ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಂಎಸ್‌ಪಿ ಕಾನೂನು ಜಾರಿಗೊಳಿಸಲು ಮೋದಿ ಸರ್ಕಾರಕ್ಕೆ ಸಾಧ್ಯವಿಲ್ಲ: ಖಟ್ಟರ್

|
Google Oneindia Kannada News

ನವದೆಹಲಿ, ನವೆಂಬರ್ 27: ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ) ಕಾಯ್ದೆ ಜಾರಿಗೆ ತರಲು ಮೋದಿ ಸರ್ಕಾರಕ್ಕೆ ಸಾಧ್ಯವಿಲ್ಲ ಎಂದು ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಬಳಿಕ ನಡೆದ ಸಭೆ ಬಳಿಕ ಮಾತನಾಡಿರುವ ಅವರು, ಮೂರು ಕೃಷಿ ಕಾನೂನು ಕುರಿತು ಉಭಯ ಚರ್ಚೆ ನಡೆಸಿದ್ದೇವೆ. ಕೃಷಿ ಕಾನೂನುಗಳನ್ನು ಹಿಂತೆಗೆಳ್ಳುವ ನಿರ್ಧಾರದಿಂದಾಗಿ ಉತ್ತಮ ಸಂದೇಶ ರವಾನೆಯಾಗಿದೆ. ಆದರೆ ಎಲ್ಲ ಬೆಳೆಗಳಿಗ ಎಂಎಸ್ ಪಿ ಖಾತರಿಪಡಿಸುವ ಕಾನೂನು ತರಲು ಸಾಧ್ಯವಿಲ್ಲ ಅನ್ನೋ ವಿಚಾರವನ್ನು ತಿಳಿಸಿದರು.

ಮೋದಿ ಸರ್ಕಾರಕ್ಕೆ ಜ.26ರವರೆಗೆ ಗಡುವು: MSPಗಾಗಿ ಒತ್ತಾಯಮೋದಿ ಸರ್ಕಾರಕ್ಕೆ ಜ.26ರವರೆಗೆ ಗಡುವು: MSPಗಾಗಿ ಒತ್ತಾಯ

ಕೃಷಿ ಕಾನೂನು ಹಿಂಪಡೆಯುವ ಘೋಷಣೆ ಬಳಿಕ ಎಂಎಸ್ ಪಿ ಕಾನೂನು ಜಾರಿಗೆ ರೈತರು ಆಗ್ರಹಿಸುತ್ತಿದ್ದಾರೆ. ಆದ್ರೆ, ರೈತರ ಬೆಳೆಗಳಿಗ ಕನಿಷ್ಠ ಬೆಂಬಲ ಬೆಲೆ ಕಾಯ್ದೆ ಜಾರಿಗೆ ತರಲು ಸರ್ಕಾರಕ್ಕೆ ಸಾಧ್ಯವಿಲ್ಲ ಅನ್ನೋ ವಿಚಾರ ಬಹಿರಂಗವಾಗಿದೆ.

Law On MSP Unlikely: Haryana CM Manohar Lal Khattar After Meeting With PM Modi

ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವ ನಿರ್ಧಾರವು ಉತ್ತಮ ಸಂದೇಶವನ್ನು ನೀಡಿದ್ದರೂ, ಎಲ್ಲಾ ಬೆಳೆಗಳಿಗೆ ಎಂಎಸ್‌ಪಿ ಖಾತರಿಪಡಿಸುವ ಕಾನೂನು ತರಲು ಸರಕಾರಕ್ಕೆ ಸಾಧ್ಯವಿಲ್ಲ ಎಂದು ಸಿಎಂ ಖಟ್ಟರ್ ಹೇಳಿದರು. 'ಸರ್ಕಾರವು ಎಂಎಸ್‌ಪಿ ಕಾನೂನನ್ನು ತಂದರೆ ಎಲ್ಲಾ ಬೆಳೆಗಳನ್ನು ಖರೀದಿಸುವ ಒತ್ತಡಕ್ಕೆ ಸಿಲುಕುತ್ತದೆ. ಅದು ಸಾಧ್ಯವಿಲ್ಲ. ಹರ್ಯಾಣದಲ್ಲಿಯೇ ಒಂದು ಡಝನ್ ಬೆಳೆಗಳನ್ನು ಎಂಎಸ್‌ಪಿ ದರದಲ್ಲಿ ಖರೀದಿಸಲಾಗುತ್ತದೆ ಎಂದು ಖಟ್ಟರ್ ಹೇಳಿದರು.

