ಮತಿ ನೀಡಿದೆ.

Liquor Shops Are Open In Green Zone Says MHA

ಹಸಿರು ವಲಯದಲ್ಲಿ ಪಾನ್ ಅಂಗಡಿ ಮತ್ತು ಮದ್ಯ ಮಾರಾಟಕ್ಕೆ ಅನುಮತಿ ನೀಡಿದ್ದು, ಕೆಲವು ಷರತ್ತು ವಿಧಿಸಿದೆ. ಅಂಗಡಿಯಲ್ಲಿ ಮದ್ಯ ಕುಡಿಯುವಂತಿಲ್ಲ. ಪಾರ್ಸಲ್ ಖರೀದಿಸಬೇಕು. ಆರು ಅಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಒಂದು ಬಾರಿ 5 ಜನರು ಮಾತ್ರ ಅಂಗಡಿ ಮುಂದೆ ನಿಲ್ಲಬಹುದು.

ಬ್ರೇಕಿಂಗ್ ನ್ಯೂಸ್; ಎರಡು ವಾರಗಳ ಕಾಲ ಲಾಕ್ ಡೌನ್ ವಿಸ್ತರಣೆಬ್ರೇಕಿಂಗ್ ನ್ಯೂಸ್; ಎರಡು ವಾರಗಳ ಕಾಲ ಲಾಕ್ ಡೌನ್ ವಿಸ್ತರಣೆ

ಕೇಂದ್ರ ಸರ್ಕಾರ ಗ್ರೀನ್ ಜೋನ್‌ನಲ್ಲಿ ಮಾತ್ರ ಅನುಮತಿ ನೀಡಿದೆ. ಈ ಕುರಿತು ರಾಜ್ಯ ಸರ್ಕಾರ ತೀರ್ಮಾನ ತೆಗೆದುಕೊಳ್ಳುವ ಅಧಿಕಾರವನ್ನು ಕೇಂದ್ರ ನೀಡಿದೆ. ಕೇಂದ್ರದ ಹೊಸ ಮಾರ್ಗಸೂಚಿ ಅನ್ವಯ ನಾಳೆ ರಾಜ್ಯ ಸರ್ಕಾರ ಚರ್ಚೆ ನಡೆಸಿ ಎಲ್ಲೆಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ನೀಡಬೇಕು ಎಂದು ತೀರ್ಮಾನ ತೆಗೆದುಕೊಳ್ಳಲಿದೆ.

ಗ್ರೀನ್ ಜೋನ್ ಜೊತೆಯಲ್ಲಿ ಆರೆಂಜ್ ಜೋನ್ ಹಾಗೂ ರೆಡ್‌ ಜೋನ್‌ ಜಿಲ್ಲೆಯ ಕಂಟೈನ್‌ ಮೆಂಟ್‌ ಪ್ರದೇಶಗಳಿಂದ ಹೊರಗೆ ಮದ್ಯ ಮಾರಾಟಕ್ಕೆ ಅನುಮತಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

English summary
Liquor shop's are open in green zone area, with minimum 6feet distance and more than 5 people are not allowed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X