ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಲಿತ್ ಮೋದಿ ವೀಸಾ ವಿವಾದದಲ್ಲಿ ಸುಷ್ಮಾ, ಟ್ವಿಟ್ಟರ್ ಪ್ರತಿಕ್ರಿಯೆ

By Mahesh
|
Google Oneindia Kannada News

ನವದೆಹಲಿ, ಜೂ.14: ಇಂಡಿಯನ್ ಪ್ರಿಮಿಯರ್ ಲೀಗ್ ನ ಮಾಜಿ ಚೇರ್ಮನ್, ಹಲವು ಆರ್ಥಿಕ ಅವ್ಯವಹಾರಗಳ ಆರೋಪ ಹೊತ್ತಿರುವ ಲಲಿತ್ ಮೋದಿ ಅವರ ವೀಸಾ ವಿವಾದಲ್ಲಿ ಸಿಲುಕಿರುವ ಸುಷ್ಮಾ ಅವರಿಗೆ ನಿರೀಕ್ಷೆಯಂತೆ ಸರ್ಕಾರದ ಬೆಂಬಲ ಸಿಕ್ಕಿದೆ. ಅದರೆ, ವಿಪಕ್ಷಗಳು ಹಾಗೂ ಸಾಮಾಜಿಕ ಜಾಲ ತಾಣಗಳಲ್ಲಿ ಸುಷ್ಮಾ ವಿರುದ್ಧ ವಾಗ್ಬಾಣಗಳು ಹರಿದಾಡುತ್ತಿವೆ.

ಲಲಿತ್ ಮೋದಿ ಅವರ ಪತ್ನಿಯ ಕ್ಯಾನ್ಸರ್ ಚಿಕಿತ್ಸೆಗೆ ಪೋರ್ಚುಗಲ್ ತೆರಳಬೇಕಿತ್ತು. ಇದಕ್ಕಾಗಿ ಇಂಗ್ಲೆಂಡ್ ಸರ್ಕಾರದ ಅನುಮತಿ ಬೇಕಿತ್ತು. ಇದಕ್ಕೆ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ನೆರವು ನೀಡಿದ್ದರು. ಐಪಿಎಲ್ ಅವ್ಯವಹಾರ ಆರೋಪ ಹೊತ್ತಿದ್ದ ಮೋದಿ ಅವರು ಅಕ್ರಮವಾಗಿ ದೇಶದಿಂದ ತಪ್ಪಿಸಿಕೊಂಡು ಹೋಗಲು ಸುಷ್ಮಾ ನೆರವಾಗಿದ್ದರೆ. ಸುಷ್ಮಾ ತಲೆದಂಡವಾಗಬೇಕು ಎಂದು ಆರೋಪಿಸಿರುವ ಕಾಂಗ್ರೆಸ್ ಆಗ್ರಹಿಸಿದೆ.

ಆಮ್ ಆದ್ಮಿ ಪಕ್ಷ ಒಂದು ಹೆಜ್ಜೆ ಮುಂದಿಟ್ಟು, ಸುಷ್ಮಾ ಅವರೇ ಇದೇ ರೀತಿ ದಾವೂದ್ ಇಬ್ರಾಹಿಂ ಕುಟುಂಬಕ್ಕೆ ತೊಂದರೆಯಾದ್ರೆ ನೆರವು ನೀಡುತೀರಾ ಎಂದು ಕೇಳಿದ್ದಾರೆ.['ಮೋದಿ'ಗೆ ನೆರವಾದ ಸುಷ್ಮಾ ರಾಜೀನಾಮೆಗೆ ಕಾಂಗ್ರೆಸ್ ಆಗ್ರಹ]