ಮೂರು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆಯ ನೇತೃತ್ವವಹಿಸಿರುವ ರೈತ ಸಂಘಗಳು ವಿವಾದಾತ್ಮಕ ಕಾನೂನುಗಳನ್ನು ರದ್ದುಗೊಳಿಸುವ ಕೇಂದ್ರದ ನಿರ್ಧಾರವನ್ನು ಅನುಮೋದಿಸಿವೆ. ಆದಾಗ್ಯೂ, ಬೆಳೆಗಳಿಗೆ ಎಂಎಸ್‌ಪಿ ಖಾತ್ರಿಗೆ ಕಾನೂನು ಸೇರಿದಂತೆ ಹಲವು ಬೇಡಿಕೆಗಳು ಬಾಕಿ ಉಳಿದಿವೆ ಎಂದು ಅವುಗಳು ಪ್ರತಿಪಾದಿಸಿವೆ.

ಸರ್ಕಾರ ಎಂಎಸ್ ಪಿ ಕಾನೂನನ್ನು ತಂದರೆ, ಸಾಧ್ಯವಾಗದ ಎಲ್ಲ ಬೆಳೆಗಳನ್ನು ಖರೀದಿಸಲು ಒತ್ತಡ ಹೇರಲಾಗುತ್ತದೆ ಅನ್ನೋದನ್ನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ರೈತರು ವಾಪಸ್ ಮನೆಗೆ ಹೋಗಬೇಕೆನ್ನುವುದು ಪ್ರಧಾನಿಯವರ ಚಿಂತನೆಯಾಗಿದೆ. ಆದಾಗ್ಯೂ ಬೆಳೆಗಳಿಗೆ ಎಂಎಸ್ ಪಿ ಸೇರಿದಂತೆ ಹಲವು ಬೇಡಿಕೆಗಳು ಬಾಕಿ ಉಳಿದಿವೆ ಅಂತಾ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ತಿಳಿಸಿದರು.

ಮುಂಬರುವ ಸಂಸತ್ತಿನ ಅಧಿವೇಶನದಲ್ಲಿ ಕೇಂದ್ರ ಸರಕಾರ ರದ್ದುಗೊಳಿಸುವುದಾಗಿ ಘೋಷಿಸಿರುವ ಮೂರು ಕೃಷಿ ಕಾನೂನುಗಳ ಕುರಿತು ಉಭಯ ನಾಯಕರು ಚರ್ಚೆ ನಡೆಸಿದರು.

ನರೇಂದ್ರ ಮೋದಿ ಸರ್ಕಾರವು ಎಲ್ಲಾ ಮೂರು ಕೇಂದ್ರ ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಕ್ಯಾಬಿನೆಟ್ ನಿರ್ಧಾರದ ನಂತರವೂ ದೆಹಲಿ-ಎನ್‌ಸಿಆರ್‌ನ ನಾಲ್ಕು ಗಡಿಗಳಲ್ಲಿ ರೈತರ ಆಂದೋಲನ ಮುಂದುವರೆದಿದೆ.

ಕಾನೂನು ಹಿಂಪಡೆಯುವ ಘೋಷಣೆಯ ದಿನವೇ ಯುನೈಟೆಡ್ ಕಿಸಾನ್ ಮೋರ್ಚಾ ಕನಿಷ್ಠ ಬೆಂಬಲ ಬೆಲೆ ಸೇರಿದಂತೆ 6 ಹೊಸ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಧರಣಿ ಸತ್ಯಾಗ್ರಹ ನಡೆಸುತ್ತಿದೆ.

ಈ ಮಧ್ಯೆ ಭಾರತೀಯ ಕಿಸಾನ್ ಒಕ್ಕೂಟದ ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕೈತ್ ಅವರ ಪತ್ನಿ ಸುನೀತಾ ರಾಣಿ ಅವರು ದೆಹಲಿ-ಯುಪಿಯ ಗಾಜಿಪುರ ಗಡಿಯಲ್ಲಿ ಧರಣಿ ಪ್ರತಿಭಟನೆಯ ನೇತೃತ್ವ ವಹಿಸಿದ್ದಾರೆ. ರಾಕೇಶ್ ಟಿಕಾಯತ್ ಅವರ ಪತ್ನಿ ಸುನೀತಾ ರಾಣಿ ಅವರು ಸುದ್ದಿಗಾರರೊಂದಿಗಿನ ಸಂವಾದದ ವೇಳೆ, ಕೇಂದ್ರ ಸರ್ಕಾರವು ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಜಾರಿಗೆ ತರುವವರೆಗೆ ರೈತ ಪ್ರತಿಭಟನಾಕಾರರು ತಮ್ಮ ಮನೆಗಳಿಗೆ ಹಿಂತಿರುಗುವುದಿಲ್ಲ ಎಂದು ಹೇಳಿದ್ದಾರೆ. ಎರಡು-ನಾಲ್ಕು ದಿನಗಳಲ್ಲಿ ಎಂಎಸ್‌ಪಿ ಕುರಿತು ಕಾನೂನು ಮಾಡಲಾಗುವುದು ಎಂದು ಸುನೀತಾ ರಾಣಿ ಹೇಳಿದ್ದಾರೆ.

