ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಸಿಕೆ ಎಲ್ಲರಿಗೂ ದೊರೆಯುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ: ಜಸ್ಟಿಸ್ ಚಂದ್ರಚೂಡ್

|
Google Oneindia Kannada News

ನವದೆಹಲಿ, ಜೂನ್ 1: ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಎಲ್ಲರಿಗೂ ಲಸಿಕೆ ದೊರೆಯುವಂತಾದರೆ ಶೀಘ್ರದಲ್ಲಿಯೇ ಖುದ್ದು ಹಾಜರಾಗಿ ವಿಚಾರಣೆಯನ್ನು ಕೋರ್ಟ್ ನಡೆಸಲು ಸಾಧ್ಯವಾಗುತ್ತದೆ ಎಂದಿದ್ದಾರೆ. ಆಗಸ್ಟ್‌ ತಿಂಗಳಿಗೆ ಪ್ರಕರಣಗಳ ವಿಚಾರಣೆಗೆ ಪಟ್ಟಿ ಮಾಡುತ್ತಿದ್ದ ಸಂದರ್ಭದಲ್ಲಿ ಈ ವಿಚಾರವನ್ನು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಹಾಜರಾಗಿದ್ದ ವೈದ್ಯರು "ಆಗಸ್ಟ್ ತಿಂಗಳಿನಲ್ಲಿ ಖುದ್ದು ಹಾಜರಾಗಿ ವಿಚಾರಣೆ ನಡೆಸುವಂತಾಗಲು ನಾವು ದೇವರಲ್ಲಿ ಪ್ರಾರ್ಥಿಸೋಣ" ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಜಸ್ಟಿಸ್ ಚಂದ್ರಚೂಡ್ "ದೇವರಲ್ಲಿ ಎಲ್ಲರಿಗೂ ಲಸಿಕೆ ದೊರೆಯುವಂತಾಗಲಿ ಎಂದು ಪ್ರಾರ್ಥಿಸೋಣ. ಆಗ ನಾವು ಖುದ್ದು ಹಾಜರಾಗಿ ವಿಚಾರಣೆಯನ್ನು ನಡೆಸಲು ಸಾಧ್ಯವಾಗುತ್ತದೆ" ಎಂದು ಪ್ರತಿಕ್ರಿಯಿಸಿದ್ದಾರೆ.

ಲಸಿಕೆ ಬೆಲೆ ಮತ್ತು ಹಂಚಿಕೆಯ ಬಗ್ಗೆ ಕೇಂದ್ರದ ಮುಂದೆ ಕಠಿಣ ಪ್ರಶ್ನೆಗಳನ್ನಿಟ್ಟ ಸುಪ್ರೀಂ ಕೋರ್ಟ್ಲಸಿಕೆ ಬೆಲೆ ಮತ್ತು ಹಂಚಿಕೆಯ ಬಗ್ಗೆ ಕೇಂದ್ರದ ಮುಂದೆ ಕಠಿಣ ಪ್ರಶ್ನೆಗಳನ್ನಿಟ್ಟ ಸುಪ್ರೀಂ ಕೋರ್ಟ್

ಇದಕ್ಕೂ ಮುನ್ನ ಮಾರ್ಚ್ 15, 2021 ರಿಂದ ಸೀಮಿತ ಪ್ರಮಾಣದಲ್ಲಿ ಖುದ್ದು ವಿಚಾರಣೆಗಳನ್ನು ಪ್ರಾರಂಭಿಸಲು ಸುಪ್ರೀಂ ಕೋರ್ಟ್ ನಿರ್ಧರಿಸಿತ್ತು. ಇದಕ್ಕಾಗಿ ತಾಂತ್ರಿಕ ಸಿದ್ಧತೆಗಳನ್ನು ಮಾಡಿಕೊಂಡು ನೇರವಾಗಿ ಅಥವಾ ವರ್ಚುವಲ್ ವೇದಿಕೆಯಲ್ಲಿ ವಿಚಾರಣೆಗೆ ಹಾಜರಾಗುವ ಆಯ್ಕೆಯನ್ನು ನೀಡಲಾಗಿತ್ತು. ಆದರೆ ಈ ಸಂದರ್ಭದಲ್ಲಿ ಕೊರೊನಾ ವೈರಸ್‌ನ ಎರಡನೇ ಅಲೆ ಹೆಚ್ಚಾಗಲು ಆರಂಭಿಸಿದ ಕಾರಣ ನ್ಯಾಯಮೂರ್ತಿಗಳು ಮನೆಯಿಂದಲೇ ವಿಚಾರಣೆಯನ್ನು ಮುಂದುವರಿಸುವ ನಿರ್ಧಾರ ಕೈಗೊಳ್ಳಾಯಿತು.

