ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಜ್ರಿವಾಲ್‌ಗೆ ಲೀಗಲ್ ನೋಟಿಸ್ ನೀಡಿದ ಕಿರಣ್ ಬೇಡಿ

By Kiran B Hegde
|
Google Oneindia Kannada News

ನವದೆಹಲಿ, ಜ. 27: ಕಿರಣ್ ಬೇಡಿ ಬಿಜೆಪಿಯಿಂದ ನವದೆಹಲಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಲ್ಪಟ್ಟ ನಂತರ ಬಹಿರಂಗವಾಗಿ ಅರವಿಂದ ಕೇಜ್ರಿವಾಲ್ ವಿರುದ್ಧ ಹೋರಾಟ ಆರಂಭಿಸಿದ್ದಾರೆ.

"ಕೇಜ್ರಿವಾಲ್ ಪ್ರಾಮಾಣಿಕ ಹಾಗೂ ಕಿರಣ್ ಬೇಡಿ ಅವಕಾಶವಾದಿ" ಎಂದು ಆರೋಪಿಸಿ ಆಮ್ ಆದ್ಮಿ ಪೋಸ್ಟರ್ ಮುದ್ರಿಸಿತ್ತು. ತಮ್ಮ ಫೋಟೊ ತಮ್ಮ ಒಪ್ಪಿಗೆ ಇಲ್ಲದೆ ಉಪಯೋಗಿಸಲಾಗಿದೆ ಎಂದು ಆರೋಪಿಸಿ ಕಿರಣ್ ಬೇಡಿ ಆಮ್ ಆದ್ಮಿ ಪಕ್ಷಕ್ಕೆ ಲೀಗಲ್ ನೋಟಿಸ್ ನೀಡಿದ್ದಾರೆ. [ದೆಹಲಿಯಲ್ಲಿ ಆಪ್ ಧೂಳಿಪಟ]

notice

ಬಿಜೆಪಿ ಮಾಧ್ಯಮ ಸಂಚಾಲಕ ಪ್ರವೀಣ ಶಂಕರ್ ಕಪೂರ್ ಈ ವಿಷಯ ದೃಢಪಡಿಸಿದ್ದಾರೆ. "ಹೌದು, ಕಿರಣ್ ಬೇಡಿ ಅವರು ಕೇಜ್ರಿವಾಲ್‌ ಅವರಿಗೆ ನೋಟಿಸ್ ನೀಡಿದ್ದಾರೆ. ಜೊತೆಗೆ ಇಂತಹ ಪೋಸ್ಟರ್ ತೆಗೆದುಹಾಕುವಂತೆ ತಿಳಿಸಿದ್ದಾರೆ" ಎಂದು ಹೇಳಿದ್ದಾರೆ.

ನವದೆಹಲಿ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ಮುಳುಗಿರುವ ಅರವಿಂದ ಕೇಜ್ರಿವಾಲ್ ಹಲವು ವಿವಾದಗಳಿಗೆ ಕಾರಣರಾಗಿದ್ದಾರೆ. ಅವರ ವಿರುದ್ಧ ಹಲವು ಹೊಸ ಪ್ರಕರಣಗಳು ದಾಖಲಾಗಿವೆ. [ಕಿರಣ್ ಬೇಡಿಗೆ ಶಾಂತಿ ಭೂಷಣ್ ಬೆಂಬಲ]

ಇದಕ್ಕೂ ಮೊದಲು ಬಿಜೆಪಿ ಮುಖಂಡ ಜಗದೀಶ ಮುಖಿ ಕೂಡ ತಮ್ಮ ಪೋಟೊ ಉಪಯೋಗಿಸಿದ್ದಕ್ಕೆ ಕೇಜ್ರಿವಾಲ್ ಅವರಿಗೆ ನೋಟಿಸ್ ನೀಡಿದ್ದರು. ಅಲ್ಲದೆ, ಬಿಜೆಪಿ ಹಾಗೂ ಕಾಂಗ್ರೆಸ್‌ನಿಂದ ಹಣ ಪಡೆದು ಆಮ್ ಆದ್ಮಿಗೆ ಮತ ಹಾಕಿ ಎಂದು ಕೇಜ್ರಿವಾಲ್ ಹೇಳಿರುವುದು ಕೂಡ ವಿವಾದಕ್ಕೆ ಕಾರಣವಾಗಿದೆ.

English summary
Chief ministerial nominee of BJP Kiran Bedi has sent a legal notice to Arvind Kejriwal. She accused that AAP had used her photograph in the party's poster campaign without her permission.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X