ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿರ್ಭಯಾ ನಡತೆ ಬಗ್ಗೆಯೇ ಪ್ರಶ್ನಿಸಿದ ಹಂತಕರ ಪರ ವಕೀಲ

|
Google Oneindia Kannada News

ನವ ದೆಹಲಿ ಮಾರ್ಚ್ 20: 2012 ರಲ್ಲಿ ನಡೆದ ನಿರ್ಭಯಾ ಅತ್ಯಾಚಾರ ಪ್ರಕರಣದ ಅಪರಾಧಿಗಳಿಗೆ ಕೊನೆಗೂ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಈ ತೀರ್ಪಿನ ಬಗ್ಗೆ ಹಂತಕ ಪರ ವಕೀಲ ಅಜಯ್ ಪ್ರಕಾಶ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ.

ವಕೀಲ ಎ ಪಿ ಸಿಂಗ್ ನಾಲ್ಕು ಹಂತಕರನ್ನು ಬಚಾವ್ ಮಾಡಲು ಏನೇನೋ ತಂತ್ರಗಳನ್ನು ರೂಪಿಸಿದರು. ಆದರೆ, ಹಂತಕರು ಮರಣದಂಡನೆಯಿಂದ ತಪ್ಪಿಸಿಕೊಳ್ಳಲು ಆಗಲಿಲ್ಲ. ಇತ್ತ ಕೇಸ್ ಸೋತ ಬೇಸರದಲ್ಲಿ ಮಾತನಾಡಿದ ವಕೀಲ ಎಂ ಪಿ ಸಿಂಗ್ ವಿವಾದ ಸೃಷ್ಟಿಸುವ ಹೇಳಿಕೆ ನೀಡಿದ್ದಾರೆ.

ನಿರ್ಭಯಾ ಸಾವಿಗೆ ನ್ಯಾಯ: ಅತ್ಯಾಚಾರಿಗಳಿಗೆ ಕೊನೆಗೂ ಗಲ್ಲುನಿರ್ಭಯಾ ಸಾವಿಗೆ ನ್ಯಾಯ: ಅತ್ಯಾಚಾರಿಗಳಿಗೆ ಕೊನೆಗೂ ಗಲ್ಲು

ಅಪರಾಧಿ ಪವನ್ ತಾಯಿಯ ಭೇಟಿಗೆ ಅವಕಾಶ ನೀಡಲಿಲ್ಲ. ಈ ಬಗ್ಗೆ ಮಾತನಾಡುವ ವೇಳೆ ನಿರ್ಭಯಾ ನಡತೆ ಬಗ್ಗೆಯೇ ವಕೀಲ ಎಂ ಪಿ ಸಿಂಗ್ ಪ್ರಶ್ನೆ ಮಾಡಿದ್ದಾರೆ. ಎ ಪಿ ಸಿಂಗ್ ಹೇಳಿಕೆಗೆ ಸ್ಥಳದಲ್ಲಿಯೇ ವಿರೋಧ ವ್ಯಕ್ತವಾಯಿತು. ಅಲ್ಲಿಯೇ ಇದ್ದ ಮಹಿಳೆ ಎಂ ಪಿ ಸಿಂಗ್ ವಿರುದ್ಧ ಸಿಡಿದೆದ್ದರು.

ನಿರ್ಭಯಾ ನಡತೆ ಬಗ್ಗೆ ಪ್ರಶ್ನೆ

ನಿರ್ಭಯಾ ನಡತೆ ಬಗ್ಗೆ ಪ್ರಶ್ನೆ

ವಕೀಲ ಎ ಪಿ ಸಿಂಗ್ ನಿರ್ಭಯಾ ಕೇಸ್ ತೀರ್ಪಿನ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಈ ವೇಳೆ ನಿರ್ಭಯಾ ನಡತೆ ಬಗ್ಗೆಯೇ ಪ್ರಶ್ನೆ ಮಾಡಿದ್ದಾರೆ. ಎ ಪಿ ಸಿಂಗ್ ಹಂತಕರ ಪರ ವಾದ ಮಂಡಿಸಿದ್ದು, ಕೇಸ್ ತಮ್ಮ ಕೈ ಮೀರಿ ಹೋಗಿತ್ತು. ಕೇಸ್ ಸೋತ ನಂತರ, ಆಕ್ರೋಶದಿಂದಲೇ ಮಾತನಾಡಿದ ಅವರು, ಈ ಘಟನೆಯಲ್ಲಿ ನಿರ್ಭಯಾರದ್ದು ಕೂಡ ತಪ್ಪು ಇದೆ ಎನ್ನುವಂತೆ ಹೇಳಿಕೆ ನೀಡಿದ್ದಾರೆ.

