ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಸಿಬಿಐ ಕುರಿತು ಸುಪ್ರೀಂ ತೀರ್ಪು: ಮೋದಿ ಸರ್ಕಾರಕ್ಕೆ ಕಪಾಳಮೋಕ್ಷ!'

|
Google Oneindia Kannada News

ನವದೆಹಲಿ, ಜನವರಿ 08: ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರನ್ನು ಕಡ್ಡಾಯ ರಜೆಯ ಮೇಲೆ ಕಳಿಸಿರುವ ಕೇಂದ್ರ ಸರ್ಕಾರದ ಕ್ರಮಕ್ಕೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದೆ.

ಕೇಂದ್ರ ತನಿಖಾ ದಳ(ಸಿಬಿಐ)ದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪ ಬಂದ ಹಿನ್ನೆಲೆಯಲ್ಲಿ ಸಿಬಿಐ ನಿರ್ದೇಶಕ ಮತ್ತು ವಿಶೇಷ ನಿರ್ದೇಶಕರನ್ನು ಕೇಂದ್ರ ಸರ್ಕಾರ ಕಡ್ಡಾಯ ರಜೆಯ ಮೇಲೆ ಕಳಿಸಿತ್ತು. ಕೇಂದ್ರದ ಈ ಕ್ರಮವನ್ನು ಪ್ರಶ್ನಿಸಿ ಅಲೋಕ್ ವರ್ಮಾ ಅವರು ಸುಪ್ರೀಂ ಕೋರ್ಟ್ ಮೊರೆಹೋಗಿದ್ದರು.

ಈ ಪ್ರಕರಣದ ತೀರ್ಪನ್ನು ಮಂಗಳವಾರ ಪ್ರಕಟಿಸಿದ ಸುಪ್ರೀಂ ಕೋರ್ಟ್, ಅಲೋಕ್ ವರ್ಮಾ ಅವರು ಸಿಬಿಐ ಮುಖ್ಯಸ್ಥರಾಗಿ ಮುಂದುವರಿಯಬಹುದು ಎಂದಿದೆ.

LIVE: ಸಿಬಿಐ ಕುರಿತು ಸುಪ್ರೀಂ ತೀರ್ಪು: ಮೋದಿ ಸರ್ಕಾರಕ್ಕೆ ಮುಖಭಂಗLIVE: ಸಿಬಿಐ ಕುರಿತು ಸುಪ್ರೀಂ ತೀರ್ಪು: ಮೋದಿ ಸರ್ಕಾರಕ್ಕೆ ಮುಖಭಂಗ

ಸುಪ್ರೀಂ ಕೋರ್ಟ್ ನ ಈ ನಿಲುವನ್ನು ಸಾಕಷ್ಟು ಮುಖಂಡರು ಸ್ವಾಗತಿಸಿದ್ದಲ್ಲದೆ, ಮೋದಿ ಸರ್ಕಾರಕ್ಕೆ ಇದು ಮುಖಭಂಗವೆಂದಿದ್ದಾರೆ.

Array

ಮೋಖದಿ ಸರ್ಕಾರಕ್ಕೆ ಕಪಾಳಮೋಕ್ಷ

ಸಿಬಿಐ ನಿರ್ದೇಶಕರನ್ನಾಗಿ ಅಲೋಕ್ ವರ್ಮಾ ಅವರನ್ನೇ ಮುಂದುವರಿಸಲು ನಿರ್ಧಾರ ತೆಗೆದುಕೊಳ್ಳುವ ಮೂಲಕ ಸುಪ್ರೀಂ ಕೋರ್ಟ್ ನರೇಂದ್ರ ಮೋದಿ ಸರ್ಕಾರಕ್ಕೆ ಕಪಾಳಮೋಕ್ಷ ಮಾಡಿದೆ. ಈ ಪ್ರಕರಣ ಕೇಂದ್ರ ಸರ್ಕಾರದ ಆಡಳಿತದ ವೈಫಲ್ಯವನ್ನು ಎತ್ತಿಹಿಡಿದಿತ್ತು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿದ್ದಾರೆ.

ಸಿಬಿಐ ವಿವಾದದಲ್ಲಿ ಸರ್ಕಾರಕ್ಕೆ ಹಿನ್ನಡೆ: ಕೋರ್ಟ್ ಹೇಳಿದ್ದೇನು? ಸಿಬಿಐ ವಿವಾದದಲ್ಲಿ ಸರ್ಕಾರಕ್ಕೆ ಹಿನ್ನಡೆ: ಕೋರ್ಟ್ ಹೇಳಿದ್ದೇನು?

