ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಬಳಿಕ ಕಾಂಗ್ರೆಸ್ ಸರ್ಕಾರದ ಬಗ್ಗೆ ಕಂಗುಜಂ ಟ್ವೀಟ್

|
Google Oneindia Kannada News

ನವ ದೆಹಲಿ, ಮಾರ್ಚ್ 8: #SheInspiresUs ಅಭಿಯಾನದಲ್ಲಿ ತಮ್ಮ ಹೆಸರನ್ನು ತೆಗೆದುಕೊಂಡಿದ್ದ ಕಾರಣ ಮೋದಿ ವಿರುದ್ಧ ಬೇಸರಗೊಂಡಿದ್ದ 8 ವರ್ಷದ ಹೋರಾಟಗಾರ್ತಿ ಕಂಗುಜಂ ಈಗ ಕಾಂಗ್ರೆಸ್ ಸರ್ಕಾರಕ್ಕೂ ತಿರುಗೇಟು ನೀಡಿದ್ದಾರೆ.

ಮೋದಿರ #SheInspiresUs ಅಭಿಯಾನದ ವಿರುದ್ಧ ಕಂಗುಜಂ ಮಾಡಿದ್ದ ಟ್ವೀಟ್ ಬಗ್ಗೆ ಕಾಂಗ್ರೆಸ್ ಸರ್ಕಾರ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿತ್ತು. ''ಮೋದಿ ಬಾಯಿ ಮಾತಿನ ಬೂಟಾಟಿಕೆಯ ಮಹಿಳಾ ಕಲ್ಯಾಣ ಕಾರ್ಯವನ್ನ ಪರಿಸರ ಹೋರಾಟಗಾರ್ತಿ ವಿರೋಧಿಸಿದ್ದಾರೆ. ಮೋದಿ ಅಭಿಯಾನದಲ್ಲಿ ಭಾಗಿಯಾಗಲು ನಿರಾಕರಿಸುವ ಆಕೆ, ಟ್ವಿಟ್ಟರ್ ಅಭಿಯಾನಕ್ಕಿಂತಲೂ ಹವಾಮಾನ ಬಗ್ಗೆ ತಾನು ಎತ್ತಿದ್ದ ಕೂಗು ಕೇಳುವುದು ಮುಖ್ಯ'' ಎಂದು ಟ್ವೀಟ್ ಮಾಡಿದ್ದರು.

ಮೋದಿಯ ಗೌರವವನ್ನು ತಿರಸ್ಕರಿಸಿದ 8 ವರ್ಷದ ಬಾಲಕಿಮೋದಿಯ ಗೌರವವನ್ನು ತಿರಸ್ಕರಿಸಿದ 8 ವರ್ಷದ ಬಾಲಕಿ

ಕಾಂಗ್ರೆಸ್ ಸರ್ಕಾರ ಈ ಮಾತಿಗೆ ಕಂಗುಜಂ ಟ್ವೀಟ್ ಮಾಡಿ ತಿರುಗೇಟು ನೀಡಿದ್ದಾರೆ. ''ಸರಿ ನೀವು ನನ್ನ ಬಗ್ಗೆ ಸಹಾನುಭೂತಿ ಹೊಂದಿದ್ದೀರಿ. ಪರವಾಗಿಲ್ಲ. ವಿಷಯಕ್ಕೆ ಬರೋಣ. ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ನಡೆಯುತ್ತಿರುವ ಸಂಸತ್ ಅಧಿವೇಶನದಲ್ಲಿ ನಿಮ್ಮ ಎಷ್ಟು ಸಂಸದರು ನನ್ನ ಬೇಡಿಕೆಗಳನ್ನು ಮಂಡಿಸಲಿದ್ದಾರೆ? ಟ್ವಿಟರ್ ಪ್ರಚಾರಕ್ಕಾಗಿ ನೀವು ನನ್ನ ಹೆಸರನ್ನು ಬಳಸಬೇಕೆಂದು ನಾನು ಬಯಸುವುದಿಲ್ಲವೇ? ನನ್ನ ಧ್ವನಿಯನ್ನು ಯಾರು ಕೇಳುತ್ತಿದ್ದಾರೆ?'' ಎಂದು ಕಾಂಗ್ರೆಸ್‌ಗೆ ಪ್ರಶ್ನೆ ಮಾಡಿದ್ದಾರೆ.

Licypriya Kangujam gave reaction to congress twitter

ನರೇಂದ್ರ ಮೋದಿ ಮಹಿಳಾ ದಿನಾಚರಣೆಯ ವಿಶೇಷವಾಗಿ ತಮ್ಮ ಸೋಷಿಯಲ್ ಮೀಡಿಯಾ ಖಾತೆಯನ್ನು ಒಂದು ದಿನದ ಮಟ್ಟಿಗೆ ಬಳಸುವ ಅಧಿಕಾರವನ್ನು ಮಹಿಳಾ ಸಾಧಕರಿಗೆ ನೀಡುತ್ತೇನೆ ಎಂದಿದ್ದರು. ಈ ಸಾಧಕರ ಪಟ್ಟಿಯಲ್ಲಿ ಹೋರಾಟಗಾರ್ತಿ ಕಂಗುಜಂ ಸಹ ಇದ್ದಾರೆ ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದರು. ಆದರೆ, ಇದರ ಬಗ್ಗೆ ಕಂಗುಜಂ ಅಸಮಾದಾನ ವ್ಯಕ್ತ ಪಡಿಸಿದರು.

ಮೋದಿ ಸೋಷಿಯಲ್ ಮೀಡಿಯಾ ಖಾತೆ ಸಿಕ್ಕಿದ್ದು ಈ 7 ಮಹಿಳೆಯರಿಗೆಮೋದಿ ಸೋಷಿಯಲ್ ಮೀಡಿಯಾ ಖಾತೆ ಸಿಕ್ಕಿದ್ದು ಈ 7 ಮಹಿಳೆಯರಿಗೆ

ಮೋದಿ ಮಾತ್ರವಲ್ಲದೆ, ತಮ್ಮ ಟ್ವೀಟ್ ಅನ್ನು ಕಾಂಗ್ರೆಸ್ ಸರ್ಕಾರ ಬಳಸಿಕೊಳ್ಳುವ ಪ್ರಯತ್ನ ಮಾಡಿದೆ ಎಂದಿರುವ ಕಂಗುಜಂ ತಿರುಗೇಟು ನೀಡಿದ್ದಾರೆ.

English summary
#SheInspiresUs: 8 years old climate change activist Licypriya Kangujam gave reaction to congress twitter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X