ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕಾಡೆಮಿ ತುರ್ತು ಸಭೆಯ ಮುನ್ನ ಲೇಖಕರ ಪ್ರತಿಭಟನೆ

By Prasad
|
Google Oneindia Kannada News

ನವದೆಹಲಿ, ಅಕ್ಟೋಬರ್ 23 : ಕನ್ನಡ ಸಾಹಿತಿ ಡಾ. ಎಂಎಂ ಕಲಬುರ್ಗಿ ಅವರ ಹತ್ಯೆಯನ್ನು ಖಂಡಿಸಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಹಿಂತಿರುಗಿಸುತ್ತಿರುವ ಭಾರತದ ಖ್ಯಾತ ಲೇಖಕರ ಮತ್ತು ಸಾಹಿತ್ಯ ಅಕಾಡೆಮಿಯ ನಡುವಿನ ತಾಕಲಾಟ ವಾಕ್‌ಯುದ್ಧದ ಹಂತಕ್ಕೆ ಬಂದು ತಲುಪಿದೆ.

ಕರ್ನಾಟಕದ ಲೇಖಕ ವೀರಭದ್ರಪ್ಪ ಕುಂಬಾರ್ ಸೇರಿದಂತೆ ಡಜನ್‌ಗಟ್ಟಲೆ ಲೇಖಕರು ಕೇಂದ್ರ ಸಾಹಿತ್ಯ ಅಕಾಡೆಮಿ ಹಿಂತಿರುಗಿಸುವ ಹಿನ್ನೆಲೆಯಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಶುಕ್ರವಾರ ಸಭೆ ಸೇರುತ್ತಿದೆ. ಕರ್ನಾಟಕದ ಮತ್ತೊಬ್ಬ ಖ್ಯಾತ ಲೇಖಕ, ಜ್ಞಾನಪೀಠ ಪ್ರಶಸ್ತಿ ವಿಜೇತ ಬರಹಗಾರ ಡಾ. ಚಂದ್ರಶೇಖರ ಕಂಬಾರ ಈ ಅಕಾಡೆಮಿಯ ಉಪಾಧ್ಯಕ್ಷರಾಗಿದ್ದಾರೆ.

ಅಕಾಡೆಮಿ ಕರೆದಿರುವ ತುರ್ತು ಸಭೆಯ ಮೊದಲೇ, ಸೆಲ್ಯೂಟ್ ಟು ಪ್ರೊ.ಎಂಎಂ ಕಲಬುರ್ಗಿ ಎಂಬ ಬ್ಯಾನರ್ ಹಿಡಿದುಕೊಂಡು ನೂರಾರು ಲೇಖಕರು ನವದೆಹಲಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಸೂಕ್ತ ಬೆಂಬಲ ದೊರೆಯದಿದ್ದರೆ ಪ್ರತಿಭಟನೆ ಮತ್ತಷ್ಟು ತೀವ್ರಗೊಳಿಸುವುದಾಗಿ ಲೇಖಕರು ತೀರ್ಮಾನಕ್ಕೆ ಬಂದಿದ್ದಾರೆ. [ಪ್ರಶಸ್ತಿ ಹಿಂದಿರುಗಿಸುತ್ತಿರುವ ನಾಡಿನ ಸಾಹಿತಿಗಳಿಗೆ 6 ಪ್ರಶ್ನೆಗಳು]

Kendra Sahitya Akademy Vs Writers

ಲೇಖಕರ ಮೇಲೆ ಆಗುತ್ತಿರುವ ದಾಳಿ ಮತ್ತು ತನ್ನ ನಿಲುವನ್ನು ಪ್ರಕಟಿಸದಿರುವುದನ್ನು ವಿರೋಧಿಸಿ ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಕೆಲ ಸದಸ್ಯರು ಕೂಡ ಹೊರಬಂದಿದ್ದಾರೆ. ಈ ಎಲ್ಲ ಬೆಳವಣಿಗಳ ಕುರಿತು ಚರ್ಚಿಸುವ ಉದ್ದೇಶದಿಂದ ಅಕಾಡೆಮಿ ಸಭೆ ಸೇರುತ್ತಿದೆ.

ಆದರೆ, ಪ್ರಶಸ್ತಿ ಹಿಂತಿರುಗಿಸುವುದನ್ನು ವಿರೋಧಿಸಿರುವ ಅಕಾಡೆಮಿ, ಲೇಖಕರು ಪ್ರಶಸ್ತಿ ಹಿಂತಿರುಗಿಸಬಾರದಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದೆ. ಬಿಜೆಪಿ ಸರಕಾರದ ಅಡಿಯಲ್ಲಿ ಲೇಖಕರ ವಾಕ್ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದಿಲ್ಲ, ಲೇಖಕರ ಪ್ರತಿಭಟನೆ ಮಾಡಿ ಅನಗತ್ಯ ಹುಯಿಲೆಬ್ಬಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ. [ಕಲಬುರ್ಗಿ ಹತ್ಯೆ ಖಂಡಿಸಿ ಅಕಾಡೆಮಿ ಪ್ರಶಸ್ತಿ ಹಿಂದಿರುಗಿಸಿದವರ ಪಟ್ಟಿ]


"ತಮ್ಮ ಅಭಿಪ್ರಾಯವನ್ನು ಅಭಿವ್ಯಕ್ತಪಡಿಸಿದ ಕೆಲ ಲೇಖಕರ ಹತ್ಯೆ ನಡೆದರೂ ಸಾಹಿತ್ಯ ಅಕಾಡೆಮಿ ಯಾವುದೇ ಕ್ರಮ ತೆಗೆದುಕೊಳ್ಳಲು ಮುಂದಾಗಿಲ್ಲ. ಅಕಾಡೆಮಿ ಈ ಬಾರಿ ಖಂಡಿತ ತಮ್ಮ ನಿಲುವನ್ನು ಪ್ರಕಟಿಸುತ್ತದೆ ಎಂಬ ನಂಬಿಕೆಯಿದೆ. ಇಲ್ಲದಿದ್ದರೆ ಪ್ರತಿಭಟನೆ ತೀವ್ರಗೊಳಿಸುವುದು ಅನಿವಾರ್ಯ" ಅಂದು 1988ರಲ್ಲಿ 'ದಿ ಗೋಲ್ಡನ್ ಗೇಟ್' ಕಾದಂಬರಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಗಳಿಸಿದ್ದ ಆಂಗ್ಲ ಲೇಖಕ ವಿಕ್ರಮ್ ಸೇಠ್ ಹೇಳಿದ್ದಾರೆ.

English summary
The writers who all have returned Kendra Sahitya Akademy awads in protest against murder of MM Kalburgi and other writers marched in New Delhi ahead of cultural bodies emergency on Friday. Akademy has termed the protest as Ho-Halla (loud clamour).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X