ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಹೊಡೆದುರುಳಿಸಿದ ಪಾಕಿಸ್ತಾನಿ ಯುದ್ಧ ವಿಮಾನ F 16 ಪೈಲಟ್ ಗುರುತು ಗೊತ್ತಿದೆ'

|
Google Oneindia Kannada News

ನವದೆಹಲಿ, ಮಾರ್ಚ್ 13: ವಿಂಗ್ ಕಮ್ಯಾಂಡರ್ ಅಭಿನಂದನ್ ವರ್ತಮಾನ್ ಚಾಲನೆ ಮಾಡುತ್ತಿದ್ದ ಮಿಗ್ 21 'ಬೈಸನ್' ಫೆಬ್ರವರಿ 27ರಂದು ಹೊಡೆದುರುಳಿಸಿದ ಪಾಕಿಸ್ತಾನಿ ಯುದ್ಧ ವಿಮಾನ F 16 ಹಾಗೂ ಅದರಲ್ಲಿದ್ದ ಪೈಲಟ್ ಗುರುತನ್ನು ಭಾರತೀಯ ಸೇನೆ ಪತ್ತೆ ಮಾಡಿದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಆದರೆ, ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಅವರು ನಿರಾಕರಿಸಿದ್ದಾರೆ. F 16 ಯುದ್ಧ ವಿಮಾನವನ್ನಾಗಲಿ ಅಥವಾ ತನ್ನ ಪೈಲಟ್ ಆಗಲಿ ಕಳೆದುಕೊಂಡಿದ್ದನ್ನು ಪಾಕಿಸ್ತಾನ ಒಪ್ಪಿಕೊಳ್ಳುವುದಿಲ್ಲ. ಕಾರ್ಗಿಲ್ ಬಿಕ್ಕಟ್ಟಿನ ಸಂದರ್ಭದಲ್ಲಿ ತನ್ನ ಸಾಮಾನ್ಯ ಯೋಧರ 'ತ್ಯಾಗ'ವನ್ನು ಹೇಗೆ ಪುಷ್ಟೀಕರಿಸಲಿಲ್ಲವೋ ಈಗಲೂ ಹಾಗೇ ಮಾಡುತ್ತಿದೆ ಎಂದಿದ್ದಾರೆ.

ಅಭಿನಂದನ್ ಪಾಕಿಸ್ತಾನದಲ್ಲಿ ಕಳೆದ ದಿನಗಳು ಹೇಗಿದ್ದವು?ಅಭಿನಂದನ್ ಪಾಕಿಸ್ತಾನದಲ್ಲಿ ಕಳೆದ ದಿನಗಳು ಹೇಗಿದ್ದವು?

F 16 ಯುದ್ಧ ವಿಮಾನದ ಪೈಲಟ್ ಅನ್ನು ಪಾಕಿಸ್ತಾನದ ಸ್ಥಳೀಯ ಹಳ್ಳಿಗರು ಬಡಿದಿದ್ದಾರೆ. ಆತ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಆದರೆ ಪಾಕಿಸ್ತಾನವು ಇದನ್ನು ನಿರಾಕರಿಸುತ್ತಿದೆ ಎಂದು ಅವರು ಹೇಳಿದ್ದಾರೆ.

Know identity of downed F-16’s pilot: Defence minister Nirmala Sitharaman

ಪಾಕಿಸ್ತಾನ ಸೇನೆ ಸುಪರ್ದಿಯಲ್ಲಿ ತೀವ್ರ ಮಾನಸಿಕ ಹಿಂಸೆ ಅನುಭವಿಸಿದ ವಿಂಗ್ ಕಮ್ಯಾಂಡರ್ ಅಭಿನಂದನ್ ಬಗ್ಗೆ ಮಾತನಾಡಿದ ಅವರು, ಅವರ ಜೋಶ್ ಹೆಚ್ಚು. ಅವರು ಏನೆಲ್ಲ ಅನುಭವಿಸಿದ ನಂತರವೂ ಸಮಾಧಾನ ಚಿತ್ತರಾಗಿದ್ದಾರೆ. ತನ್ನ ಕರ್ತವ್ಯ ಮಾಡಿದ್ದೇನೆ ಎಂದಷ್ಟೇ ಹೇಳಿದ್ದಾರೆ. ಅಂಥ ಸನ್ನಿವೇಶಕ್ಕೇ ಅವರಿಗೆ ತರಬೇತಿ ನೀಡಲಾಗಿದೆ ಎಂದಿದ್ದಾರೆ.

English summary
The Indian military knows the identity of the Pakistani pilot whose F-16 was shot down by Wing Commander Abhinandan Varthaman’s MiG-21 'Bison' on February 27, defence minister Nirmala Sitharaman said. But she refused to give any more information.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X