ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿಯ ಗೌರವವನ್ನು ತಿರಸ್ಕರಿಸಿದ 8 ವರ್ಷದ ಬಾಲಕಿ

|
Google Oneindia Kannada News

ನವದೆಹಲಿ, ಮಾರ್ಚ್ 8: ಮಹಿಳಾ ದಿನಾಚರಣೆಯ ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿ ಸಾಧನೆ ಮಾಡಿದ ಹಾಗೂ ಸ್ಫೂರ್ತಿ ನೀಡುವ ಮಹಿಳೆಯರಿಗೆ ಗೌರವ ನೀಡುವ ಕೆಲಸಕ್ಕೆ ಮುಂದಾಗಿದ್ದರು. ಒಂದು ದಿನದ ಮಟ್ಟಿಗೆ ತಮ್ಮ ಸೋಷಿಯಲ್ ಮೀಡಿಯಾ ಖಾತೆಯನ್ನು ನಿರ್ವಹಿಸುವ ಅಧಿಕಾರ ನೀಡಿ, ಅವರಿಂದ ಎಷ್ಟೋ ಜನರಿಗೆ ಸ್ಫೂರ್ತಿ ನೀಡುವ ಕೆಲಸ ಆಗಲಿ ಎಂದಿದ್ದರು.

#SheInspiresUs ಹ್ಯಾಶ್ ಟ್ಯಾಗ್ ಮೂಲಕ ಈ ಅಭಿಮಾನ ಶುರು ಆಗಿದ್ದು, ತಾವು ಕಂಡ ಸ್ಫೂರ್ತಿದಾಯಕ ಮಹಿಳೆಯನ್ನು ಅನೇಕರು ಸೋಷಿಯಲ್ ಮೀಡಿಯಾ ಖಾತೆಯ ಮೂಲಕ ಈ ಹ್ಯಾಶ್ ಟ್ಯಾಗ್ ಬಳಸಿ ಹಂಚಿಕೊಳ್ಳುತ್ತಿದ್ದರು. ಆದರೆ, ಇದೀಗ ಈ ಅಭಿಯಾನವನ್ನು 8 ವರ್ಷದ ಬಾಲಕಿ, ಹೋರಾಟಗಾರ್ತಿ ಕಂಗುಜಂ ವಿರೋಧಿಸಿದ್ದಾರೆ. #SheInspiresUs ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

8 ವರ್ಷದ ಹೋರಾಟಗಾರ್ತಿ ವಿರೋಧ

8 ವರ್ಷದ ಹೋರಾಟಗಾರ್ತಿ ವಿರೋಧ

ಕೇವಲ 8 ವರ್ಷದಲ್ಲಿಯೇ ಹೋರಾಟಗಾರ್ತಿಯಾಗಿ ಗುರುತಿಸಿಕೊಂಡಿರುವ ಕಂಗುಜಂ ಮಹಿಳಾ ದಿನಾಚರಣೆಯ ವಿಶೇಷವಾಗಿ ಶುರುವಾದ #SheInspiresUs ವಿರುದ್ಧ ನಿಂತಿದ್ದಾರೆ. ''ಆತ್ಮೀಯ ನರೇಂದ್ರ ಮೋದಿ ಅವರೇ, ನೀವು ನನ್ನ ಮಾತನ್ನು ಆಲಿಸದೇ ಇದ್ದರೆ, ನನ್ನ ಬಗ್ಗೆ ಸಂಭ್ರಮಿಸಬೇಡಿ.'' ಎಂದು ಟ್ವೀಟ್ ಮಾಡಿ ಅಸಮಾಧಾನ ಹೊರಹಾಕಿದ್ದಾರೆ.

ಮೋದಿ ಸಾಮಾಜಿಕ ಜಾಲತಾಣ ಬಳಸೋ ಅವಕಾಶ ಸುಧಾ ಮೂರ್ತಿಗೆ ಸಿಗುತ್ತಾ?ಮೋದಿ ಸಾಮಾಜಿಕ ಜಾಲತಾಣ ಬಳಸೋ ಅವಕಾಶ ಸುಧಾ ಮೂರ್ತಿಗೆ ಸಿಗುತ್ತಾ?

ಕಂಗುಜಂ ಹೆಸರು ತೆಗೆದುಕೊಂಡ ಸರ್ಕಾರ

ಕಂಗುಜಂ ಹೆಸರು ತೆಗೆದುಕೊಂಡ ಸರ್ಕಾರ

ಸರ್ಕಾರದ ಟ್ವಿಟ್ಟರ್ ಖಾತೆಯಲ್ಲಿ ಕಂಗುಜಂ ಹೆಸರನ್ನು ಹಾಕಲಾಗಿತ್ತು. @mygovindia ಟ್ವಿಟ್ಟರ್ ಖಾತೆಯಲ್ಲಿ #SheInspiresUs ಹ್ಯಾಶ್ ಟ್ಯಾಗ್ ಮೂಲಕ ಅನೇಕ ಮಹಿಳಾ ಸ್ಫೂರ್ತಿದಾಯಕರ ಬಗ್ಗೆ ಬರೆಯಲಾಗಿತ್ತು. ಅದೇ ರೀತಿ 8 ವರ್ಷದ ಬಾಲಕಿ ಕಂಗುಜಂ ಬಗ್ಗೆಯೂ ಪೋಸ್ಟ್ ಮಾಡಲಾಗಿತ್ತು. ಆದರೆ, ಈ ಪೋಸ್ಟ್ ಬಗ್ಗೆಯೇ ಕಂಗುಜಂ ಬೇಸರ ವ್ಯಕ್ತಪಡಿಸಿದ್ದಾರೆ.

