ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಗದು ರಹಿತ ವ್ಯವಹಾರಕ್ಕೆ ಹೆಚ್ಚು ಒತ್ತು ನೀಡಿ: ಮೋದಿ ಮನವಿ

ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ನಗದು ರಹಿತ ವ್ಯವಹಾರಕ್ಕೆ ಹೆಚ್ಚು ಒತ್ತು ನೀಡುವಂತೆ ಪ್ರಧಾನಿ ಮೋದಿ ಅವರು ಭಾನುವಾರ ಮನವಿ ಮಾಡಿದರು.

By Prithviraj
|
Google Oneindia Kannada News

ಬೆಂಗಳೂರು, ನವೆಂಬರ್, 27: ನೋಟು ನಿಷೇಧದ ಬಳಿಕ ಇದೇ ಪ್ರಥಮ ಬಾರಿಗೆ ಮನ್ -ಕಿ - ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ದೇಶವನ್ನುದ್ದೇಶಿಸಿ ಪ್ರಧಾನಿ ಮೋದಿ ಭಾನುವಾರ ಮಾತನಾಡಿದರು.

"ನಗದು ರಹಿತ ವ್ಯವಹಾರಕ್ಕೆ ಯುವ ಸಮೂಹ ಹೆಚ್ಚು ಒತ್ತು ನೀಡಬೇಕು, ನಗದು ರಹಿತ ವ್ಯವಾಹಾರ ಮಾಡುವುದು ವ್ಯಾಟ್ಸಪ್ ಬಳಕೆಗಿಂತ ಸುಲಭ ನಗು ರಹಿತ ಸಮಾಜ ನಿರ್ಮಿಸುವುದು ಯುವ ಜನಾಂಗದ ಕೈಯಲ್ಲೇ ಇದೆ" ಎಂದು ಅವರು ತಿಳಿಸಿದರು.

Less cash to cash less: PM Modi in Mann Ki Baat

"ರೂ.500 ಹಾಗು ರೂ.1000 ಮುಖಬೆಲೆಯ ನೋಟುಗಳ ನಿಷೇಧದಿಂದ ಜನಸಾಮಾನ್ಯರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ನಾನು ಈಗಲೂ ಹೇಳುತ್ತೇನೆ ಸ್ವಲ್ಪ ತಾಳ್ಮೆಯಿಂದ ಇರಿ ಇನ್ನು 50 ದಿನದಲ್ಲಿ ಎಲ್ಲವೂ ಸರಿಹೋಗುತ್ತದೆ" ಎಂದು ಹೇಳಿದರು.

ಕರ್ನಾಟಕದಿಂದ ಕರೆ ಮಾಡಿದ್ದ ಯಲ್ಲಪ್ಪ ವೆಲಂಕರ್ ಮತ್ತು ಮಧ್ಯಪ್ರದೇಶದಿಂದ ಕರೆ ಮಾಡಿದ್ದ ಆಶಿಷ್ ಪರೆ ಅವರ ಕರೆಗಳನ್ನು ಸ್ವೀಕರಿಸಿ ಅವರು ಪ್ರತಿಕ್ರಿಯೆ ನೀಡಿದರು. ಅಷ್ಟೇ ಅಲ್ಲದೆ ನೋಟು ನಿಷೇಧ ಕುರಿತು ಸಾರ್ವಜನಿಕರಿಂದ ಬಂದ ಪ್ರತಿಕ್ರಿಯೆಗಳನ್ನೂ ಸಹ ಅವರು ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದರು.

ಭಾಷಣದ ಪ್ರಮುಖಾಂಶಗಳು

* ಕಳೆದ ತಿಂಗಳು ನಾವೆಲ್ಲರೂ ವಿಶೇಷವಾಗಿ ಯೋಧರಿಗೆ ಶುಭಾಷಯ ತಿಳಿಸುವ ಮೂಲಕ ದೀಪಾವಳಿ ಆಚರಿಸಿದ್ದೇವೆ. ನಾನು ಸಹ ನಮ್ಮ ಯೋಧರೊಂದಿಗೆ ದೀಪಾವಳಿ ಆಚರಿಸಿದ್ದೇನೆ.

* ಎಲ್ಲರಂತೆ ನಮಗೂ ದೀಪಾವಳಿ ಪವಿತ್ರ ಹಬ್ಬ, ದೇಶದ ರಕ್ಷಣೆ ಮಾಡುವ ಮೂಲಕ ನಾವು ದೀಪಾವಳಿ ಆಚರಿಸಿದ್ದೇವೆ" ಯೋದರೊಬ್ಬರು ನನಗೆ ಪತ್ರ ಬರೆದಿದ್ದರು.