ಇಲ್ಲಿರುವವರೆಲ್ಲ ಮನೆಯವರು ಯಾರೂ ಹೊರಗಿನವರಲ್ಲ ಎಂದು ಬಿಕೆಯು ಮುಖಂಡ ರಾಕೇಶ್ ಟಿಕಾಯತ್ ಅವರ ಶೈಲಿಯಲ್ಲೇ ಪತ್ನಿ ಸುನೀತಾ ರಾಣಿ ಹೇಳಿದರು. ಮೂರು ಕೇಂದ್ರ ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವವರೆಗೂ ತಾನು ಮನೆಗೆ ಹಿಂತಿರುಗುವುದಿಲ್ಲ ಎಂದು ರಾಕೇಶ್ ಟಿಕಾಯತ್​ ಭರವಸೆ ನೀಡಿದ್ದರು. ಕೆಲವು ತಿಂಗಳ ಹಿಂದೆಯೂ ಅವರು ತಮ್ಮ ಜಿಲ್ಲೆ ಸಹರಾನ್‌ಪುರಕ್ಕೆ ಹೋಗಿದ್ದರು, ಆದರೆ ಅವರ ಗ್ರಾಮ ಮತ್ತು ಮನೆಗೆ ಹೋಗಲಿಲ್ಲ.

700 ರೈತರ ಸಾವಿನ ಬಗ್ಗೆಯೂ ಪ್ರಸ್ತಾಪ..!: ಎಂಎಸ್‌ಪಿ ಖಾತರಿ ಕಾನೂನು ಮತ್ತು 700 ಕ್ಕೂ ಹೆಚ್ಚು ರೈತರ ಹುತಾತ್ಮ ವಿಷಯದ ಬಗ್ಗೆ ಕೇಂದ್ರ ಸರ್ಕಾರ ಮಾತನಾಡುವವರೆಗೆ ನಾವು ಆಂದೋಲನ ಸ್ಥಳದಿಂದ ಅವರ ಮನೆಗಳಿಗೆ ಹೋಗುವುದಿಲ್ಲ ಎಂದು ರಾಕೇಶ್ ಟಿಕಾಯತ್ ಅವರ ಪತ್ನಿ ಸುನೀತಾ ರಾಣಿ ಹೇಳಿದ್ದಾರೆ. ರಾಕೇಶ್ ಟಿಕಾಯತ್ ಅವರ ಪತ್ನಿ ಸುನಿತಾ ಕೂಡ ಈಗ ಮನೆಗೆ ಹೋಗುವ ಸಮಯವಲ್ಲ ಎಂದು ಹೇಳಿದ್ದಾರೆ.

ಎಂಎಸ್‌ಪಿ ಕಾನೂನಿನ ಬಗ್ಗೆ ಇಲ್ಲಿಯವರೆಗೆ ಯಾವುದೇ ಮಾತುಕತೆ ನಡೆದಿಲ್ಲ. 700ಕ್ಕೂ ಹೆಚ್ಚು ರೈತರು ಹುತಾತ್ಮ ರಾಗಿದ್ದಾರೆ ಅವರ ಕುಟುಂಬಗಳ ಗತಿಯೇನು? ಯಾರು ಜವಾಬ್ದಾರಿ? ಎಂಬೆಲ್ಲ ಪ್ರಶ್ನೆಗಳ ಮೂಲಕ ಕೇಂದ್ರ ಸರ್ಕಾರದ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.

Recommended Video

Omicron ಎಷ್ಟು ಅಪಾಯಕಾರಿ ಎಂದು ತಿಳಿಯಲು ಇನ್ನೂ ಕಾಲಾವಕಾಶ ಬೇಕು | Oneindia Kannada

English summary
Haryana Chief Minister Manohar Lal Khattar on Friday said that it is not possible to make a law guaranteeing Minimum Support Price (MSP) for crops as it would put pressure on the government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X