ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನರೇಂದ್ರ ಮೋದಿ ಕುಟುಂಬ ರಾಜಕಾರಣ ಹೇಳಿಕೆಗೆ ಪ್ರತಿಕ್ರಿಯಿಸಲು ರಾಹುಲ್ ಗಾಂಧಿ ನಕಾರ

|
Google Oneindia Kannada News

ನವದೆಹಲಿ, ಆಗಸ್ಟ್ 15 : ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರಸ್ತಾಪಿಸಿದ ಕುಟುಂಬ ರಾಜಕಾರಣ ಮತ್ತು ಭ್ರಷ್ಟಾಚಾರ ದೇಶ ಇಂದು ಎದುರಿಸುತ್ತಿರುವ ಎರಡು ದೊಡ್ಡ ಸವಾಲುಗಳು ಎನ್ನುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಿರಾಕರಿಸಿದ್ದಾರೆ.

"ಈ ವಿಚಾರಕ್ಕೆ ನಾನು ಕಾಮೆಂಟ್ ಮಾಡುವುದಿಲ್ಲ. ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು" ಎಂದು ಮಾಧ್ಯಮಗಳ ಪ್ರಶ್ನೆಗೆ ರಾಹುಲ್ ಗಾಂಧಿ ಹೇಳಿದ್ದಾರೆ.

ಭ್ರಷ್ಟಾಚಾರ, ವಂಶಾಡಳಿತ ಭಾರತದ 2 ದೊಡ್ಡ ಸವಾಲುಗಳು: ಪ್ರಧಾನಿ ಮೋದಿಭ್ರಷ್ಟಾಚಾರ, ವಂಶಾಡಳಿತ ಭಾರತದ 2 ದೊಡ್ಡ ಸವಾಲುಗಳು: ಪ್ರಧಾನಿ ಮೋದಿ

ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿದ ನಂತರ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕುಟುಂಬ ರಾಜಕಾರಣ ಮತ್ತು ಭ್ರಷ್ಟಾಚಾರದ ದೇಶಕ್ಕೆ ಮಾರಕ ಎಂದು ಹೇಳಿದ್ದ ಅವರು ಅವುಗಳ ವಿರುದ್ಧ ಹೋರಾಡಲು ಜನರು ಸಹಕಾರ ನೀಡಬೇಕು ಎಂದು ಕೋರಿದರು.

Know How Rahul Gandhi React To PM Narendra Modis Nepotism Remark

ದೇಶವು ತನ್ನ ಮನಸ್ಥಿತಿಯನ್ನು ವಂಶಾಡಳಿತ ಮತ್ತು ಸ್ವಜನಪಕ್ಷಪಾತದಿಂದ ಬದಲಾಯಿಸಬೇಕು ಮತ್ತು ಅರ್ಹ ನಾಗರಿಕರಿಗೆ ಅವಕಾಶವನ್ನು ನೀಡಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಪ್ರಧಾನಿ ಮೋದಿ ಕುಟುಂಬ ರಾಜಕಾರಣ ಹೇಳಿಕೆಯ ಬಗ್ಗೆ ಕಾಂಗ್ರೆಸ್ ನಾಯಕಿ ಕುಮಾರಿ ಸೆಲ್ಜಾ ವಾಗ್ದಾಳಿ ನಡೆಸಿದರು, ಸಾಮಾನ್ಯ ಜನರ ಸಮಸ್ಯೆಗಳ ಮೇಲೆ ಕೇಂದ್ರೀಕರಿಸುವ ಬದಲು ಪ್ರಧಾನಿ ಮೋದಿ ಕೆಂಪು ಕೋಟೆಯ ಮೇಲೆ ರಾಜಕೀಯ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

just in: ಇತ್ತ ನೆಹರು ವಿರುದ್ಧ ಬಿಜೆಪಿ ಕಿಡಿ;ಅತ್ತ ಮೋದಿಯಿಂದ ಪ್ರಶಂಸೆjust in: ಇತ್ತ ನೆಹರು ವಿರುದ್ಧ ಬಿಜೆಪಿ ಕಿಡಿ;ಅತ್ತ ಮೋದಿಯಿಂದ ಪ್ರಶಂಸೆ

