ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರೋಪ-ಪ್ರತ್ಯಾರೋಪಗಳಿಂದ ಕೊರೊನಾ ತೊಲಗಿಸಲು ಸಾಧ್ಯವಿಲ್ಲ: ಕೇಜ್ರಿವಾಲ್

|
Google Oneindia Kannada News

ನವದೆಹಲಿ, ಜನವರಿ 17: ಆರೋಪ-ಪ್ರತ್ಯಾರೋಪಗಳಿಂದ ಕೊರೊನಾ ಸೋಂಕನ್ನು ಹೋಗಲಾಡಿಸಲು ಸಾಧ್ಯವಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಸಾಂಕ್ರಾಮಿಕ ರೋಗವಾದ ಕೋವಿಡ್ -19 ಪರಿಸ್ಥಿತಿಯ ಬಗ್ಗೆ ಆರೋಪ - ಪ್ರತ್ಯಾರೋಪ ಮಾಡುತ್ತಾ ಕುಳಿತುಕೊಂಡರೆ ಯಾವುದೇ ಪ್ರಯೋಜನವಿಲ್ಲ. ಇಡೀ ದೇಶದಿಂದ ಕೊರೋನಾ ತೊಡೆದುಹಾಕು ಪಣ ತೊಡಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸೋಮವಾರ ಕಿವಿಮಾತು ಹೇಳಿದ್ದಾರೆ.

ಗೋವಾ; ಎಎಪಿಗೆ ಉತ್ಪಲ್ ಪರಿಕ್ಕರ್ ಆಹ್ವಾನಿಸಿದ ಕೇಜ್ರಿವಾಲ್ಗೋವಾ; ಎಎಪಿಗೆ ಉತ್ಪಲ್ ಪರಿಕ್ಕರ್ ಆಹ್ವಾನಿಸಿದ ಕೇಜ್ರಿವಾಲ್

ನಾನು ಕೊರೊನಾ ಸಂಕಷ್ಟದ ಪರಿಸ್ಥಿತಿಯನ್ನು ತೆಗಳುತ್ತಾ ಕೂರುವುದಿಲ್ಲ. ಆಪಾದನೆ ರೋಗವನ್ನು ತೊಲಗಿಸುವುದಿಲ್ಲ. ದೇಶದಲ್ಲಿ ಕೊರೊನಾ ವೈರಸ್ ಎಲ್ಲಿದ್ದರೂ ನಿವಾರಿಸಲು ಪ್ರಯತ್ನಿಸಿಸಬೇಕು ಎಂದು ಹೇಳಿದರು.

Kejriwal Says Blame Game Will Not Eradicate Covid-19

ದೆಹಲಿಯಲ್ಲಿ ಕೋವಿಡ್ -19 ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ ಮತ್ತು ಸೋಮವಾರ ಸುಮಾರು 12,000-13,000 ಹೊಸ ಪ್ರಕರಣಗಳು ದಾಖಲಾಗುವ ನಿರೀಕ್ಷೆ ಇದೆ. ಭಾನುವಾರದಂದು 18,000ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ಅವರು ಹೇಳಿದರು.

ಅರವಿಂದ್ ಕೇಜ್ರಿವಾಲ್ ಅವರು ಪಂಜಾಬಿನ ಆಮ್‌ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯ ಹೆಸರನ್ನು ನಾಳೆ (ಮಂಗಳವಾರ ಜನವರಿ 18) ಘೋಷಿಸಲಾಗುವುದು ಎಂದು ತಿಳಿಸಿದ್ದಾರೆ.

