ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಲ್ಲಿ ಮನೆ-ಮನೆಗೆ ತೆರಳಿ ಕೊರೊನಾ ಲಸಿಕೆ ಅಭಿಯಾನ: ಕೇಜ್ರಿವಾಲ್‌ ಘೋಷಣೆ

|
Google Oneindia Kannada News

ನವದೆಹಲಿ, ಜೂ.07: ದೆಹಲಿಯಲ್ಲಿ 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ಹಾಕುವ ವಿಶೇಷ ಅಭಿಯಾನ ಇಂದು ನಗರದಲ್ಲಿ ಆರಂಭವಾಗಿದ್ದು ಮುಂಬರುವ ನಾಲ್ಕು ವಾರಗಳಲ್ಲಿ ದೆಹಲಿಯಲ್ಲಿ 45 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡುವ ಉದ್ದೇಶ ಇದಾಗಿದೆ ಎಂದು ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಹೇಳಿದರು.

ಎಲ್ಲಿ ಮತದಾನ, ಅಲ್ಲಿ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ, ದೆಹಲಿಯಲ್ಲಿ ಮನೆ-ಮನೆಗೆ ತೆರಳಿ ಕೊರೊನಾ ಲಸಿಕೆ ಅಭಿಯಾನದ ಬಗ್ಗೆ ವರ್ಚುವಲ್ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇಜ್ರಿವಾಲ್‌, ''ರಾಷ್ಟ್ರ ರಾಜಧಾನಿಯಲ್ಲಿ ಮುಂದಿನ ನಾಲ್ಕು ವಾರಗಳಲ್ಲಿ 45 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಕೊರೊನಾ ಲಸಿಕೆ ಹಾಕಿಸುವ ಉದ್ದೇಶದಿಂದ ಈ ಅಭಿಯಾನ ಆರಂಭಿಸಲಾಗಿದೆ. ಎಲ್ಲಿ ಜನರು ಮತದಾನ ಮಾಡುತ್ತಾರೋ, ಅಲ್ಲೇ ಜನರಿಗೆ ಲಸಿಕೆ ಹಾಕಲಾಗುವುದು'' ಎಂದು ಕೇಜ್ರಿವಾಲ್‌ ತಿಳಿಸಿದ್ದಾರೆ.

ತಾರಕಕ್ಕೇರಿದ ಕೇಂದ್ರ ಹಾಗೂ ದೆಹಲಿ ಸರ್ಕಾರದ ನಡುವಿನ ಹಗ್ಗಜಗ್ಗಾಟತಾರಕಕ್ಕೇರಿದ ಕೇಂದ್ರ ಹಾಗೂ ದೆಹಲಿ ಸರ್ಕಾರದ ನಡುವಿನ ಹಗ್ಗಜಗ್ಗಾಟ

"45 ವರ್ಷಕ್ಕಿಂತ ಮೇಲ್ಪಟ್ಟ ಕೆಲವು ಜನರಿಗೆ ಲಸಿಕೆ ಲಭಿಸುತ್ತಿಲ್ಲ ಎಂಬುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆ ಬೂತ್ ಮಟ್ಟದ ಅಧಿಕಾರಿಗಳು ಲಸಿಕೆ ದೊರೆಯದವರನ್ನು ಗುರುತಿಸಿ ಅವರ ಮನೆಗೆ ಭೇಟಿ ನೀಡಿ ಲಸಿಕೆ ನೀಡುತ್ತಾರೆ. ಲಸಿಕೆ ಪಡೆಯಲು ಇಚ್ಛಿಸದವರಿಗೆ ಮನವೊಲಿಕೆ ಮಾಡಲಾಗುವುದು. ಇದನ್ನು ನಗರದ 70 ನಾಗರಿಕ ವಾರ್ಡ್‌ಗಳಲ್ಲಿ ನಡೆಸಲಾಗುತ್ತದೆ" ಎಂದು ತಿಳಿಸಿದ್ದಾರೆ.

 Kejriwal launches Jahan Vote, Wahan Vaccination campaign to vaccinate all above 45 yrs

"ಒಂದು ತಂಡವು ಪ್ರತಿ ಮನೆಗೆ ತೆರಳಿ ವ್ಯಾಕ್ಸಿನೇಷನ್ ಪಡೆಯಲು ಅರ್ಹವಾಗಿರುವವರಿಗೆ ಡೋಸ್‌ ನೀಡತ್ತದೆ. ಹಿಂಜರಿಯುವ ನಾಗರಿಕರಿಗೆ ಲಸಿಕೆ ಪಡೆಯಲು ಇದು ಪ್ರೋತ್ಸಾಹಿಸುವ ಪ್ರಯತ್ನದ ಭಾಗ ಇದಾಗಿದೆ. ಕೊರೊನಾ ಲಸಿಕೆ ಪಡೆಯಲು ಸಾಧ್ಯವಾಗದ ಹಾಗೂ ಹಿಂಜರಿಯುವ ಅರ್ಹ ನಾಗರಿಕರನ್ನು ಮನೆಗಳಿಂದ ಲಸಿಕಾ ಕೇಂದ್ರಗಳಿಗೆ ಕರೆತರಲು ಇ-ರಿಕ್ಷಾ ವ್ಯವಸ್ಥೆ ಮಾಡಲಾಗುತ್ತದೆ" ಎಂದು ಹೇಳಿದ್ದಾರೆ.

