ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ: ಜೂನ್ 1ರಿಂದ ಕುಡುಕರಿಗೆ ಶೇಕಡಾ 25ರಷ್ಟು ಬಂಪರ್ ರಿಯಾಯಿತಿ

|
Google Oneindia Kannada News

ನವದೆಹಲಿ, ಮೇ 10: ದೆಹಲಿಯಲ್ಲಿ ಮದ್ಯ ಪ್ರಿಯರಿಗೆ ಸಂತಸದ ಸುದ್ದಿ ಬಂದಿದೆ. ದಿಲ್ಲಿ ಸಿಎಂ ಕೇಜ್ರೀವಾಲ್ ನೇತೃತ್ವದ ಸರ್ಕಾರವು ಅಗ್ಗದ ದರದಲ್ಲಿ ಮದ್ಯ ಮಾರಾಟಕ್ಕೆ ಸಿದ್ಧತೆ ನಡೆಸಿದೆ. ವಿಶೇಷವೆಂದರೆ ಇದಕ್ಕೆ ಸಿದ್ಧತೆಯೂ ಮುಗಿದಿದ್ದು, ದಿನಾಂಕವನ್ನೂ ಪ್ರಕಟಿಸಲಾಗಿದೆ. ದೆಹಲಿಯಲ್ಲಿ ಈಗಾಗಲೇ ಮದ್ಯ ಮಾರಾಟಗಾರರು ಭರ್ಜರಿ ಕೊಡುಗೆಗಳನ್ನು ಘೋಷಿಸುತ್ತಿದ್ದಾರೆ.

ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಸರ್ಕಾರವು ಅಗ್ಗದ ದರದಲ್ಲಿ ಮದ್ಯಯನ್ನು ನೀಡಲು ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳುತ್ತಿದೆ. ರಾಜಧಾನಿಯ ನಿವಾಸಿಗಳು ಈಗ ಅಗ್ಗದ ಬೆಲೆಗೆ ಮದ್ಯವನ್ನು ಖರೀದಿಸಲು ಉತ್ತಮ ಅವಕಾಶವನ್ನು ಪಡೆಕೊಳ್ಳಲಿದ್ದು ಕುಡುಕರಿಗೆ ಕೊಡುಗೆಯಾಗಲಿದೆ.

ಜೂನ್ 1ರಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮದ್ಯದ ಬೆಲೆ ಅಗ್ಗವಾಗಲಿದೆ. ದೆಹಲಿ ಸರ್ಕಾರವು ಜೂನ್ 1ರಿಂದ ಮದ್ಯದ ಗರಿಷ್ಠ ಚಿಲ್ಲರೆ ಬೆಲೆಗೆ (MRP) ನೀಡಲಾಗುವ ಶೇಕಡಾ 25ರಷ್ಟು ರಿಯಾಯಿತಿಯನ್ನು ಮಿತಿಗೊಳಿಸಲಿದೆ. ಅಂದರೆ ಈಗ ಮದ್ಯದ ಖರೀದಿಯ ಮೇಲಿನ ಅನಿಯಮಿತ ಕೊಡುಗೆಯು ಜನರಿಗೆ ಲಾಭದಾಯಕ ವ್ಯವಹಾರವಾಗಿದೆ.

Liquor gets cheaper in Delhi; govt allows up to 25% discount on MRP

ದೆಹಲಿಯ ಎಎಪಿ ಸರ್ಕಾರವು ಮದ್ಯ ಮಾರಾಟಕ್ಕೆ ಸಂಬಂಧಿಸಿದಂತೆ ತೆಗೆದುಕೊಂಡ ಇತ್ತೀಚಿನ ನಿರ್ಧಾರದ ಪ್ರಕಾರ, ಈಗ ಮದ್ಯ ಮಾರಾಟಗಾರರು ಯಾವುದೇ ಬೆಲೆಗೆ ಮದ್ಯವನ್ನು ಮಾರಾಟ ಮಾಡಲು ಸಾಧ್ಯವಾಗುತ್ತದೆ. ಏಕೆಂದರೆ ಸರ್ಕಾರವು ನೀಡುವ 25 ಶೇಕಡಾ ರಿಯಾಯಿತಿಯನ್ನು ನೀಡಲಾಗಿದೆ.