ವೀಸಾ ವಿವಾದದಲ್ಲಿ ಸಿಲುಕಿರುವ ಸುಷ್ಮಾ ನೆರವಿಗೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಗೃಹ ಸಚಿವ ರಾಜನಾಥ್ ಸಿಂಗ್ ಧಾವಿಸಿದ್ದಾರೆ. ರಾಜನಾಥ್ ಸಿಂಗ್ ಅವರು ಪ್ರಧಾನಿ ಮೋದಿ ಜೊತೆ ಒಂದು ಸುತ್ತಿನ ಮಾತುಕತೆಯನ್ನು ನಡೆಸಿದ್ದಾರೆ. [ಸ್ಪಾಟ್ ಫಿಕ್ಸಿಂಗ್, 4 ಚೆನ್ನೈ ಕ್ರಿಕೆಟರ್ಸ್ ಶಾಮೀಲು: ಮೋದಿ]

ಈ ವಿವಾದದ ಬಗ್ಗೆ ವಿವರ ನೀಡುವಂತೆ ಮೋದಿ ಅವರು ಕೇಳಿದ್ದಾರೆ ಎಂಬ ಸುದ್ದಿಯಿದೆ. ಮಾನವೀಯತೆಗೆ ಇಲ್ಲಿ ಬೆಲೆಯೇ ಇಲ್ಲ ಎಂದು ಬಿಜೆಪಿ ತನ್ನ ಅಳಲು ತೋಡಿಕೊಂಡಿದ್ದು, ಟ್ವಿಟ್ಟರ್ ನಲ್ಲಿ ಸುಷ್ಮಾ ಬೆಂಬಲಿತ ಟ್ವೀಟ್ ಗಳನ್ನು ಟ್ರೆಂಡಿಂಗ್ ನಲ್ಲಿರುವಂತೆ ನೋಡಿಕೊಂಡಿದ್ದಾರೆ.

ಬಿಜೆಪಿ ನಾಯಕರಿಂದ ಸುಷ್ಮಾಗೆ ಬೆಂಬಲ

ಬಿಜೆಪಿ ನಾಯಕರಿಂದ ಸುಷ್ಮಾಗೆ ಬೆಂಬಲ

ಮೋದಿಗೆ ನೆರವು ನೀಡಿದ್ದೇಕೆ ಎಂಬುದರ ಬಗ್ಗೆ ಸುಷ್ಮಾ ಅವರು ಸರಣಿ ಟ್ವೀಟ್ಸ್ ಮೂಲಕ ಪ್ರತಿಕ್ರಿಯಿಸಿದ್ದಾರೆ. ಅದರೆ ಸುಷ್ಮಾ ಸ್ಪಷ್ಟನೆಗೆ ವಿಪಕ್ಷಗಳು ಬಗ್ಗದ ಕಾರಣ ಅನಿವಾರ್ಯವಾಗಿ ಬಿಜೆಪಿ ಹಿರಿಯ ನಾಯಕರು ಸುಷ್ಮಾ ನೆರವಿಗೆ ಧಾವಿಸಿದ್ದಾರೆ.

ಆಮ್ ಆದ್ಮಿ ಪಕ್ಷ ತೀಕ್ಷ್ಣ ವಾಕ್ಬಾಣ ಬಿಡುತ್ತಿದೆ.

ದೆಹಲಿ ಪೌರ ಕಾರ್ಮಿಕರ ಸಮಸ್ಯೆ ಮರೆತು, ಕಸ ವಿಲೇವಾರಿಗೆ ಅಲ್ಪ ವಿರಾಮ ನೀಡಿ ಸುಷ್ಮಾ ವಿರುದ್ಧ ಎಎಪಿ ಮುಖಂಡರು ತೀಕ್ಷ್ಣ ವಾಕ್ಬಾಣ ಬಿಡುತ್ತಿದ್ದಾರೆ.

