• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ಅರವಿಂದ್ ಕೇಜ್ರಿವಾಲ್ ಸಿಐಎ ಏಜೆಂಟ್ ಅಂತೆ!'

By Mahesh
|

ನವದೆಹಲಿ, ಮಾ.9: ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನಿರಾಕರಿಸಿದ್ದಕ್ಕಾಗಿ ಆಮ್ ಆದ್ಮಿ ಪಕ್ಷದ ಕಾನೂನು ವಿಭಾಗ ಅಧ್ಯಕ್ಷ ಅಶ್ವಿನ್ ಉಪಾಧ್ಯಯ್ ಅವರು ಪಕ್ಷದ ಮುಖ್ಯಸ್ಥ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಕೇಜ್ರಿವಾಲ್ ಅವರನ್ನು ಸುಳ್ಳುಗಾರ, ಸಿಐಎ ಏಜೆಂಟ್ ಎಂದು ಕರೆದಿದ್ದಾರೆ.

ಭಾನುವಾರ ಮಥುರಾದ ಚುನಾವಣಾ ಪ್ರಚಾರ ಮೆರವಣಿಗೆ ಭಾಗವಹಿಸಲು ಹೊರಡುತ್ತಿದ್ದ ಕೇಜ್ರಿವಾಲ್ ಅವರನ್ನು ಅಡ್ಡಗಟ್ಟಿ ಅಶ್ವಿನ್ ಜಗಳವಾಡಿದರು. ಇಬ್ಬರ ಮಧ್ಯೆಯೂ ಬಿರುಸಿನ ಮಾತಿನ ಸಮರ ನಡೆದಿದೆ. ಅಶ್ವಿನ್ ಅವರು ಈ ವ್ಯಕ್ತಿ ಸುಳ್ಳುಗಾರ, ಈತ ಸುಳ್ಳು ಹೇಳುತ್ತಿದ್ದಾನೆ ಎಂದು ಅರಚತೊಡಗಿದರು.

ಭ್ರಷ್ಟಾಚಾರ, ಕೋಮುವಾದ, ಹೈಕಮಾಂಡ್ ಸಂಸ್ಕೃತಿ, ಜಾತಿವಾದ ಎಲ್ಲದರ ನಿವಾರಣೆ ಆಮ್ ಆದ್ಮಿ ಪಕ್ಷದ ಧ್ಯೇಯವಾಗಿತ್ತು. ಆದರೆ ಈಗ ಆಪ್ ಇವೆಲ್ಲದರ ಜತೆ ಹೊಂದಾಣಿಕೆ ಮಾಡಿಕೊಳ್ಳುತ್ತಿದೆ ಎಂದು ಅಶ್ವಿನ್ ದೂರಿದರು. ಘಟನೆ ನಂತರ ಪ್ರತಿಕ್ರಿಯಿಸಿದ ಅರವಿಂದ್ ಕೇಜ್ರಿವಾಲ್ ಅವರು ಅಶ್ವಿನ್ ಅವರಿಗೆ ಟಿಕೆಟ್ ನೀಡುವುದಿಲ್ಲ ಎಂದು ಮಾಧ್ಯಮದವರ ಮುಂದೆ ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಅಶ್ವಿನ್ ಅವರು ಕೇಜ್ರಿವಾಲ್ ರಿಗೆ 11 ಪ್ರಶ್ನೆಗಳನ್ನು ಕೇಳಲಾಗಿದೆ. ಆದರೆ, ಕೇಜ್ರಿವಾಲ್ ತಮ್ಮ ಪ್ರಶ್ನೆಗಳಿಗೆ ಉತ್ತರಿಸಿಲ್ಲ. ಅರವಿಂದ್ ಉತ್ತರಿಸುವವವರೆಗೂ ತಾನು ಅಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ ಅಶ್ವಿನ್ ಹೇಳಿದ್ದಾರೆ.ಅಶ್ವಿನ್ ಅವರಿಗೆ ಮತ್ತೊಬ್ಬ ಬಂಡಾಯಗಾರ ವಿನೋದ್ ಕುಮಾರ್ ಬಿನ್ನಿ ಅವರ ಬೆಂಬಲ ಸಿಗುವ ಸಾಧ್ಯತೆಯಿದೆ.

ಆಮ್ ಅದ್ಮಿ ಪಕ್ಷದ ವಿರುದ್ಧ ಸರಣಿ ಆರೋಪಗಳನ್ನು ಮಾಡಿದ ಅಶ್ಚಿನ್ ಆವರು ಪಕ್ಷ ದೇಶದ್ರೋಹಿ ಸಂಘಟನೆಗಳ ಕೈಗೊಂಬೆಯಾಗಿ ವರ್ತಿಸುತ್ತಿದೆ.ಫೋರ್ಡ್ ಫೌಂಡೇಶನ್ ಸೇರಿದಂತೆ ಅನೇಕ ವಿದೇಶಿ ಸಂಸ್ಥೆಗಳಿಂದ ಆಮ್ ಆದ್ಮಿ ಪಕ್ಷಕ್ಕೆ ಯಥೇಚ್ಛವಾಗಿ ಹಣ ಹರಿದು ಬಂದಿದೆ. ಕಳೆದ ಹತ್ತು ವರ್ಷಗಳಿಂದ ಹಣ ಸಂಗ್ರಹದ ಲೆಕ್ಕಾಚಾರ ಹಾಕಿದರೆ ಫೋರ್ಡ್ ಫೌಂಡೇಶನ್ ವೊಂದರಿಂದಲೇ 4000 ಕೋಟಿ ರು ಭಾರತದ ಎನ್ ಜಿಒಗಳಿಗೆ ಸಿಕ್ಕಿದೆ. ಅದರಲ್ಲಿ ಮಾವೋವಾದಿ, ಉಗ್ರ ಸಂಘಟನೆಗಳು ಸೇರಿದೆ ಎಂದು ಅಶ್ವಿನ್ ಹೇಳಿದ್ದಾರೆ.

ಅಶ್ವಿನ್ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ಆಮ್ ಆದ್ಮಿ ಪಕ್ಷದ ವಕ್ತಾರ ದೀಪಕ್ ಬಾಜಪೇಯಿ, ಎಲ್ಲಾ ಆರೋಪಗಳು ನಿರಾಧಾರ, ಅಶ್ವಿನ್ ಅವರು ಎಎಪಿ ಕಾನೂನು ವಿಭಾಗದ ಅಧ್ಯಕ್ಷರಾಗಿಲ್ಲ, ಅವರು ಕೇವಲ ಒಬ್ಬ ಸದಸ್ಯರಾಗಿದ್ದು, ಕಳೆದ ವಾರವೇ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಟಿಕೆಟ್ ಹಂಚಿಕೆಯಲ್ಲಿ ಅವ್ಯವಹಾರ ನಡೆದಿಲ್ಲ ಎಲ್ಲವೂ ಪಾರದರ್ಶಕವಾಗಿ ನಡೆದಿದೆ ಎಂದಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In a more trouble to AAP, another prominent member and convenor of the legal cell of the party Ashwini Upadhyay turned rebel after being denied ticket to contest in the upcoming Lok Sabha election 2014.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more