ದೆಹಲಿಯಲ್ಲಿ ಅಗ್ಗದ ಮದ್ಯ ಮಾರಾಟಕ್ಕೆ ಪೈಪೋಟಿ
ಮದ್ಯದ ದರವನ್ನು ಕಡಿಮೆ ಮಾಡುವುದರಿಂದ ಮದ್ಯದ ಮಾರಾಟ ಹೆಚ್ಚಳ ಆಗುತ್ತದೆ. ಆ ಮೂಲಕ ತೆರಿಗೆ ಸಂಗ್ರಹದ ರೂಪದಲ್ಲಿ ಸರ್ಕಾರಕ್ಕೆ ಹೆಚ್ಚಿನ ಆದಾಯ ಬರಬಹುದು ಎಂಬ ನಿರೀಕ್ಷೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಇದಕ್ಕಾಗಿ ಸರ್ಕಾರ ಹೊಸ ಅಬಕಾರಿ ನಿಯಮಗಳನ್ನು ರೂಪಿಸಿದೆ.

Liquor gets cheaper in Delhi; govt allows up to 25% discount on MRP

ದೆಹಲಿ ಸರ್ಕಾರವು 25 ಪ್ರತಿಶತ ವಿನಾಯಿತಿಯನ್ನು ಮಿತಿಗೊಳಿಸುವ ಕಡತವನ್ನು ಈಗ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರಿಗೆ ಸರ್ಕಾರ ಸಲ್ಲಿಸಿದೆ. ಸದ್ಯದಲ್ಲೇ ಈ ಕಡತಕ್ಕೆ ಇಲ್ಲಿಂದಲೂ ಗ್ರೀನ್ ಸಿಗ್ನಲ್ ಸಿಗಲಿದೆ ಎಂಬ ಮಾಹಿತಿ ಹೊರಬಿದ್ದಿದೆ.

Liquor gets cheaper in Delhi; govt allows up to 25% discount on MRP

ಮದ್ಯ ಮಾರಾಟ ಅವಧಿ ಹೆಚ್ಚಳ

ಇದಕ್ಕೂ ಮೊದಲು ದೆಹಲಿ ಸರ್ಕಾರವು ರಾಜಧಾನಿಯಲ್ಲಿ ಮದ್ಯವನ್ನು ಪೂರೈಸುವ ಅವಧಿಯನ್ನು ವಿಸ್ತರಿಸಲು ನಿರ್ಧರಿಸಿದೆ. ಇದರ ಅಡಿಯಲ್ಲಿ ಮೊದಲು ದೆಹಲಿಯ ರೆಸ್ಟೋರೆಂಟ್‌ಗಳು ಮತ್ತು ಬಾರ್‌ಗಳಲ್ಲಿ ಮಧ್ಯರಾತ್ರಿ 1 ಗಂಟೆಯವರೆಗೆ ಮದ್ಯವನ್ನು ನೀಡಲಾಗುತ್ತಿತ್ತು, ಈಗ ಈ ಅವಧಿಯನ್ನು ಮಧ್ಯರಾತ್ರಿ 3 ರವರೆಗೆ ವಿಸ್ತರಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ವೈನ್ ಪ್ರಿಯರಿಗೆ ಇದು ಲಾಭದಾಯಕ ವ್ಯವಹಾರವಾಗಿದೆ. ಇದು ದೆಹಲಿ ಸರ್ಕಾರದ ತರ್ಕ ಪರವಾನಗಿದಾರರು ಮದ್ಯ ಮಾರಾಟಕ್ಕಾಗಿ ಮುಂಗಡವಾಗಿ ಪರವಾನಗಿ ಶುಲ್ಕವನ್ನು ಪಾವತಿಸುತ್ತಿದ್ದರೆ, ಅದಕ್ಕೆ ಅನುಗುಣವಾಗಿ ಕಡಿಮೆ ಬೆಲೆಗೆ ಮದ್ಯವನ್ನು ಮಾರಾಟ ಮಾಡಲು ಅವಕಾಶ ನೀಡಬೇಕಾಗಿದೆ ಎಂದು ದೆಹಲಿ ಸರ್ಕಾರ ಹೇಳಿಕೊಂಡಿದೆ.

English summary
Delhi govt allows city bars to stay open till 3 am,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X