ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಕ್ಷದ್ವೀಪ ಹಾಗೂ ಬಡ್ಗಾಮ್ ಈಗ ಕ್ಷಯರೋಗ ಮುಕ್ತ ಜಿಲ್ಲೆ: ಕೇಂದ್ರ

|
Google Oneindia Kannada News

ನವದೆಹಲಿ, ಏಪ್ರಿಲ್ 13: ಲಕ್ಷದ್ವೀಪ ಹಾಗೂ ಜಮ್ಮು ಕಾಶ್ಮೀರದ ಬಡ್ಗಾಮ್ ಈಗ ಕ್ಷಯರೋಗ ಮುಕ್ತ ಜಿಲ್ಲೆ ಎಂದು ಕೇಂದ್ರ ಸರ್ಕಾರ ಘೋಷಿಸಿದೆ. ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ್ ವರ್ಧನ್ ಮಂಗಳವಾರ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಪೋಲಿಯೊ ವಿರುದ್ಧದ ಹೋರಾಟವನ್ನು ನೆನಪಿಸಿಕೊಂಡ ಸಚಿವರು 2009 ರ ಹೊತ್ತಿಗೆ ಭಾರತವು ಜಾಗತಿಕ ಪೋಲಿಯೊ ಪ್ರಕರಣಗಳಲ್ಲಿ 60 ಪ್ರತಿಶತಕ್ಕಿಂತ ಹೆಚ್ಚಿನದನ್ನು ಹೊಂದಿದ್ದೂ ನಾವು ದೇಶದಿಂದ ಪೋಲಿಯೊವನ್ನು ಅಳಿಸಿಹಾಕುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಹೇಳಿದರು.

ವರ್ಷಕ್ಕೆ 850 ಮಿಲಿಯನ್ ಸ್ಪುಟ್ನಿಕ್ V ಲಸಿಕೆ ತಯಾರಿಸಲಿದೆ ಭಾರತವರ್ಷಕ್ಕೆ 850 ಮಿಲಿಯನ್ ಸ್ಪುಟ್ನಿಕ್ V ಲಸಿಕೆ ತಯಾರಿಸಲಿದೆ ಭಾರತ

ಭಾರತದ ಅಪಾರ ಜನಸಂಖ್ಯೆಯ ಕಾರಣದಿಂದಾಗಿ ಇದು ಒಂದು ದೊಡ್ಡ ಸವಾಲಾಗಿತ್ತು ಎಂದರು. ಕೋವಿಡ್ ವಿರುದ್ಧದ ನಮ್ಮ ಹೋರಾಟದಲ್ಲಿ ನಾವು ಒಟ್ಟಾಗಿ ಏನನ್ನು ಸಾಧಿಸಬಹುದು ಎಂಬುದನ್ನು ನಾವು ಮತ್ತೆ ಜಗತ್ತಿಗೆ ತೋರಿಸಿದ್ದೇವೆ ಎಂದು ಸಚಿವರು ಹೇಳಿದ್ದಾರೆ.

Lakshadweep, J-Ks Budgam Set Tone For Tuberculosis-Free India : Harsh Vardhan

ನಾವು ಈಗ ಲಕ್ಷದ್ವೀಪ ಮತ್ತು ಜಮ್ಮು ಮತ್ತು ಕಾಶ್ಮೀರದ ಬುಡ್ಗಾಮ್ ಜಿಲ್ಲೆಯನ್ನು ಕ್ಷಯರೋಗ ಮುಕ್ತ ಎಂದು ಘೋಷಿಸಿದ್ದೇವೆ. ಇದು ಒಂದು ಹೆಗ್ಗುರುತಾಗಿದ್ದು 2025 ರ ವೇಳೆಗೆ ಭಾರತ ಟಿಬಿ ಮುಕ್ತವಾಗಲು ಇದು ನಾಂದಿಯಾಗಲಿದೆ. ಅವರು ಹೇಳಿದ್ದಾರೆ.

ವಿಶ್ವ ಟಿಬಿ ದಿನದಂದು ಅಂಬೇಡ್ಕರ್ ರಾಷ್ಟ್ರೀಯ ಕೇಂದ್ರದಲ್ಲಿ ಆಯೋಜಿಸಿದ ಕಾರ್ಯಕ್ರಮ ಉದ್ಘಾಟಿಸಿದ್ದ ಸಚಿವರು ಮಾತನಾಡಿದ್ದಾರೆ.

English summary
The Union health ministry on Tuesday declared the union territory of Lakshadweep and Jammu and Kashmir's Budgam tuberculosis-free.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X