Let us pray that vaccination takes place for all says Justice DY Chandrachud

ಸುಪ್ರೀಂ ಕೋರ್ಟ್ ಇ-ಸಮಿತಿಯ ಅಧ್ಯಕ್ಷರು ಕೂಡ ಆಗಿರುವ ನ್ಯಾಯಮೂರ್ತಿ ಚಂದ್ರಚೂಡ್ ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ವರ್ಚುವಲ್ ವಿಚಾರಣೆಗಳನ್ನು ನೇರ ವಿಚಾರಣೆಗಳಿಗೆ ಪರ್ಯಾಯವಾಗಿ ಅಳವಡಿಸಿಕೊಳ್ಳುವ ಉದ್ದೇಶವನ್ನು ಹೊಂದಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ದೇಶಾದ್ಯಂತ ಕೊರೊನಾ ವೈರಸ್‌ ನಿರ್ವಹಣೆಯ ವಿಚಾರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಸ್ವಯಂ ಪ್ರೇರಿತ ಪ್ರಕರಣದ ವಿಚಾರಣೆಯನ್ನು ನ್ಯಾಯಮೂರ್ತಿ ಚಂದ್ರಚೂಡ್ ಅವರ ನೇತೃತ್ವದ ಪೀಠ ನಡೆಸುತ್ತಿದೆ. ಸೋಮವಾರ ನಡೆಸಿದ ವಿಚಾರಣೆಯಲ್ಲಿ ಈ ಪೀಠ ಕೇಂದ್ರದ ಮುಂದೆ ಕೆಲ ಕಠಿಣ ಪ್ರಶ್ನೆಗಳನ್ನು ಮುಂದಿಟ್ಟಿತ್ತು. ಈ ನ್ಯಾಯಪೀಠದಲ್ಲಿ ಎಸ್.ರವೀಂದ್ರ ಭಟ್ ಮತ್ತು ಎಲ್ ನಾಗೇಶ್ವರ ರಾವ್ ಕೂಡ ಇದ್ದಾರೆ.

ಲಸಿಕೆ ಬೆಲೆಯಲ್ಲಿ ಇರುವ ಇಬ್ಬಗೆಯ ನೀತಿಯ ಬಗ್ಗೆ ಸರ್ವೋಚ್ಚ ನ್ಯಾಯಾಲಯ ಪ್ರಶ್ನೆಯನ್ನು ಮುಂದಿಟ್ಟು ಲಸಿಕೆ ಬೆಲೆಯಲ್ಲಿ ಇಬ್ಬಗೆಯ ನೀತಿಗಳು ಕಂಡುಬರುತ್ತಿದೆ. ದೇಶಾದ್ಯಂತ ಲಸಿಕೆಗೆ ಒಂದೇ ಬೆಲೆಯನ್ನು ನಿಗದಿಪಡಿಸುವ ಅಗತ್ಯವಿದೆ ತಿಳಿಸಿದೆ. "ಕೇಂದ್ರ ಸರ್ಕಾರ ದೊಡ್ಡ ಪ್ರಮಾಣದಲ್ಲಿ ಲಸಿಕೆಯನ್ನು ಕೊಂಡುಕೊಳ್ಳುತ್ತಿರುವ ಕಾರಣ ಕಡಿಮೆ ಬೆಲೆಗೆ ನಮಗೆ ದೊರೆಯುತ್ತಿದೆ ಎಂದಿದೆ. ಆ ವಾದ ತರ್ಕಬದ್ಧವಾಗಿದ್ದರೆ ರಾಜ್ಯ ಸರ್ಕಾರಗಳಿಗೆ ಯಾಕೆ ಹೆಚ್ಚಿನ ಬೆಲೆಯನ್ನು ನೀಡಲಾಗುತ್ತಿದೆ? ದೇಶಾದ್ಯಂತ ಲಸಿಕೆಗೆ ಒಂದೇ ಬೆಲೆ ನಿಗದಿಪಡಿಸುವ ಅಗತ್ಯವಿದೆ ಎಂದು ಈ ಪೀಠ ಸೋಮವಾರ ನಡೆಸಿದ ವಿಚಾರಣೆಯ ಸಂದರ್ಭದಲ್ಲಿ ಹೇಳಿದೆ.

English summary
Let us pray that vaccination takes place for all says Justice DY Chandrachud. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X