ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಮ್ಸ್ ನಲ್ಲಿನ ಆರೋಗ್ಯ ಸಿಬ್ಬಂದಿ ಬಗ್ಗೆ ಇದೇಕೆ ಇಷ್ಟೊಂದು ನಿರ್ಲಕ್ಷ್ಯ.?

|
Google Oneindia Kannada News

ನವದೆಹಲಿ, ಮೇ 29: ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ಗೆ ಸೇರಿದ 195 ಕ್ಕೂ ಹೆಚ್ಚು ಆರೋಗ್ಯ ಸಿಬ್ಬಂದಿ (ಹೆಲ್ತ್ ಕೇರ್ ವರ್ಕರ್ಸ್) ಗಳಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ.

Recommended Video

ಫಿಲಂ ಟಿಕೆಟ್ ಗೆ 5 ರೂಪಾಯಿ ಜಾಸ್ತಿ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ ಫಿಲಂ ಛೇಂಬರ್| Film Chamber | KFI | BSY

ಕಳೆದ ಎರಡು ದಿನಗಳಲ್ಲಿ 50 ಕ್ಕೂ ಹೆಚ್ಚು ಆರೋಗ್ಯ ಸಿಬ್ಬಂದಿಗೆ ಕೋವಿಡ್-19 ಪಾಸಿಟಿವ್ ಇರುವುದು ದೃಢಪಟ್ಟಿದೆ.

ದೆಹಲಿ: ಏಮ್ಸ್‌ನ ಹಿರಿಯ ವೈದ್ಯರೊಬ್ಬರು ಕೊರೊನಾ ವೈರಸ್‌ಗೆ ಬಲಿದೆಹಲಿ: ಏಮ್ಸ್‌ನ ಹಿರಿಯ ವೈದ್ಯರೊಬ್ಬರು ಕೊರೊನಾ ವೈರಸ್‌ಗೆ ಬಲಿ

ಏಮ್ಸ್ ನಲ್ಲಿನ ಎಂಬಿಬಿಎಸ್ ವಿದ್ಯಾರ್ಥಿ, ವೈದ್ಯರು, ದಾದಿಯರು, ಮೆಸ್ ವರ್ಕರ್ಸ್, ಪ್ರಯೋಗಾಲಯದ ಸಿಬ್ಬಂದಿ, ತಂತ್ರಜ್ಞರು, ನೈರ್ಮಲ್ಯ ಸಿಬ್ಬಂದಿ, ಭದ್ರತಾ ಸಿಬ್ಬಂದಿಗಳ ಮೇಲೆ ಕೊರೊನಾ ವೈರಸ್ ಅಟ್ಟಹಾಸ ಮೆರೆದಿದೆ.

ಕಳೆದ ವಾರ ಏಮ್ಸ್ ನ ಮೆಸ್ ವರ್ಕರ್ ಕೋವಿಡ್-19 ಗೆ ಬಲಿಯಾಗಿದ್ದರೆ, ಸ್ಯಾನಿಟೇಷನ್ ಚೀಫ್ ಮೂರು ದಿನಗಳ ಹಿಂದೆಯಷ್ಟೇ ಕೊರೊನಾ ವೈರಸ್ ಸೋಂಕಿನಿಂದ ಮೃತಪಟ್ಟಿದ್ದರು.

ಛೆ ಛೆ.. ಜೀವ ಉಳಿಸುವ ವೈದ್ಯರಿಗೆ ಭಾರತದಲ್ಲಿ ಇದೆಂಥಾ ಪರಿಸ್ಥಿತಿ.?!ಛೆ ಛೆ.. ಜೀವ ಉಳಿಸುವ ವೈದ್ಯರಿಗೆ ಭಾರತದಲ್ಲಿ ಇದೆಂಥಾ ಪರಿಸ್ಥಿತಿ.?!

ಅಷ್ಟಕ್ಕೂ, ಇವರೆಲ್ಲರಿಗೂ ಸೋಂಕು ವ್ಯಾಪಕವಾಗಿ ಹಬ್ಬಲು ಕಾರಣ ಕಳಪೆ ಗುಣಮಟ್ಟದ ಪಿ.ಪಿ.ಇ ಕಿಟ್ ಗಳು.!

ಗುಣಮಟ್ಟದ ಪಿಪಿಇ ಕಿಟ್ ಗಳ ಕೊರತೆ

ಗುಣಮಟ್ಟದ ಪಿಪಿಇ ಕಿಟ್ ಗಳ ಕೊರತೆ

ಕೊರೊನಾ ವೈರಸ್ ಔಟ್ ಬ್ರೇಕ್ ಆದಾಗಿನಿಂದಲೂ ಏಮ್ಸ್ ನಲ್ಲಿ ಗುಣಮಟ್ಟದ N95 ಮಾಸ್ಕ್ ಮತ್ತು ಪಿಪಿಇ ಕಿಟ್ ಗಳ ಕೊರತೆ ಇದೆ. ವೈದ್ಯಕೀಯ ಸಿಬ್ಬಂದಿಗೆ ಕಳಪೆ ಗುಣಮಟ್ಟದ ಪಿಪಿಇ ಕಿಟ್ ನೀಡಲಾಗಿದ್ದರೆ, ಸ್ಯಾನಿಟೇಷನ್ ವರ್ಕರ್ ಗಳಿಗೆ ಮಾಸ್ಕ್ ಮತ್ತು ಗ್ಲೌಸ್ ಮಾತ್ರ ಕೊಡಲಾಗಿದೆ.

