ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆಎನ್ ಯುನಲ್ಲಿ ನಾಲ್ಕೂ ಪ್ರಮುಖ ಹುದ್ದೆಗಳು ಎಡಪಂಥೀಯ ವಿದ್ಯಾರ್ಥಿ ಒಕ್ಕೂಟಕ್ಕೆ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 16: ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಒಕ್ಕೂಟದ (ಜೆಎನ್ಎಸ್ ಯುಎಸ್ ಯು) ಚುನಾವಣೆಯಲ್ಲಿ ಎಡರಂಗವು ಎಲ್ಲ ನಾಲ್ಕು ಪ್ರಮುಖ ಹುದ್ದೆಗಳನ್ನು ಜಯಗಳಿಸಿದೆ. ಶನಿವಾರ ಸಂಜೆ ಮತ ಎಣಿಕೆ ಮತ್ತೆ ಆರಂಭವಾಗಿತ್ತು. ಅದಕ್ಕೂ ಮುನ್ನ ಹದಿನಾಲ್ಕು ಗಂಟೆಗಳ ಕಾಲ ಎಣಿಕೆ ನಿಲ್ಲಿಸಲಾಗಿತ್ತು.

ಮಾಹಿತಿ ನೀಡದೆ ಮತ ಎಣಿಕೆ ಆರಂಭಿಸಲಾಗಿದೆ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷದ್ (ಎಬಿವಿಪಿ) ಆರೋಪ ಮಾಡಿದ್ದರಿಂದ ಎಣಿಕೆ ನಿಲ್ಲಿಸಲಾಗಿತ್ತು. ಎಡ ಗುಂಪಿನ ಎನ್.ಸಾಯಿ ಬಾಲಾಜಿ ಅಧ್ಯಕ್ಷ, ಸಾರಿಕಾ ಚೌಧರಿ ಉಪಾಧ್ಯಕ್ಷೆ, ಎಜಾಜ್ ಅಹ್ಮದ್ ರಥೇರ್ ಪ್ರಧಾನ ಕಾರ್ಯದರ್ಶಿ ಮತ್ತು ಅಮೃತಾ ಜಯದೀಪ್ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.

ನಾಪತ್ತೆಯಾಗಿದ್ದ ಜೆಎನ್‌ಯು ವಿದ್ಯಾರ್ಥಿ ಪತ್ತೆನಾಪತ್ತೆಯಾಗಿದ್ದ ಜೆಎನ್‌ಯು ವಿದ್ಯಾರ್ಥಿ ಪತ್ತೆ

ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ (ಎಐಎಸ್ ಎ), ಸ್ಟೂಡೆಂಟ್ಸ್ ಫೆಡರೇಷನ್ ಆಫ್ ಇಂಡಿಯಾ (ಎಸ್ ಎಫ್ ಐ), ಆಲ್ ಇಂಡಿಯಾ ಸ್ಟೂಡೆಂಟ್ಸ್ ಫೆಡರೇಷನ್ ಮತ್ತು ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಫೆಡರೇಷನ್ (ಡಿಎಸ್ ಎಫ್) ಇವೆಲ್ಲವೂ ಎಡಪಂಥೀಯ ವಿದ್ಯಾರ್ಥಿ ಒಕ್ಕೂಟದ ಭಾಗವಾಗಿವೆ.

JNU

ಎನ್.ಸಾಯಿ ಬಾಲಾಜಿ 2161, ಸಾರಿಕಾ ಚೌಧರಿ 2,692, ಎಜಾಜ್ ಅಹ್ಮದ್ ರಥೇರ್ 2423 ಮತ್ತು ಅಮೃತಾ ಜಯದೀಪ್ 2047 ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ. ಶುಕ್ರವಾರ ಶೇ 67.8ರಷ್ಟು ಮತದಾನವಾಗಿತ್ತು. ಕಳೆದ ಆರು ವರ್ಷಗಳಲ್ಲೇ ಅತಿ ಹೆಚ್ಚಿನ ಪ್ರಮಾಣದ ಮತದಾನ ಇದಾಗಿದೆ. 5 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ ಹಾಕಿದ್ದರು.

ಎಡಪಂಥೀಯ ಗುಂಪುಗಳಲ್ಲದೆ ಎಬಿವಿಪಿ, ಎನ್ ಎಸ್ ಯುಐ (ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ) ಮತ್ತು ಬಿಎಪಿಎಸ್ ಎ ಕೂಡ ಚುನಾವಣೆಯಲ್ಲಿ ಭಾಗಿಯಾಗಿದ್ದವು.

English summary
The Left unity has won all four key posts in the Jawaharlal Nehru University Students' Union (JNUSU) polls. Counting of votes resumed Saturday evening after it was suspended for nearly 14 hours.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X