* ಜಮ್ಮು ಕಾಶ್ಮೀರದ ಕೆಲವು ಗ್ರಾಮಗಳಿಗೆ ಭೇಟಿ ನೀಡಿದ್ದೆ, ಅದು ನನಗೆ ತುಂಬಾ ಸಂತಸದ ವಿಷಯ, ನಿಮ್ಮ ಭವಿಷ್ಯದ ಅಭಿವೃದ್ಧಿ ಕುರಿತು ಹೆಚ್ಚು ಯೋಚನೆ ಮಾಡಿ ಎಂದು ನಾನು ಗ್ರಾಮಸ್ಥರಲ್ಲಿ ಮನವಿ ಮಾಡಿದ್ದೆ.

* ಜಮ್ಮು ಕಾಶ್ಮೀರದ ವಿದ್ಯಾರ್ಥಿಗಳು ಉನ್ನತ ವಿದ್ಯೆ ಪಡೆದು ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳುವತ್ತ ಮನಸ್ಸು ಮಾಡಬೇಕು.

* ಅಕ್ರಮವಾಗಿ ಕೂಡಿಟ್ಟ ಹಣವನ್ನು ಸಕ್ರಮ ಮಾಡಿಕೊಳ್ಳಲು ಬಡವರ ಖಾತೆಗೆ ಜಮೆ ಮಾಡಬೇಡಿ* ಬ್ಯಾಂಕ್ ಮತ್ತು ಅಂಚೆ ಕಚೇರಿ ಸಿಬ್ಬಂದಿ ಹೆಚ್ಚು ಶ್ರಮ ವಹಿಸಿ ಕೆಲಸ ನಿರ್ವಹಿಸುತ್ತಿದ್ದಾರೆ.

* ಇತ್ತೀಚೆಗೆ ಸೂರತ್ ನ ಭರತ್ ಮಧು ಮತ್ತು ದಕ್ಷ ಪರ್ಮರ್ ಅವರು 'ಚಾಯ್ ಪೆ ಚರ್ಚಾ' ರೀತಿ ಕೇವಲ ಟೀ ಮತ್ತು ನೀರು ಕೊಟ್ಟು ಅತಿಥಿಗಳನ್ನು ಉಪಚರಿಸಿ ಮದುವೆ ಮಾಡಿಕೊಂಡಿರುವುದು ನನ್ನ ಗಮನಕ್ಕೆ ಬಂದಿದೆ.

* ಕೂಲಿ ಕಾರ್ಮಿಕರು ಸಹ ಬ್ಯಾಂಕ್ ಖಾತೆ ತೆರೆಯಬೇಕು. ಸಂಬಳವನ್ನು ಖಾತೆ ಮೂಲಕ ಪಡೆಯುವುದರಿಂದ ಅವರಿಗೆ ಕನಿಷ್ಠ ಕೂಲಿ ದೊರೆಯುತ್ತದೆ.

* ನಗದು ರಹಿತ ಸಮಾಜ ನಿರ್ಮಿಸುವುದು ನಮ್ಮ ಹೆಬ್ಬಯಕೆ, ಅತು ತಕ್ಷಣ ಆಗುವಂಥದ್ದಲ್ಲ. ಇಂದಿನಿಂದಲೇ ಈ ನಿಟ್ಟಿನಲ್ಲಿ ಶ್ರಮಿಸೋಣ ಹಿರಿಯರಿಗೂ ತಂತ್ರಜ್ಞಾನದ ಕುರಿತು ತಿಳಿವಳಿಕೆ ಹೇಳೋಣ.

* ಪ್ರತಿ ಬ್ಯಾಂಕ್ ನಲ್ಲೂ ಆನ್ ಲೈನ್ ವ್ಯವಹಾರ ನಡೆಯುತ್ತಿದೆ. ಮೊಬೈಲ್ ತಂತ್ರಂಶಾಗಳಿವೆ, ಇ-ವಾಲೆಟ್ಸ್ ಗಳಿವೆ ನಗದು ರಹಿತ ವ್ಯವಹಾರಕ್ಕಾಗಿ ಇವುಗಳನ್ನು ಬಳಸಿಕೊಳ್ಳಿ

* ಇದು ಕಪ್ಪು ಹಣ ಮತ್ತು ಭ್ರಷ್ಟಾಚಾರದ ವಿರುದ್ಧದ ಹೋರಾಟ. ಹೋರಾಟಕ್ಕೆ ಜನರು ಸಹಕಾರ ನೀಡುತ್ತಿದ್ದಾರೆ.

English summary
In his first month radio address Mann ki Baat since the ban on currency of high denomination, Prime Minister Narendra Modi today reiterated that it will take 50 days for the cash crunch to be over and the situation to normalise. He also appealed to the youth to learn about cashless transactions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X