ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಸಭೆಯಲ್ಲಿ ಜೇಟ್ಲಿ ಸವಾಲು ಸ್ವೀಕರಿಸಿದ ಖರ್ಗೆ

|
Google Oneindia Kannada News

Recommended Video

ಲೋಕಸಭೆಯಲ್ಲಿ ಜೇಟ್ಲಿ ಸವಾಲು ಸ್ವೀಕರಿಸಿದ ಖರ್ಗೆ | Oneindia Kannada

ನವದೆಹಲಿ, ಜನವರಿ 1: ಚಳಿಗಾಲದ ಸಂಸತ್ ಅಧಿವೇಶವನ್ನು ರಫೇಲ್ ಯುದ್ಧವಿಮಾನ ಖರೀದಿ ಪ್ರಕರಣ ನುಂಗಿ ಹಾಕಿರುವುದು ಎಲ್ಲರಿಗೂ ತಿಳಿದಿದೆ. ಆದರೆ ಅಧಿವೇಶನದ ಕೊನೆಯ ವಾರದಲ್ಲಿ ಕೇಂದ್ರ ಸರ್ಕಾರ ಹಾಗೂ ಪ್ರತಿಪಕ್ಷಗಳು ರಫೇಲ್ ಸವಾಲು ಹಾಗೂ ಪ್ರತಿ ಸವಾಲು ಎದುರಿಸಲು ಸಿದ್ಧವಾಗಿವೆ.

ಚರ್ಚಿಸಿಲು ಕೇಂದ್ರ ಸರ್ಕಾರ ಸಿದ್ಧವಾಗಿದ್ದರೂ ಪ್ರತಿಪಕ್ಷಗಳು ಓಡಿಹೋಗುತ್ತಿವೆ ಎಂದು ಬಿಜೆಪಿ ಆರೋಪಿಸಿದರೆ ನಾವು ಚರ್ಚೆಗೆ ಸಿದ್ಧ ಸಮಯ ನಿಗದಿಪಡಿಸಿ ಎಂದು ಪ್ರತ್ಯುತ್ತರ ನೀಡಿದೆ. ಲೋಕಸಭೆಯಲ್ಲಿ ಸೋಮವಾರ ನಡೆದ ಚರ್ಚೆಯಲ್ಲಿ ರಫೇಲ್ ಕುರಿತ ಚರ್ಚೆಗೆ ಬನ್ನಿ ಓಡಿ ಹೋಗಬೇಡಿ ಎಂದು ಅರುಣ್ ಜೇಟ್ಲಿಯವರು ಸವಾಲೆಸೆದರು ಆ ಸವಾಲು ಸ್ವೀಕರಿಸಿರುವ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಚರ್ಚೆಗೆ ನಾವು ಸಿದ್ಧ ಜ.2ರಂದು ಸಮಯ ನಿಗದಿ ಮಾಡಿ ಎಂದು ಹೇಳಿದ್ದಾರೆ.

ರಫೇಲ್ ಒಪ್ಪಂದದ ವಿವಾದದ ನಡುವೆಯೇ ಇಬ್ಬರು ಹಿರಿಯ ಅಧಿಕಾರಿಗಳ ವರ್ಗರಫೇಲ್ ಒಪ್ಪಂದದ ವಿವಾದದ ನಡುವೆಯೇ ಇಬ್ಬರು ಹಿರಿಯ ಅಧಿಕಾರಿಗಳ ವರ್ಗ

ರಫೇಲ್ ಒಪ್ಪಂದದ ತನಿಖೆಯನ್ನು ಜಂಟಿ ಸಂಸದೀಯ ಸಮಿತಿಗೆ ಒಪ್ಪಿಸಬೇಕು ಎಂದು ಖರ್ಗೆ ಆಗ್ರಹಿಸಿದರು. ಇದಕ್ಕೆ ಪ್ರತಿಯಾಗಿ ಸಚಿವ ಜೇಟ್ಲಿ, ರಫೇಲ್ ಬಗ್ಗೆ ಚರ್ಚೆ ಆರಂಭಿಸಿ, ನಾವು ಉತ್ತರಕ್ಕೆ ಸಿದ್ಧರಿದ್ದೇವೆ. ಕಾಂಗ್ರೆಸ್ ಸುಳ್ಳು ಪ್ರಚಾರದಲ್ಲಿ ತೊಡಗಿದೆ ಎಂದು ನಿರೂಪಿಸುತ್ತೇವೆ, ಎಂದು ಜೇಟ್ಲಿ ಸವಾಲು ಎಸೆದರು. ಆಗ ಖರ್ಗೆ ಅವರು ಸವಾಲು ಒಪ್ಪಿರುವುದಾಗಿ ತಿಳಿಸಿದರು.

Kharge accepts Jaitleys challenge on Rafale deal

ಮೊಯ್ಲಿ ರಫೇಲ್ ದಾಳಿಗೆ ತೇಪೆ ಹಚ್ಚಿ ಚಿದಂಬರಂ ಕೇಳಿದ 7 ಪ್ರಶ್ನೆಗಳು! ಮೊಯ್ಲಿ ರಫೇಲ್ ದಾಳಿಗೆ ತೇಪೆ ಹಚ್ಚಿ ಚಿದಂಬರಂ ಕೇಳಿದ 7 ಪ್ರಶ್ನೆಗಳು!

ಜೇಟ್ಲಿಯವರು ನಮಗೆ ಸವಾಲೆಸೆದಿದ್ದಾರೆ. ನಾವು ಒಪ್ಪಿಕೊಂಡಿದ್ದೇವೆ. ಜ.2 ರಂದು ಚರ್ಚೆ ಮಾಡಲು ನಾವು ಸಿದ್ಧರಿದ್ದೇವೆ. ದಯವಿಟ್ಟು ಸಮಯ ನಿಗದಿ ಮಾಡಿ."ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಲೋಕಸಭೆ ಸ್ಪೀಕರ್​ಗೆ ತಿಳಿಸಿದ್ದಾರೆ.

English summary
Conress parliamentary party leader Mallikarjun Kahrge accepts finance minister Arun jaitley challenge over Rafale deal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X