ಕಂಗುಜಂ ಬಗ್ಗೆ ಟ್ವೀಟ್

ಕಂಗುಜಂ ಬಗ್ಗೆ ಟ್ವೀಟ್

''ಕಂಗುಜಂ ಮಣಿಪುರದ ಮಕ್ಕಳ ಪರಿಸರ ಕಾರ್ಯಕರ್ತೆ. 2019ರಲ್ಲಿ ಅವರಿಗೆ ಡಾ.ಎಪಿಜೆ ಅಬ್ದುಲ್ ಕಲಾಂ ಮಕ್ಕಳ ಪ್ರಶಸ್ತಿ, ವಿಶ್ವ ಮಕ್ಕಳ ಶಾಂತಿ ಪ್ರಶಸ್ತಿ ಮತ್ತು ಭಾರತ ಶಾಂತಿ ಪ್ರಶಸ್ತಿ ನೀಡಲಾಯಿತು. ಅವರು ಸ್ಪೂರ್ತಿದಾಯಕವಲ್ಲವೇ? ಅವಳಂತಹ ಯಾರಾದರೂ ನಿಮಗೆ ತಿಳಿದಿದೆಯೇ? #SheInspiresUs ಬಳಸಿ ಹೇಳಿ". ಎಂದು ಸರ್ಕಾರದ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಲಾಗಿತ್ತು.

ಮಹಿಳಾ ದಿನ ವಿಶೇಷ : ಮಹಿಳೆಯರು ನಿವೃತ್ತಿಯ ನಂತರ ಹೇಗೆ ಹೂಡಿಕೆ ಮಾಡಬಹುದು?ಮಹಿಳಾ ದಿನ ವಿಶೇಷ : ಮಹಿಳೆಯರು ನಿವೃತ್ತಿಯ ನಂತರ ಹೇಗೆ ಹೂಡಿಕೆ ಮಾಡಬಹುದು?

ಯೋಚಿಸಿ ತೆಗೆದುಕೊಂಡ ನಿರ್ಧಾರ

ಯೋಚಿಸಿ ತೆಗೆದುಕೊಂಡ ನಿರ್ಧಾರ

ಹವಾಮಾನ ಬದಲಾವಣೆಯ ವಿರುದ್ಧದ ಹೋರಾಡಿದ ಕಂಗುಜಂ ಅವರನ್ನು ಭಾರತೀಯ 'ಗ್ರೆಟಾ' ಎಂದು ಕರೆಯುತ್ತಾರೆ. ಕಂಗುಜಂ ''#SheInspiresUs ಹ್ಯಾಶ್ ಟ್ಯಾಗ್ ಅಡಿಯಲ್ಲಿ ದೇಶದ ಸ್ಪೂರ್ತಿದಾಯಕ ಮಹಿಳೆಯರ ನಡುವೆ ನನ್ನನ್ನು ಆಯ್ಕೆ ಮಾಡಿದ್ದಕ್ಕಾಗಿ ಧನ್ಯವಾದಗಳು. ಅನೇಕ ಬಾರಿ ಯೋಚಿಸಿದ ನಂತರ, ಈ ಗೌರವವನ್ನು ತಿರಸ್ಕರಿಸಲು ನಿರ್ಧರಿಸಿದೆ. ಜೈ ಹಿಂದ್.'' ಎಂದು ಟ್ವೀಟ್ ಮಾಡಿದ್ದಾರೆ.

#sheinspiresus ನಲ್ಲಿ ಸುಧಾಮೂರ್ತಿ ಟ್ರೆಂಡಿಂಗ್

#sheinspiresus ನಲ್ಲಿ ಸುಧಾಮೂರ್ತಿ ಟ್ರೆಂಡಿಂಗ್

#sheinspiresus ಎಂಬ ಹ್ಯಾಶ್ ಟ್ಯಾಗ್ ನಲ್ಲಿ ಸುಧಾಮೂರ್ತಿ ಅವರ ಹೆಸರು ಟ್ರೆಂಡ್ ಆಗಿದೆ. ಟ್ವಿಟ್ಟರ್ ನಲ್ಲಿ ಕನ್ನಡತಿ, ಇನ್ಫೋಸಿಸ್ ಪ್ರತಿಷ್ಠಾನದ ಸಂಸ್ಥಾಪಕಿ ಹೆಸರು ಹೆಚ್ಚು ಹರಿದಾಡುತ್ತಿದೆ. ಸುಧಾಮೂರ್ತಿ ಅವರ ಸಾಮಾಜಿಕ ಕೆಲಸಗಳು, ಸರಳತೆ, ಸಾಧನೆ ಸಾವಿರಾರೂ ಜನರಿಗೆ ಸ್ಫೂರ್ತಿ ನೀಡಿವೆ ಎಂದಿದ್ದಾರೆ.

English summary
8 years old climate change activist Licypriya Kangujam turned down Narendra Modi #SheInspiresUs honour.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X