• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೇರಳ ಪತ್ರಕರ್ತ ಸಿದ್ದಿಕ್ ಕಪ್ಪನ್ ತಾಯಿ ಖದೀಜಾ ಕುಟ್ಟಿ ವಿಧಿವಶ

|
Google Oneindia Kannada News

ನವದೆಹಲಿ, ಜೂನ್ 18: ಕೇರಳ ಪತ್ರಕರ್ತ ಸಿದ್ದಿಕ್ ಕಪ್ಪನ್ ತಾಯಿ ಖದೀಜಾ ಕುಟ್ಟಿ ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಶುಕ್ರವಾರ ಮಲಪ್ಪುರಂನಲ್ಲಿ ವಿಧಿವಶರಾಗಿದ್ದಾರೆ. 90 ವರ್ಷದ ಖದೀಜಾ ಕುಟ್ಟಿ ತೀವ್ರ ಅನಾರೋಗ್ಯದ ಹಿನ್ನೆಲೆ ಆಸ್ಪತ್ರೆದೆ ದಾಖಲಾಗಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು.

ಕೇರಳ ಪತ್ರಕರ್ತ ಸಿದ್ದಿಕ್ ಕಪ್ಪನ್ ದೆಹಲಿ ಏಮ್ಸ್ ಆಸ್ಪತ್ರೆಗೆ ದಾಖಲು ಕೇರಳ ಪತ್ರಕರ್ತ ಸಿದ್ದಿಕ್ ಕಪ್ಪನ್ ದೆಹಲಿ ಏಮ್ಸ್ ಆಸ್ಪತ್ರೆಗೆ ದಾಖಲು

ಹತ್ರಾಸ್ ಗ್ರಾಮದಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಬೆನ್ನಲ್ಲೇ ಶಾಂತಿ ಕದಡಿದ ಪಿಎಫ್ಐ ಸಂಘಟನೆ ಕಾರ್ಯಕರ್ತರ ಜೊತೆಗೆ ಗುರುತಿಸಿಕೊಂಡಿದ್ದ ಸಿದ್ದಿಕ್ ಕಪ್ಪನ್ ಅನ್ನು ಅಕ್ಟೋಬರ್ 5ರಂದು ಪೊಲೀಸರು ಬಂಧಿಸಿದ್ದರು. ಕಪ್ಪನ್ ಜೊತೆ ಇನ್ನೂ ಮೂವರು ಕಾರ್ಯಕರ್ತರು ಇದರಲ್ಲಿ ಶಾಮೀಲಾಗಿರುವ ಆರೋಪ ಕೇಳಿ ಬಂದಿತ್ತು.

ಪೊಲೀಸರು ಆರು ತಿಂಗಳ ಅವಧಿಯೊಳಗೆ ಪತ್ರಕರ್ತ ಸಿದ್ದಿಕ್ ಕಪ್ಪನ್ ಮತ್ತು ಇತರ ಮೂವರ ವಿರುದ್ಧ ಶಾಂತಿ ಉಲ್ಲಂಘನೆ ಆರೋಪ ಪ್ರಕರಣದ ತನಿಖೆಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸದ ಹಿನ್ನೆಲೆ ಮಧುರಾ ಕೋರ್ಟ್ ಇಡೀ ಪ್ರಕರಣದ ವಿಚಾರಣೆಯನ್ನು ಕೈ ಬಿಟ್ಟಿತ್ತು.

ಯಾವಾಗ ಆರೋಪಿಗಳ ಬಂಧನ?
ಕಳೆದ 2020ರ ಅಕ್ಟೋಬರ್ 5 ರಂದು ಆರೋಪಿಗಳಾದ ಅತಿಕುರ್ರಹ್ಮಾನ್, ಆಲಂ, ಪತ್ರಕರ್ತ ಸಿದ್ದಿಕ್ ಕಪ್ಪನ್ ಮತ್ತು ಮಸೂದ್ ರನ್ನು 151, 107, 116 ಸಿಆರ್‌ಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಬಂಧಿಸಲಾಗಿತ್ತು. ಜೂನ್ 15ರಂದು ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ರಕ್ಷಣಾ ಸಲಹೆಗಾರ ಮಧುಬನ್ ದತ್ ಚತುರ್ವೇದಿ ತಿಳಿಸಿದ್ದಾರೆ.

English summary
Kerala Journalist Siddique Kappan's Mother Died At 90.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X