ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ಧಾರ್ಮಿಕ ಸಭೆಯಿಂದ 2 ದಿನದಲ್ಲಿ 647 ಜನರಿಗೆ ಸೋಂಕು

|
Google Oneindia Kannada News

ದೆಹಲಿ, ಏಪ್ರಿಲ್ 3: ದೆಹಲಿಯ ತಬ್ಲಿಘಿಯ ಜಮಾತ್ ಮಸೀದಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವರು ಪೈಕಿ ಬಹುತೇಕರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಇದರಿಂದ ದೇಶದಲ್ಲಿ ಆತಂಕ ಹೆಚ್ಚಾಗಿದೆ.

ವಿದೇಶಿಯರು ಸೇರಿದಂತೆ ದೇಶದ ವಿವಿಧ ರಾಜ್ಯಗಳಿಂದ ಸುಮಾರು 4 ಸಾವಿರವರೆಗೂ ಜನರು ಈ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದರು ಎಂದು ಹೇಳಲಾಗಿದೆ. ಈಗ ಎಲ್ಲರನ್ನು ಹುಡುಕಿ, ಸಂಪರ್ಕಿಸಿ ಕ್ವಾರೆಂಟೈನ್‌ಗೆ ಒಳಪಡಿಸಲಾಗುತ್ತಿದೆ.

ಶಾಕಿಂಗ್: ಪ್ರಖ್ಯಾತ ಕೊರೊನಾ ವೈರಸ್ ಎಕ್ಸ್ ಪರ್ಟ್ ಗೆ ಜೀವ ಬೆದರಿಕೆ.!ಶಾಕಿಂಗ್: ಪ್ರಖ್ಯಾತ ಕೊರೊನಾ ವೈರಸ್ ಎಕ್ಸ್ ಪರ್ಟ್ ಗೆ ಜೀವ ಬೆದರಿಕೆ.!

ದೆಹಲಿ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದವರ ಪೈಕಿ, ಕಳೆದ 2 ದಿನದಲ್ಲಿ ಒಟ್ಟು 647 ಜನರಲ್ಲಿ ಕೊರೊನಾ ಪಾಸಿಟಿವ್ ಬಂದಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ಕಾರ್ಯದರ್ಶಿ ಲುವ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.

ಭಾರತದಲ್ಲಿ ಇದುವರೆಗೂ 2031 ಪ್ರಕರಣಗಳು ದೃಢವಾಗಿದ್ದು, 56 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ. ಇದರಲ್ಲಿ ನಿನ್ನೆಯಿಂದ ಇಂದಿನವರೆಗೂ 336 ಜನರಲ್ಲಿ ಪಾಸಿಟಿವ್ ಬಂದಿದೆ. ಮೃತಪಟ್ಟ 56 ಜನರ ಪೈಕಿ 12 ಜನರು ನಿನ್ನೆ ನಿಧನರಾಗಿದ್ದಾರೆ. ಒಟ್ಟು 157 ಜನರು ಕೊರೊನಾದಿಂದ ಚೇತರಿಕೆ ಕಂಡಿದ್ದಾರೆ.

Last 2 Days 647 COVID Cases Confirmed Related Tableeghi Jamaat

ಲಾಕ್‌ಡೌನ್‌ ಉಲ್ಲಂಘಿಸಿದ್ದಕ್ಕೆ ತಂದೆ ಮೇಲೆ ಮಗನಿಂದ ಕೇಸ್ಲಾಕ್‌ಡೌನ್‌ ಉಲ್ಲಂಘಿಸಿದ್ದಕ್ಕೆ ತಂದೆ ಮೇಲೆ ಮಗನಿಂದ ಕೇಸ್

ಅಂಡಮಾನ್ ಮತ್ತು ನಿಕೊಬಾರ್, ಅಸ್ಸಾಂ, ದೆಹಲಿ, ಹಿಮಾಚಲ ಪ್ರದೇಶ, ಹರಿಯಾಣ, ಜಮ್ಮು ಮತ್ತು ಕಾಶ್ಮೀರ, ಕರ್ನಾಟಕ, ಝಾರ್ಕಂಡ್, ಮಹಾರಾಷ್ಟ್ರ, ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ದೆಹಲಿ ಸಭೆಯಲ್ಲಿ ಪಾಲ್ಗೊಂಡಿದ್ದವರಿಗೆ ಸೋಂಕು ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

English summary
In the last two days, because of the Tablighi Jamaat incident, a total of 647 positive case have been reported in 14 states, says Health Ministry Joint Secretary Lav Aggarwal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X