ಮಲ್ಲಿಕಾರ್ಜುನ ಖರ್ಗೆ

ಮಲ್ಲಿಕಾರ್ಜುನ ಖರ್ಗೆ

"ನಾವು ವೈಯಕ್ತಿಕವಾಗಿ ಯಾರನ್ನೂ ವಿರೋಧಿಸುವುದಿಲ್ಲ. ಆದರೆ ಸುಪ್ರೀಂ ಕೋರ್ಟಿನ ತೀರ್ಪನ್ನು ಸ್ವಾಗತಿಸುತ್ತೇವೆ. ಇದು ಸರ್ಕಾರಕ್ಕೆ ಒಂದು ಪಾಠ. ಸರ್ಕಾರದ ಸಂಸ್ಥೆಗಳನ್ನು ಇಂದು ನೀವು ದುರ್ಬಳಕೆ ಮಾಡಿಕೊಳ್ಳಬಹುದು, ನಾಳೆ ಇನ್ನೊಬ್ಬರು ಮಾಡಿಕೊಳ್ಳುತ್ತಾರೆ. ಆಗ ಪ್ರಜಾಪ್ರಭುತ್ವಕ್ಕೆ ಉಳಿಯವುದು ಹೇಗೆ?" - ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಮುಖಂಡ

ಸಿಬಿಐ ವಿವಾದ : ಸುಪ್ರೀಂನಲ್ಲಿ ಅಲೋಕ್ ವರ್ಮಾ ಭವಿಷ್ಯ ನಿರ್ಧಾರಸಿಬಿಐ ವಿವಾದ : ಸುಪ್ರೀಂನಲ್ಲಿ ಅಲೋಕ್ ವರ್ಮಾ ಭವಿಷ್ಯ ನಿರ್ಧಾರ

ಅರವಿಂದ್ ಕೇಜ್ರಿವಾಲ್

ಸಿಬಿ ಐ ನಿರ್ದೇಶಕರ ಕುರಿತು ಸುಪ್ರೀಂ ಕೋರ್ಟ್ ನೀದಿದ ತೀರ್ಪು ಮೋದಿ ಸರ್ಕಾರಕಕೆ ಛೀಮಾರಿ. ಮೋದಿ ಸರ್ಕಾರ ಈ ದೇಶದ ಪ್ರಜಾಪ್ರಭುತ್ವ ಮತ್ತು ಎಲ್ಲಾ ಸರ್ಕಾರಿ ಸಂಸ್ಥೆಗಳನ್ನು ನಾಶಮಾಡಲು ಪ್ರಯತ್ನಿಸುತ್ತಿದೆ. ಪ್ರಧಾನಿ ನರೇಮದ್ರ ಮೋದಿ ಅವರಿಗೆ ನೇರವಾಗಿ ಸಂಬಂಧಿಸಿದ ರಫೇಲ್ ಡೀಲ್ ವಿಚಾರಣೆಯನ್ನು ಮುಚ್ಚಿಹಾಕಲು ರಾತ್ರೋ ರಾತ್ರಿ ಸಿಬಿಐ ನಿರ್ದೇಶಕರನ್ನು ಕಿತ್ತೆಸೆದಿದ್ದು ಸತ್ಯವಲ್ಲವೇ? -ಅರವಿಂದ್ ಕೇಜ್ರಿವಾಲ್, ದೆಹಲಿ ಮುಖ್ಯಮಂತ್ರಿ

ಸರ್ಕಾರಕ್ಕೆ ಪಾಠ

ಕೇಂದ್ರ ಸರ್ಕಾರ ರಾತ್ರೋರಾತ್ರಿ ತೆಗೆದುಕೊಂಡಿದ್ದ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದೆ. ಆದರೆ ಸಿಬಿಐ ನಿರ್ದೇಶಕರ ಕೈಗಳನ್ನು ಕಟ್ಟಿದೆ. ಯಾವುದೇ ಮಹತ್ವದ ನಿರ್ಧಾರ ಕೈಗೊಳ್ಳುವಾಗ ಆಯ್ಕೆ ಸಮಿತಿಯ ವಿಶ್ವಾಸ ತೆಗೆದುಕೊಳ್ಳಬೇಕು ಎಂಬ ಪಾಠವನ್ನು ಸರ್ಕಾರ ಈ ಮೂಲಕ ಕಲಿಯಬೇಕಿದೆ - ಬರ್ಖಾ ದತ್, ಪತ್ರಕರ್ತೆ

English summary
Supreme Court on Tuesday pronounced the verdict on plea filed by Central Bureau of Investigation (CBI) Director Alok Verma. The top court rejects Central government's decision of sending him on leave. Here are Leaders' reactions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X