ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

RCEP ಒಪ್ಪಂಕ್ಕೆ ಒಲ್ಲೆ ಎಂದ ಮೋದಿ ಕ್ರಮವನ್ನು ಶ್ಲಾಘಿಸಿದ ಭಾರತ

|
Google Oneindia Kannada News

ನವದೆಹಲಿ, ನವೆಂಬರ್ 04: ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಒಪ್ಪಂದಕ್ಕೆ ಸಹಿ ಹಾಕಲು ಒಪ್ಪದ ಪ್ರಧಾನಿ ನರೇಂದ್ರ ಮೋದಿ ಅವರ ನಡೆಯನ್ನು ಭಾರತದ ಹಲವು ನಾಯಕರು ಸ್ವಾಗತಿಸಿದ್ದಾರೆ.

ಥಾಯ್ಲೆಂಡ್ ನ ಬ್ಯಾಂಕಾಕ್ ನಲ್ಲಿ ನಡೆದ ಆಸಿಯಾನ್ ಸಮ್ಮೇಳನದಲ್ಲಿ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿ, "ಆರ್ ಸಿಇಪಿ ಒಪ್ಪಂದಕ್ಕೆ ಸಹಿ ಹಾಕುವುದರಿಂದ ಭಾರತದ ರೈತರಿಗೆ, ವ್ಯಾಪಾರಿಗಳಿಗೆ ನಷ್ಟವಾಗುತ್ತದೆ. ಆದ್ದರಿಂದ ಅವರ ಹಿತಾಸಕ್ತಿಯ ದೃಷ್ಟಿಯಿಂದ ಈ ಒಪ್ಪಂದಕ್ಕೆ ಸಹಿ ಹಾಕಲು ನಾನು ಇಷ್ಟಪಡುವುದಿಲ್ಲ. ಅದಕ್ಕೆ ನನ್ನ ಆತ್ಮಸಾಕ್ಷಿ ಒಪ್ಪುವುದಿಲ್ಲ" ಎಂದರು.

ಆರ್ ಸಿಇಪಿ ಒಪ್ಪಂದಕ್ಕೆ ಭಾರತ ಸಹಿ ಹಾಕಿದ್ದೇ ಆದರೆ ಚೀನಾ, ಜಪಾನ್ ಸೇರಿದಂತೆ 16 ದೇಶಗಳ ಮೇಲೆ ಅದು ಯಾವುದೇ ರೀತಿಯ ಆಮದು ಸುಂಕ ಹಾಕಲು ಸಾಧ್ಯವಾಗುತ್ತಿರಲಿಲ್ಲ. ಅಲ್ಲದೆ ಬೇರೆ ದೇಶಗಳ ಸಾಮಗ್ರಿಗಳು ಸುಲಭವಾಗಿ ಭಾರತೀಯ ಮಾರುಕಟ್ತೆ ಪ್ರವೇಶಿಸಲು ಅವಕಾಶವಾಗುತ್ತಿತ್ತು. ಇದರಿಂದ ಭಾರತೀಯ ರೈತರು, ವ್ಯಾಪಾರಿಗಳಿಗೆ ಭಾರೀ ನಷ್ಟವಾಗುತ್ತಿತ್ತು.

ಆರ್‌ಸಿಇಪಿ ಒಪ್ಪಂದಕ್ಕೆ ಸಹಿ ಹಾಕದ ಭಾರತ: ರೈತರು, ಉದ್ಯಮಿಗಳು ನಿರಾಳಆರ್‌ಸಿಇಪಿ ಒಪ್ಪಂದಕ್ಕೆ ಸಹಿ ಹಾಕದ ಭಾರತ: ರೈತರು, ಉದ್ಯಮಿಗಳು ನಿರಾಳ

ಈ ಒಪ್ಪಂದಕ್ಕೆ ಸಹಿ ಹಾಕದ ನರೇಂದ್ರ ಮೋದಿ ಅವರ ನಡೆಯನ್ನು ದೇಶದಾದ್ಯಂತ ಹಲವು ನಾಯಕರು ಸ್ವಾಗತಿಸಿದ್ದಾರೆ.