ದೆಹಲಿಯಲ್ಲಿ ಹೆಚ್ಚುತ್ತಿರುವ ಕೊರೊನಾ ವೈರಸ್ ಪ್ರಕರಣಗಳು NCR(ರಾಷ್ಟ್ರೀಯ ರಾಜಧಾನಿ ಪ್ರದೇಶ) ಮೇಲೆ ಪರಿಣಾಮ ಬೀರಿದೆ ಮತ್ತು ಗುರುಗ್ರಾಮ್, ಫರಿದಾಬಾದ್ ಮತ್ತು ಸೋನಿಪತ್ ಜಿಲ್ಲೆಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಲು ಕಾರಣವಾಗಿದೆ" ಎಂದು ಹೇಳಿದ ಹರಿಯಾಣ ಆರೋಗ್ಯ ಸಚಿವ ಅನಿಲ್ ವಿಜ್ ಅವರ ಹೇಳಿಕೆಗೆ ದೆಹಲಿ ಸಿಎಂ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ಭ್ರಷ್ಟಾಚಾರ ಮುಕ್ತ ಸರ್ಕಾರ ತಮ್ಮ ಗುರಿ ಎಂದಿರುವ ಅವರು, ಗೋವಾ ಯುವಜನರು ಮತ್ತು ಅವರ ಕಳವಳಗಳು ಸೂಕ್ತವಾಗಿವೆ. ಏಕೆಂದರೆ ಚುನಾವಣೆಗೂ ಮುನ್ನ ಪ್ರತಿಯೊಬ್ಬರೂ ನಮ್ಮ ಪಕ್ಷವೇ ಅತ್ಯುತ್ತಮ ಎಂದು ಹೇಳುತ್ತಿದ್ದಾರೆ. ದಿಲ್ಲಿಯಲ್ಲಿ ನಾವು ಇದನ್ನು ಸಾಧಿಸಿದ್ದೆವು.

ನನ್ನ ಮೇಲೆ ಹಾಗೂ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಮೇಲೆ ಸಿಬಿಐ ಹಾಗೂ ಪೊಲೀಸರ ಮೂಲಕ ದಾಳಿಗಳನ್ನು ನಡೆಸಿದ ಪ್ರಧಾನಿ ಮೋದಿ ಅವರೇ ಪ್ರಮಾಣ ಪತ್ರ ಕೊಟ್ಟಿದ್ದಾರೆ. ಅವರು ನಮ್ಮ 400 ಕಡತಗಳನ್ನು ಪರಿಶೀಲಿಸಲು ಆಯೋಗ ರಚಿಸಿದ್ದರು. ಆದರೆ ಅವರಿಗೆ ಒಂದೇ ಒಂದು ತಪ್ಪು ಹುಡುಕಲು ಸಾಧ್ಯವಾಗಲಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

'ಹೀಗಾಗಿ ಇದು ಎಎಪಿ ಅತ್ಯಂತ ಪ್ರಾಮಾಣಿಕ ಮತ್ತು ನಿಷ್ಠಾವಂತ ಪಕ್ಷ ಎನ್ನುವುದನ್ನು ಸಾಬೀತುಪಡಿಸಿದೆ. ನಮಗೆ ಗೋವಾದಲ್ಲಿ ಸರ್ಕಾರ ರಚಿಸಲು ಅವಕಾಶ ನೀಡಿದರೆ, ಇದು ಪ್ರಾಮಾಣಿಕ ಸರ್ಕಾರವಾಗಿರಲಿದೆ ಎಂದು ನಿಮಗೆ ಭರವಸೆ ನೀಡುತ್ತೇನೆ' ಎಂದು ಕೇಜ್ರಿವಾಲ್ ಹೇಳಿದ್ದಾರೆ.

'ಗೋವಾದ ಜನರು ಈ ಚುನಾವಣೆಯನ್ನು ಭರವಸೆಯೊಂದಿಗೆ ನೋಡುತ್ತಿದ್ದಾರೆ. ಅವರಿಗೆ ಈ ಮೊದಲು ಬಿಜೆಪಿ ಅಥವಾ ಕಾಂಗ್ರೆಸ್ ಹೊರತಾಗಿ ಬೇರೆ ಆಯ್ಕೆ ಇರಲಿಲ್ಲ. ಅವರು ಹತಾಶರಾಗಿದ್ದಾರೆ ಮತ್ತು ಬದಲಾವಣೆ ಬಯಸಿದ್ದಾರೆ. ಅದನ್ನು ನೀಡಲು ಎಎಪಿ ಸಿದ್ಧವಿದೆ' ಎಂದು ತಿಳಿಸಿದ್ದಾರೆ.

English summary
Delhi Chief Minister Arvind Kejriwal on Monday said that indulging in a blame game over the pandemic situation will not eradicate the coronavirus and it should be eliminated from the entire country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X