ಕಳಪೆ ಗುಣಮಟ್ಟದ N95 ಮಾಸ್ಕ್

ಕಳಪೆ ಗುಣಮಟ್ಟದ N95 ಮಾಸ್ಕ್

ವೈದ್ಯಕೀಯ ಸಿಬ್ಬಂದಿಗಳಿಗೆ ನೀಡಲಾಗಿರುವ N95 ಮಾಸ್ಕ್ ಗಳು ಕೇಂದ್ರ ಗೃಹ ಸಚಿವಾಲಯ ನಿಗದಿ ಪಡಿಸಿರುವ ಮಾನದಂಡಗಳಿಗೆ ಅನುಗುಣವಾಗಿಲ್ಲ. ಅದಕ್ಕೆ ಸಾಕ್ಷಿ ಈ ಫೋಟೋ.

ಇಷ್ಟೊಂದು ನಿರ್ಲಕ್ಷ್ಯ ಏಕೆ.?

ಇಷ್ಟೊಂದು ನಿರ್ಲಕ್ಷ್ಯ ಏಕೆ.?

''ಕೊರೊನಾ ವೈರಸ್ ಬಗ್ಗೆ ನಮಗೆ ಚಿಂತೆ ಇಲ್ಲ. ಆದರೆ, ಸರ್ಕಾರ ಮತ್ತು ಏಮ್ಸ್ ಆಡಳಿತ ತೋರುತ್ತಿರುವ ನಿರ್ಲಕ್ಷ್ಯ ನಮ್ಮ ಚಿಂತೆಗೀಡು ಮಾಡಿದೆ. ಹೀಗೇ ಮುಂದುವರೆದರೆ ರೋಗಿಗಳಿಗೆ ಚಿಕಿತ್ಸೆ ನೀಡುವ ಹೆಲ್ತ್ ವರ್ಕರ್ ಗಳ ಕೊರತೆ ಎದುರಾಗುತ್ತದೆ. ಹಾಸ್ಟೆಲ್ ಆವರಣದಲ್ಲಿನ ಸುರಕ್ಷತೆ, ನೈರ್ಮಲ್ಯ ಕಾಪಾಡಲು, ಹೆಚ್ಚು ಟೆಸ್ಟಿಂಗ್ ನಡೆಸಲು, ಕ್ವಾರಂಟೈನ್ ಪ್ರೋಟೋಕಾಲ್ ಬಿಗಿಗೊಳಿಸಲು ನಾವು ಮಾರ್ಚ್ ನಿಂದಲೇ ಪತ್ರ ಬರೆಯುತ್ತಿದ್ದೇವೆ. ಆದರೆ ಯಾವುದೇ ಪ್ರಯೋಜನ ಆಗಿಲ್ಲ'' ಎಂದು ಏಮ್ಸ್-ನವದೆಹಲಿಯ ಆರ್.ಡಿ.ಎ ಪ್ರಧಾನ ಕಾರ್ಯದರ್ಶಿ ಡಾ.ಶ್ರೀನಿವಾಸ್ ರಾಜ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೆಹಲಿಯಲ್ಲಿ ಕೊರೊನಾ ವೈರಸ್ ಸೋಂಕಿತ ಪ್ರಕರಣಗಳೆಷ್ಟು.?

ದೆಹಲಿಯಲ್ಲಿ ಕೊರೊನಾ ವೈರಸ್ ಸೋಂಕಿತ ಪ್ರಕರಣಗಳೆಷ್ಟು.?

ದೆಹಲಿಯಲ್ಲಿ ಕೊರೊನಾ ವೈರಸ್ ಅಬ್ಬರ ಮುಂದುವರೆದಿದೆ. ಇಲ್ಲಿಯವರೆಗೂ ದೆಹಲಿಯಲ್ಲಿ 16,281 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. 7,495 ಮಂದಿ ಸಂಪೂರ್ಣವಾಗಿ ಗುಣಮುಖರಾಗಿದ್ದು, 316 ಮಂದಿ ಸಾವನ್ನಪ್ಪಿದ್ದಾರೆ. ಸದ್ಯ ದೆಹಲಿಯಲ್ಲಿ 8,470 ಸಕ್ರಿಯ ಸೋಂಕಿತ ಪ್ರಕರಣಗಳಿವೆ.

English summary
Lack of PPE's makes AIIMS Health Care Workers target for Covid-19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X