ರಣದೀಪ್ ಸಿಂಗ್ ಸುರ್ಜೇವಾಲಾ

ರಣದೀಪ್ ಸಿಂಗ್ ಸುರ್ಜೇವಾಲಾ

ಮೋದಿ ಸರ್ಕಾರ ಆರ್ ಸಿಇಪಿ ಒಪ್ಪಂದಕ್ಕೆ ಸಹಿ ಮಾಡದೆ ರಾಷ್ಟ್ರೀಯ ಹಿತಾಸಕ್ತಿಯನ್ನು ಸಮರ್ಥಿಸಿಕೊಂಡಿದ್ದು ಒಂದು ವಿಜಯ. ಸರ್ಕಾರ ಈ ರೀತಿ ನಿರ್ಧಾರ ತೆಗೆದುಕೊಳ್ಳುವುದಕ್ಕೆ ರೈತರು ಮತ್ತು ಕಾಂಗ್ರೆಸ್ ಪಕ್ಷದ ಒತ್ತಡವೇ ಕಾರಣ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುಂಗ್ ಸುರ್ಜೇವಾಲಾ ಹೇಳಿದ್ದಾರೆ.

ದೇಶ ಮೊದಲು

ದೇಶ ಮೊದಲು

ಎಂದಿಗೂ ದೇಶ ಮೊದಲು ಎಂಬುದನ್ನು ಪ್ರತಿಪಾದಿಸುತ್ತಿರುವ ನೀವು, ಆರ್ ಸಿಇಪಿಗೆ ಸಹಿ ಮಾಡದೆ ಭಾರತೀಯರ ನಿಲುವನ್ನು ಸಮರ್ಥಿಸಿದ್ದೀರಿ, ನಿಮಗೆ ಧನ್ಯವಾದಗಳು. ಭಾರತೀಯ ಜವಳಿ ಉದ್ಯಮ ನಿಮಗೆ ಎಂದಿಗೂ ಋಣಿಯಾಗಿರುತ್ತದೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಟ್ವೀಟ್ ಮಾಡಿದ್ದಾರೆ.

ಮೋದಿಯವರ ಗಟ್ಟಿ ನಾಯಕತ್ವದ ಪರಿಣಾಮ

ಮೋದಿಯವರ ಗಟ್ಟಿ ನಾಯಕತ್ವದ ಪರಿಣಾಮ

ಭಾರತ ಆರ್ ಸಿಇಪಿಗೆ ಸಹಿ ಮಾಡದೆ ಇರುವುದು ಪ್ರಧಾನಿ ನರೇಂದ್ರ ಮೋದಿ ಅವರ ಗಟ್ಟಿ ನಾಯಕತ್ವಕ್ಕೆ ಸಾಕ್ಷಿ. ಅವರು ಎಂದಿಗೂ ತಮಗೆ ರಾಷ್ಟ್ರದ ಹಿತಾಸಕ್ತಿ ಎಲ್ಲಕ್ಕಿಂತಲೂ ಮುಖ್ಯ ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.

ಒತ್ತಡದ ನಡುವೆಯೂ ಪಟ್ಟು ಬಿಡದ ಮೋದಿ

ಒತ್ತಡದ ನಡುವೆಯೂ ಪಟ್ಟು ಬಿಡದ ಮೋದಿ

ಆರ್ ಸಿಇಪಿಗೆ ಸಹಿ ಮಾಡದೆ ಉಳಿಯುವ ಮೂಲಕ ಪ್ರಧಾನಿ ನರೇಂದ್ರ ಮೊದಿ ದೇಶದ ಹಿತಾಸಕ್ತಿಯೇ ಎಲ್ಲಕ್ಕಿಂತ ಮುಖ್ಯ ಎಂಬುದನ್ನು ತೋರಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡವಿದ್ದರೂ ಅವರು ತಮ್ಮ ಪತ್ತನ್ನು ಬಿಟ್ಟುಕೊಡಲಿಲ್ಲ ಎಂದು ಬಿಜೆಪಿ ನಾಯಕ ಬಿ ಎಲ್ ಸಂತೋಷ್ ಟ್ವೀಟ್ ಮಾಡಿದ್ದಾರೆ.

English summary
Many leaders Welcomes PM Narendra Modi;s decision to Not To sign RCEP,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X