ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

15ನೇ ಅಟಾರ್ನಿ ಜನರಲ್‌ ಆಗಿ ಕೆಕೆ ವೇಣುಗೋಪಾಲ್‌ ಅಧಿಕಾರ ಸ್ವೀಕಾರ

|
Google Oneindia Kannada News

ನವದೆಹಲಿ, ಜುಲೈ 03 : ಹಿರಿಯ ನ್ಯಾಯವಾದಿ ಮತ್ತು ಸಂವಿಧಾನ ತಜ್ಞ ಕೆ.ಕೆ ವೇಣುಗೋಪಾಲ್‌ ಅವರು ಇಂದು (ಸೋಮವಾರ) ಭಾರತದ 15ನೇ ಅಟಾರ್ನಿ ಜನರಲ್‌ ಆಗಿ ಅಧಿಕಾರ ಸ್ವೀಕರಿಸಿದರು.

ಸದ್ಯ ಸೇವೆ ಸಲ್ಲಿಸುತ್ತಿದ್ದ ಮುಕುಲ್ ರೋಹ್ಟಗಿ ಅವರನ್ನು ಮತ್ತೊಂದು ಅವಧಿಗೆ ಮುಂದುವರಿಸಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು. ಆದರೆ, ರೋಹ್ಟಗಿ ಅವರು ತಮ್ಮನ್ನು ಪುನರಾಯ್ಕೆ ಮಾಡದಂತೆ ಮನವಿ ಮಾಡಿದ್ದರು. ಈ ಹಿನ್ನಲೆಯಲ್ಲಿ ವೇಣುಗೋಪಾಲ್‌ ಅವರನ್ನು ಆಯ್ಕೆ ಮಾಡಲಾಗಿತ್ತು.

KK Venugopal takes charge as 15th Attorney General of India

1960ರಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ವಾದ ಮಂಡಿಸಲು ಆರಂಭಿಸಿದ ವೇಣುಗೋಪಾಲ್ 50ಕ್ಕೂ ಹೆಚ್ಚು ವರ್ಷಗಳ ಅನುಭವ ಹೊಂದಿದ್ದಾರೆ. 1972ರಲ್ಲಿ ಅವರು ಹಿರಿಯ ವಕೀಲರಾಗಿ ಪದೋನ್ನತಿ ಹೊಂದಿದ್ದರು.

ಚೆನ್ನೈನಲ್ಲಿ ವಾಸವಿದ್ದ ವೇಣುಗೋಪಾಲ್ ಮೊರಾರ್ಜಿ ದೇಸಾಯಿ ಸರಕಾರದ ಅವಧಿಯಲ್ಲಿ ಅವರ ಆಹ್ವಾನವನ್ನು ಒಪ್ಪಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ನೇಮಕಗೊಂಡಿದ್ದರು. ಈ ವೇಳೆ ತಮ್ಮ ನೆಲೆಯನ್ನು ದೆಹಲಿಗೆ ವರ್ಗಾಯಿಸಿದ್ದರು.

ಮುಂದಿನ ಅಟಾರ್ನಿ ಜನರಲ್ ಆಗಿ ಕೆಕೆ ವೇಣುಗೋಪಾಲ್? ಮುಂದಿನ ಅಟಾರ್ನಿ ಜನರಲ್ ಆಗಿ ಕೆಕೆ ವೇಣುಗೋಪಾಲ್?

ವೇಣುಗೋಪಾಲ್‌ ಅವರ ತಂದೆ ಎಂ.ಕೆ.ನಂಬಿಯಾರ್ ಸಹ ಖ್ಯಾತ ವಕೀಲರಾಗಿದ್ದರು. ವೇಣುಗೋಪಾಲ್‌ ಅವರು ಪದ್ಮಭೂಷಣ ಗೌರವಕ್ಕೆ ಭಾಜನರಾಗಿದ್ದರು.

English summary
Senior lawyer in the Supreme Court of India and constitutional expert KK Venugopal on Monday formally took over as 15th Attorney General, replacing Mukul Rohatgi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X