ದೇಶದ ಸಮಸ್ಯೆಗಳ ಬಗ್ಗೆ ಯೋಚಿಸಲಿ

"ಪ್ರಧಾನಿ ನರೇಂದ್ರ ಮೋದಿ ದೇಶದ ಅಭಿವೃದ್ಧಿಯನ್ನು ಮರೆತು ರಾಜಕೀಯ ಕೆಂಪುಕೋಟೆಯ ಮೇಲೆ ರಾಜಕೀಯ ಮಾಡುತ್ತಿದ್ದಾರೆ ಎಂದು" ಸೆಲ್ಜಾ ಆರೋಪಿಸಿದರು.

"ನಿರುದ್ಯೋಗವು ಜನರನ್ನು ತೀವ್ರವಾಗಿ ಬಾಧಿಸುತ್ತಿದೆ, ಜನರ ಸಮಸ್ಯೆ ಬಗ್ಗೆ ಮಾತನಾಡುವ ಬದಲು, ಸರ್ಕಾರವು ಕುಟುಂಬ ರಾಜಕಾರಣದ ಆರೋಪ ಮಾಡುತ್ತಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶದ ಸಮಸ್ಯೆಗಳಿಂದ ದೂರವಿದ್ದಾರೆ" ಎಂದು ಅವರು ಆರೋಪಿಸಿದರು.

Know How Rahul Gandhi React To PM Narendra Modis Nepotism Remark

ಕೇಂದ್ರ ಸರ್ಕಾರವನ್ನು ಟೀಕಿಸಿದ ಸೋನಿಯಾ ಗಾಂಧಿ

ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ತಮ್ಮ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ನೀಡಿದ ಹೇಳಿಕೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಮಾಡಿದ್ದರು. ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಸರ್ಕಾರ ಕ್ಷುಲ್ಲಕವಾಗಿ ನೋಡುತ್ತಿದೆ ಎಂದು ಇದು ಸರಿಯಲ್ಲ. ರಾಜಕೀಯ ಲಾಭಕ್ಕಾಗಿ ಮಾಡುವ ಇಂತಹ ಪ್ರಯತ್ನಗಳನ್ನು ಪಕ್ಷವು ಬಲವಾಗಿ ವಿರೋಧಿಸುತ್ತದೆ ಎಂದು ಹೇಳಿದರು.

1947 ರಲ್ಲಿ ಭಾರತದ ವಿಭಜನೆಗೆ ಕಾರಣವಾದ ಘಟನೆಗಳ ಆವೃತ್ತಿಯನ್ನು ವಿವರಿಸುವ ವೀಡಿಯೊವನ್ನು ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಬಿಡುಗಡೆ ಮಾಡಿದ ನಂತರ ಹೊಸ ವಿವಾದ ಹುಟ್ಟಿಕೊಂಡಿತು. ಸ್ವಾತಂತ್ರ್ಯದ ನಂತರ ಜವಾಹರಲಾಲ್ ನೆಹರು ಮತ್ತು ಮುಹಮ್ಮದ್ ಅಲಿ ಜಿನ್ನಾ ವಿಭಜನೆಗೆ ಕಾರಣ ಎನ್ನುವ ಅರ್ಥದಲ್ಲಿರುವ ವಿಡಿಯೋಗೆ ಕಾಂಗ್ರೆಸ್ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದೆ.

Recommended Video

BJP ಅವರದ್ದು ನಕಲಿ ದೇಶಭಕ್ತಿ, ಇವರಿಗೆ ಇತಿಹಾಸವೇ ಗೊತ್ತಿಲ್ಲ: ಬಿಜೆಪಿ ಮೇಲೆ ಸಿದ್ದು ಗರಂ | *Karnataka | Oneindia

English summary
Congress leader Rahul Gandhi on Monday refused to comment on Prime Minister Narendra Modi’s nepotism remark. "I won't comment. Happy Independence Day," Rahul Gandhi said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X