ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಲಮಟ್ಟಿ ಎತ್ತರ ಬದಲಾವಣೆ ಇಲ್ಲ: ನ್ಯಾಯಾಧೀಕರಣ

|
Google Oneindia Kannada News

ನವದೆಹಲಿ, ನ. 29 : ಕೃಷ್ಣಾ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಕರ್ನಾಟಕಕ್ಕೆ ಜಯ ದೊರಕಿದೆ. ಆಲಮಟ್ಟಿ ಜಲಾಶಯದ ಅಣೆಕಟ್ಟೆಯನ್ನು 524 ಮೀಟರ್‌ಗೆ ಏರಿಸಿರುವುದನ್ನು ವಿರೋಧಿಸಿ ಆಂಧ್ರಪದೇಶ ಸಲ್ಲಿಸಿದ್ದ ಅರ್ಜಿಯನ್ನು ಕೃಷ್ಣಾ ನ್ಯಾಯಾಧೀಕರಣ ತಳ್ಳಿಹಾಕಿದೆ. ಆಲಮಟ್ಟಿ ಅಣೆಕಟ್ಟು ಎತ್ತರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ನ್ಯಾಯಾಧೀಕರಣ ಸ್ಪಷ್ಟಪಡಿಸಿದೆ.

ಕೃಷ್ಣಾ ಕೊಳ್ಳದ ನೀರು ಹಂಚಿಕೆಗೆ ಸಂಬಂಧಿಸಿದಂತೆ ಆಂಧ್ರಪ್ರದೇಶ, ಮಹಾರಾಷ್ಟ್ರ ಸರ್ಕಾರಗಳು ಸಲ್ಲಿಸಿದ್ದ ಅರ್ಜಿಗಳು ಹಾಗೂ 10 ಅಂಶಗಳ ಕುರಿತಂತೆ ವಿವರಣೆ ಕೋರಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಅರ್ಜಿಗಳನ್ನು ಪರಿಶೀಲಿಸಿದ ಕೃಷ್ಣಾ ನ್ಯಾಯಾಧೀಕರಣ ಶುಕ್ರವಾರ ತೀರ್ಪು ನೀಡಿದೆ. (ಕೃಷ್ಣಾ ನ್ಯಾಯಾಧೀಕರಣ ತೀರ್ಪಿಗೆ ಆಂಧ್ರ ಕ್ಯಾತೆ)

/news/2011/01/02/krishna-tribunal-andhra-pradesh-to-file-appeal.html

ನ್ಯಾಯಮೂರ್ತಿ ಬೃಜೇಶ್‌ ಕುಮಾರ್ ನೇತೃತ್ವದ ಕೃಷ್ಣಾ ನ್ಯಾಯಾಧೀಕರಣ 2010ರ ಡಿಸೆಂಬರ್ 30 ರಂದು ನೀಡಿದ್ದ ತೀರ್ಪಿಗೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ಸರ್ಕಾರಗಳು ತಕರಾರು ಅರ್ಜಿ ಸಲ್ಲಿಸಿದ್ದವು. ಅರ್ಜಿಯಲ್ಲಿ ಆಲಮಟ್ಟಿ ಅಣೆಕಟ್ಟೆಯಲ್ಲಿ 524.26 ಮೀಟರ್ ಎತ್ತರಕ್ಕೆ ನೀರು ಶೇಖರಿಸಿದರೆ, ನಾಗಾರ್ಜುನ ಸಾಗರ, ಶ್ರೀಶೈಲಂ ಅಣೆಕಟ್ಟೆಗಳಿಗೆ ನೀರಿನ ಹರಿವು ಕಡಿಮೆಯಾಗಲಿದೆ ಎಂಬುದು ಆಂಧ್ರದ ಆರೋಪವಾಗಿತ್ತು.

ಇದೇ ವೇಳೆ ಆಂಧ್ರಪ್ರದೇಶದ ರಾಜೊಳ್ಳಿ ಬಂಡಾ ನಾಲೆಗೆ ತುಂಗಭದ್ರಾ ಡ್ಯಾಂನಿಂದ 4 ಟಿಎಂಸಿ ನೀರು ನೀಡಬೇಕು ಎಂದು ನ್ಯಾಯಾಧೀಕರಣ ಆದೇಶ ನೀಡಿದೆ. ಹಂಚಿಕೆಯಾಗದ 513 ಟಿಎಂಸಿ ನೀರಿನ ಹಂಚಿಕೆ ಕೋರಿ ಕೃಷ್ಣ ನ್ಯಾಯಾಧೀಕರಣದ ಸಕ್ಷಮ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಬಹುದು ಎಂದು ಬ್ರಿಜೇಶ್ ಕುಮಾರ್ ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ.

ಕರ್ನಾಟಕ ಸಂತಸ : ಕೃಷ್ಣ ನ್ಯಾಯಾಧೀಕರಣದ ತೀರ್ಪು ಪ್ರಕಟವಾಗುವ ಸಂದರ್ಭದಲ್ಲಿ ಕರ್ನಾಟಕದ ಜಲಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್ ನವದೆಹಲಿಯಲ್ಲಿ ಹಾಜರಿದ್ದರು. ತೀರ್ಪನ್ನು ಸ್ವಾಗತಿಸಿರುವು ಅವರು, ಉತ್ತರ ಕರ್ನಾಟಕ ಜನತೆಯ ಪಾಲಿಗೆ ಇದೊಂದು ಐತಿಹಾಸಿಕ ದಿನ ಎಂದು ಹೇಳಿದ್ದಾರೆ.

English summary
The Krishna Water Disputes Tribunal gave its verdict on height of Almatti dam built across Krishna river from 519 to 524 meters in Bagalkot district Karnataka. On Friday, November 29 Tribunal announced verdict.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X