ರಾತ್ರಿ ಎಲ್ಲಿಗೆ, ಯಾರ ಜೊತೆ ಹೋಗಿದ್ದರು?

ರಾತ್ರಿ ಎಲ್ಲಿಗೆ, ಯಾರ ಜೊತೆ ಹೋಗಿದ್ದರು?

ಅಪರಾಧಿ ಪವನ್ ಗುಪ್ತಾ ತಾಯಿ ಪರ ಎ ಪಿ ಸಿಂಗ್ ಮಾತನಾಡುವ ವೇಳೆ ಪತ್ರಕರ್ತರೊಬ್ಬರು ನಿರ್ಭಯಾ ತಾಯಿ ಬೆಂಬಲಕ್ಕೆ ನಿಂತರು. ಆಗ ''ಆಕೆ (ನಿರ್ಭಯಾ) ಅಂದು ಏಕೆ ಅಷ್ಟು ರಾತ್ರಿಯಲ್ಲಿ ಹೊರಗೆ ಹೊಗಿದ್ದರು, ಯಾರ ಜೊತೆಗೆ ಹೊಗಿದ್ದರು. ಇದು ಯಾಕೆ ಅವರ ತಾಯಿಗೆ ತಿಳಿದಿಲ್ಲ. ಇದನ್ನು ಹೋಗಿ ಪ್ರಶ್ನೆ ಮಾಡಿ.'' ಎಂದು ವಕೀಲ ಎಂ ಪಿ ಸಿಂಗ್ ವಿವಾದ ಹುಟ್ಟಿಸುವ ಹೇಳಿಕೆ ನೀಡಿದ್ದಾರೆ.

ಈ ತಾಯಿ ನೋವು ಸಹ ಅರ್ಥ ಮಾಡಿಕೊಳ್ಳಬೇಕು

ಈ ತಾಯಿ ನೋವು ಸಹ ಅರ್ಥ ಮಾಡಿಕೊಳ್ಳಬೇಕು

ಅಪರಾಧಿ ಪವನ್ ತಾಯಿಗೆ ಮಗನ ಭೇಟಿಗೆ ಅವಕಾಶ ನೀಡಲಿಲ್ಲ. ''ಆಕೆ ವಿಕಲಚೇತನರಾಗಿದ್ದು ಪುತ್ರನ ಭೇಟಿಗಾಗಿ ಕಾದಿದ್ದರು. ಒಬ್ಬ ತಾಯಿಯ ನೋವನ್ನು ನೀವೆಲ್ಲರೂ ಅರ್ಥ ಮಾಡಿಕೊಳ್ಳಬೇಕು. ಒಬ್ಬ ತಾಯಿ (ನಿರ್ಭಯಾ ತಾಯಿ) ಹಿಂದೆ ಎಲ್ಲರೂ ಓಡುತ್ತಿದ್ದಾರೆ. ಹಾಗಾದರೆ ಪವನ್ ತಾಯಿಗೆ ಯಾವುದೇ ಬೆಲೆ ಇಲ್ವಾ?'' ಎಂದು ಎ ಪಿ ಸಿಂಗ್ ಪ್ರಶ್ನಿಸಿದ್ದಾರೆ.

ವಿವಾದ ಸೃಷ್ಟಿಸುವ ಹೇಳಿಕೆ

ವಿವಾದ ಸೃಷ್ಟಿಸುವ ಹೇಳಿಕೆ

ಅಪರಾಧಿಗಳಾದ ಪವನ್ ಗುಪ್ತಾ ಅಕ್ಷಯ್, ಮುಖೇಶ್ ಕುಟುಂಬ ಭೇಟಿಗೆ ಎಂ ಪಿ ಸಿಂಗ್ ಪ್ರಯತ್ನಪಟ್ಟರು. ಆದರೆ, ಅದು ಸಾಧ್ಯ ಆಗಲಿಲ್ಲ. ಹೀಗಾಗಿ ತಮ್ಮ ಆಕ್ರೋಶವನ್ನು ಹೊರಹಾಕಿದರು. ನಿರ್ಭಾಯ ತಾಯಿಯ ನೋವು ಅರ್ಥ ಮಾಡಿಕೊಳ್ಳುವವರಿಗೆ, ಪವನ್ ತಾಯಿ ನೋವು ಏಕೆ ಅರ್ಥ ಆಗುತ್ತಿಲ್ಲ ಎಂದರು. ಈ ವೇಳೆ ನಿರ್ಭಯಾ ನಡತೆ ಬಗ್ಗೆ ಬಾಯಿ ಬಿಟ್ಟಿದ್ದಾರೆ. ಈ ಹೇಳಿಕೆ ವಿವಾದ ಹುಟ್ಟಿಸಿದೆ.

English summary
Nirbhaya case: Lawyer Ajay Prakash Singh gave controversial statement over Nirbhaya character.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X