"ದೆಹಲಿಯಲ್ಲಿ 45 ವರ್ಷದೊಳಗಿನ 57 ಲಕ್ಷ ಜನರಿದ್ದಾರೆ. ಆ ಪೈಕಿ 27 ಲಕ್ಷ ಜನರು ಲಸಿಕೆಯ ಮೊದಲ ಡೋಸ್‌ ಪಡೆದಿದ್ದರೆ, 30 ಲಕ್ಷ ಜನರು ಇನ್ನೂ ಲಸಿಕೆ ಪಡೆದಿಲ್ಲ. ಈ ಹಿನ್ನೆಲೆ ಲಸಿಕೆ ಜನರಿಗೆ ಸುಲಭವಾಗಿ ದೊರೆಯುವಂತೆ ನೋಡಲಾಗುವುದು. ಮತದಾನ ಕೇಂದ್ರಗಳು ಜನರ ಮನೆಗಳಿಗೆ ಹತ್ತಿರದಲ್ಲಿರುತ್ತದೆ. ಆದ್ದರಿಂದ ಲಸಿಕೆ ಪಡೆಯಲು ಜನರು ಹೆಚ್ಚು ದೂರ ಪ್ರಯಾಣಿಸಬೇಕಾದ ಸ್ಥಿತಿ ಬರುವುದಿಲ್ಲ. ಇದಕ್ಕಾಗಿ ಇ-ರಿಕ್ಷಾ ವ್ಯವಸ್ಥೆ ಮಾಡಲಾಗುತ್ತದೆ" ಎಂದು ವಿವರಿಸಿದ್ದಾರೆ.

ಆನ್‌ಲೈನ್‌ನಲ್ಲಿ ಬುಕ್ ಮಾಡಿದರೆ ಮನೆ ಬಾಗಿಲಿಗೆ 'ಮದ್ಯ'!ಆನ್‌ಲೈನ್‌ನಲ್ಲಿ ಬುಕ್ ಮಾಡಿದರೆ ಮನೆ ಬಾಗಿಲಿಗೆ 'ಮದ್ಯ'!

"18-44 ವರ್ಷದವರಿಗೆ ನಾವು ಸಾಕಷ್ಟು ಪ್ರಮಾಣ ಲಸಿಕೆ ಪಡೆದ ಬಳಿಕ ಇದೇ ರೀತಿ ಲಸಿಕೆ ಪಡೆಯಲು ಆಹ್ವಾನ ನೀಡಲಾಗುವುದು. ಎರಡು ತಿಂಗಳೊಳಗೆ ನಾವು ಈ ವರ್ಗಕ್ಕೆ ಲಸಿಕೆ ಹಾಕಿರುವ ಬಗ್ಗೆ ಖಾತರಿ ಪಡಿಸಿಕೊಳ್ಳುತ್ತೇವೆ" ಎಂದು ಹೇಳಿದ್ದಾರೆ.

 Kejriwal launches Jahan Vote, Wahan Vaccination campaign to vaccinate all above 45 yrs

ಇನ್ನು ದೆಹಲಿಯಲ್ಲಿ ಸುಮಾರು 3 ವಾರಗಳ ನಂತರ ಮೆಟ್ರೋ ಸೇವೆ ಆರಂಭ ಮಾಡಲಾಗಿದೆ. ಆದರೆ "ಶೇ. 50 ರಷ್ಟು ಪ್ರಯಾಣಿಕರಿಗೆ ಪ್ರಯಾಣಿಸಲು ಮಾತ್ರ ಅವಕಾಶ ನೀಡಲಾಗಿದೆ. ಅದಕ್ಕಿಂತ ಅಧಿಕ ಪ್ರಯಾಣಿಕರಿಗೆ ಅವಕಾಶ ನೀಡಲಾಗುವುದಿಲ್ಲ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೋಮವಾರ, ರೈಲುಗಳ ಸಂಚಾರವೂ ಆರಂಭವಾಗಿದೆ. "ಲಭ್ಯವಿರುವ ಅರ್ಧದಷ್ಟು ರೈಲುಗಳನ್ನು ವಿವಿಧ ಮಾರ್ಗಗಳಲ್ಲಿ ಸುಮಾರು ಐದರಿಂದ 15 ನಿಮಿಷಗಳ ಅಂತರದಲ್ಲಿ ಸೇವೆಗೆ ಸೇರ್ಪಡೆ ಮಾಡಿಸಲಾಗುವುದು" ಎಂದು ಅಧಿಕಾರಿಯೊಬ್ಬರು ಭಾನುವಾರ ಹೇಳಿದ್ದರು.

(ಒನ್‌ಇಂಡಿಯಾ ಸುದ್ದಿ)

English summary
Kejriwal launches 'Jahan Vote, Wahan Vaccination' campaign to vaccinate all above 45 yrs within 4 weeks
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X