ಬೋಫೋರ್ಸ್ ಆರೋಪಿ ಕ್ವಟ್ರೋಚಿ ಎಳೆದು ತಂದ ಅಮಿತ್ ಶಾ

ಬೋಫೋರ್ಸ್ ಆರೋಪಿ ಕ್ವಟ್ರೋಚಿ ಎಳೆದು ತಂದ ಅಮಿತ್ ಶಾ

ಮಾತಿನ ಮಧ್ಯೆ ಬೋಫೋರ್ಸ್ ಆರೋಪಿ ಕ್ವಟ್ರೋಚಿ ಎಳೆದು ತಂದ ಅಮಿತ್ ಶಾ ಅವರು ಅಂದು ಯುಪಿಎ ಸರ್ಕಾರ ಇಟಲಿಯ ಮಧ್ಯವರ್ತಿ ಕ್ವಟ್ರೋಚಿ ಪರಾರಿಯಾಗಲು ನೆರವು ನೀಡಿದ್ದೇಕೆ ಎಂದು ಪ್ರಶ್ನಿಸಿದ್ದಾರೆ. ಯೂನಿಯನ್ ಕಾರ್ಬೈಡ್ ವಾರೆನ್ ಆಂಡರ್ಸನ್ ತಪ್ಪಿಸಿಕೊಳ್ಳಲು ನೆರವಾಗಿದ್ದು ಯುಪಿಎ ಸರ್ಕಾರ ಎಂಬುದನ್ನು ಮರೆಯಬೇಡಿ ಎಂದು ಎಚ್ಚರಿಸಿದ್ದಾರೆ,

ಐಪಿಎಲ್ ಹಗರಣ ಮುಚ್ಚಿ ಹಾಕಲು ಕಾಂಗ್ರೆಸ್ ಯತ್ನ

ಐಪಿಎಲ್ ಹಗರಣದ ಬಗ್ಗೆ ಲಲಿತ್ ಮೋದಿ ಬಾಯಿ ಬಿಡಬಾರದು ಎಂದು ಈ ರೀತಿ ಹುನ್ನಾರ ಮಾಡಲಾಗಿದೆ.

ಕಷ್ಟದಲ್ಲಿರುವ ಭಾರತೀಯರಿಗೆ ನೆರವಾಗುವುದೇ ತಪ್ಪಾ?

ಕಷ್ಟದಲ್ಲಿರುವ ಭಾರತೀಯರಿಗೆ ನೆರವಾಗುವುದೇ ತಪ್ಪಾ? ಎಂದು ಪ್ರಶ್ನಿಸಿದ ಸುಷ್ಮಾ ಸ್ವರಾಜ್

ಶಶಿ ತರೂರ್ ರಾಜೀನಾಮೆ ಕೇಳಿದ್ದ ಬಿಜೆಪಿ

ಐಪಿಎಲ್ ಹಗರಣದಲ್ಲಿ ಅಂದು ಕೇಂದ್ರ ಸಚಿವ ಶಶಿ ತರೂರ್ ರಾಜೀನಾಮೆ ಕೇಳಿದ್ದ ಬಿಜೆಪಿ ಇಂದು ಸುಷ್ಮಾ ಪರ ಏಕೆ ವಕಾಲತ್ತು ವಹಿಸುತ್ತಿದೆ.

ಸುಷ್ಮಾ ಅವರು ಶಿಫಾರಸು ಮಾಡಿಲ್ಲ

ಸುಷ್ಮಾ ಅವರು ಶಿಫಾರಸು ಮಾಡಿಲ್ಲ, ನಿಮ್ಮ ನಿಯಮದ ಪ್ರಕಾರ ಮಾನವೀಯ ನೆಲೆಯಲ್ಲಿ ಕ್ರಮ ಕೈಗೊಳ್ಳಿ ಎಂದಿದ್ದಾರೆ.

English summary
Rejecting opposition demands for Sushma Swaraj's resignation, the government, the BJP as well as RSS on Sunday defended the External Affairs Minister over the Lalit Modi travel documents issue, asserting that she had done no wrong and only acted on "humanitarian" grounds.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X