ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಕಲಿ ಮತದಾನ ತಡೆಗೆ ಆಧಾರ್-ವೋಟರ್ ಐಡಿ ಲಿಂಕ್ ಮಾಡಿಸಿ: ನಿವೃತ್ತ ಜಡ್ಜ್ ಸಲಹೆ

|
Google Oneindia Kannada News

ನವದೆಹಲಿ, ಜೂನ್ 14: ಒಂದಕ್ಕಿಂತ ಹೆಚ್ಚು ಮತಗಳನ್ನು ಚಲಾಯಿಸುವ ಹಾಗೂ ಬೇರೆಯವರ ಹೆಸರಿನಲ್ಲಿ ಮತದಾನ ಮಾಡುವ ಸಮಾಜ ವಿದ್ರೋಹಿ ನಕಲಿ ಮತದಾರರ ಹಾವಳಿ ತಡೆಯಲು ಆಧಾರ್ ಕಾರ್ಡ್ ಮತ್ತು ಮತದಾರರ ಗುರುತಿನ ಚೀಟಿಗಳನ್ನು ಲಿಂಕ್ ಮಾಡುವುದು ಅಗತ್ಯ ಹಾಗೂ ಸೂಕ್ತವಾಗಿದೆ ಎಂದು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿಕ್ರಮ್‌ಜಿತ್ ಸೇನ್ ಚುನಾವಣಾ ಆಯೋಗಕ್ಕೆ ಸಲಹೆ ನೀಡಿದ್ದಾರೆ.

PAN-ಆಧಾರ್ ಜೋಡಣೆ: ಅಂತಿಮ ಗಡುವು ವಿಸ್ತರಣೆPAN-ಆಧಾರ್ ಜೋಡಣೆ: ಅಂತಿಮ ಗಡುವು ವಿಸ್ತರಣೆ

ಆಧಾರ್ ಗುರುತಿನ ಸಂಖ್ಯೆಯನ್ನು ವೋಟರ್ ಐಡಿಯೊಂದಿಗೆ ಸಂಪರ್ಕಿಸುವುದರ ಬಗ್ಗೆ ಒಲವು ಹೊಂದಿರುವ ಚುನಾವಣಾ ಆಯೋಗ, ಈ ಬಗ್ಗೆ ಸೇನ್ ಅವರ ಅಭಿಪ್ರಾಯ ಕೋರಿತ್ತು.

ಹೊಸ ಸಿಮ್ ಖರೀದಿಸುವ ಮುನ್ನ ಈ ಸುದ್ದಿ ತಪ್ಪದೇ ಓದಿಹೊಸ ಸಿಮ್ ಖರೀದಿಸುವ ಮುನ್ನ ಈ ಸುದ್ದಿ ತಪ್ಪದೇ ಓದಿ

ವಿಶಿಷ್ಟ ಮತದಾನದ ಗುರುತಿನ ಚೀಟಿಯೊಂದಿಗೆ ಆಧಾರ್ ಇದ್ದರೆ ಎರಡು ಮತದಾನ ಆಗದಂತೆ ತಡೆಯಬಹುದು. ಎರಡನ್ನೂ ಸಂಪರ್ಕಿಸುವ ಮೂಲಕ ದೇಶದಲ್ಲಿ ಅಕ್ರಮ ಮತದಾನ ನಡೆಯುತ್ತಿಲ್ಲ ಎಂಬುದನ್ನು ದೃಢಪಡಿಸಿಕೊಳ್ಳಬಹುದು ಎಂದು ಸೇನ್ ಹೇಳಿದ್ದಾರೆ.

Link Aadhaar and voter ID to illegal voting vikramjit sen election commission

'ಡ್ರೈವಿಂಗ್ ಲೈಸೆನ್ಸ್ ಗೆ ಆಧಾರ್ ಜೋಡಣೆ ಶೀಘ್ರದಲ್ಲೇ ಕಡ್ಡಾಯ' 'ಡ್ರೈವಿಂಗ್ ಲೈಸೆನ್ಸ್ ಗೆ ಆಧಾರ್ ಜೋಡಣೆ ಶೀಘ್ರದಲ್ಲೇ ಕಡ್ಡಾಯ'

ಮುಂದಿನ ಚುನಾವಣೆ ವೇಳೆ ಆಧಾರ್ ಮತ್ತು ವೋಟರ್ ಐಡಿಗಳನ್ನು ಸಂಪರ್ಕಿಸುವುದು ಕಡ್ಡಾಯವಾಗಬೇಕು. ಇದು ಚುನಾವಣೆ ಪ್ರಕ್ರಿಯೆಯು ದಕ್ಷ, ಪಾರದರ್ಶಕವಾಗುವುದನ್ನು ಸಾಧ್ಯವಾಗಿಸುತ್ತದೆ ಎಂದಿದ್ದಾರೆ.

English summary
Retired judge of Supreme Court Vikramjit Sen suggested Election Commission, Aadhaar Card and Voter ID should be linked to control illegal voting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X