ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐದು ದೆಹಲಿ ಮಾರುಕಟ್ಟೆಗಳು 'ವಿಶ್ವ ದರ್ಜೆ'ಯನ್ನಾಗಲು ಕೇಜ್ರಿವಾಲ್ ಭರವಸೆ

|
Google Oneindia Kannada News

ನವದೆಹಲಿ ಜೂನ್ 13: ಇತ್ತೀಚೆಗೆ ಜಾಮಾ ಮಸೀದಿಯಲ್ಲಿ ಪ್ರತಿಭಟನೆಯಿಂದಾಗಿ ಭಾರೀ ಸುದ್ದಿಯಲ್ಲಿದ್ದ 'ದೆಹಲಿ'ಯಲ್ಲಿ ಅಭಿವೃದ್ಧಿ ಕಾರ್ಯಗಳತ್ತ ಸರ್ಕಾರ ಗಮನ ಹರಿಸಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸೋಮವಾರ ತಮ್ಮ ಸರ್ಕಾರ ನಗರದಲ್ಲಿ ಐದು ಮಾರುಕಟ್ಟೆಗಳನ್ನು ಮರು ಅಭಿವೃದ್ಧಿಪಡಿಸುತ್ತದೆ ಮತ್ತು ಅವುಗಳನ್ನು 'ವಿಶ್ವ ದರ್ಜೆ'ಯನ್ನಾಗಿ ಮಾಡುತ್ತದೆ ಎಂದು ಹೇಳಿದ್ದಾರೆ. ಪುನರಾಭಿವೃದ್ಧಿಗಾಗಿ ಅಂತಿಮಗೊಳಿಸಲಾದ ಮಾರುಕಟ್ಟೆಗಳೆಂದರೆ ಕಮಲಾ ನಗರ, ಖಾರಿ ಬಾವೊಲಿ, ಲಜಪತ್ ನಗರ, ಸರೋಜಿನಿ ನಗರ ಮತ್ತು ಕೀರ್ತಿ ನಗರ ಮಾರುಕಟ್ಟೆಗಳು ಎಂದು ಹೇಳಲಾಗಿದೆ. ರೋಜ್‌ಗಾರ್ ಬಜೆಟ್‌ನಲ್ಲಿನ ಇದನ್ನು ಮಾಡಲಾಗುತ್ತಿದೆ.

ಜೊತೆಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಇದು ಪೂರಕವಾಗಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ. "ನಾವು ಮೊದಲ ಹಂತದಲ್ಲಿ ಪುನರಾಭಿವೃದ್ಧಿ ಮಾಡಲಿರುವ ಐದು ಮಾರುಕಟ್ಟೆಗಳ ಹೆಸರನ್ನು ಅಂತಿಮಗೊಳಿಸಿದ್ದೇವೆ. ನಾವು ಅವರ USP ಗಳನ್ನು ಸಹ ಪಟ್ಟಿ ಮಾಡಿದ್ದೇವೆ. ಉದಾಹರಣೆಗೆ, ಕಮಲಾ ನಗರವು ಯುವ ಹ್ಯಾಂಗ್‌ಔಟ್ ವಲಯವಾಗಿದೆ, ಖಾರಿ ಬಾಲಿ ಅತ್ಯುತ್ತಮ ಮಸಾಲೆಗಳಿಗೆ ಹೆಸರುವಾಸಿಯಾಗಿದೆ" ಎಂದು ಕೇಜ್ರಿವಾಲ್ ಹೇಳಿದರು. ಆಯ್ಕೆ ಮಾಡಿದ ಮಾರುಕಟ್ಟೆಗಳನ್ನು ಪಟ್ಟಿ ಮಾಡಲು, ಪುನರಾಭಿವೃದ್ಧಿ ಯೋಜನೆಯನ್ನು ಅಂತಿಮಗೊಳಿಸಲು ವಿನ್ಯಾಸ ಸ್ಪರ್ಧೆ ಇರುತ್ತದೆ ಎಂದು ಅವರು ಹೇಳಿದರು.

ದೆಹಲಿ ಸರ್ಕಾರದ ಯೋಜನೆಯಡಿಯಲ್ಲಿ, ಈ ಮಾರುಕಟ್ಟೆಗಳನ್ನು ಸುಂದರಗೊಳಿಸಲಾಗುವುದು ಮತ್ತು ನಾಗರಿಕ ಸೌಕರ್ಯಗಳನ್ನು ಹೆಚ್ಚಿಸಲಾಗುವುದು, ಇದರಿಂದಾಗಿ ವ್ಯಾಪಾರದಂತೆಯೇ ಜನಸಂದಣಿಯು ಹೆಚ್ಚಾಗುತ್ತದೆ ಎಂದು ಸಿಎಂ ಹೇಳಿದ್ದಾರೆ.

Kejriwal Hopes to Make Five Delhi Markets ‘World Class

ದೇಶವ್ಯಾಪಿ ಧಾರ್ಮಿಕ ಯುದ್ಧಗಳು ಹೆಚ್ಚಾಗಿವೆ. ಹೀಗಾಗಿ ಎಲ್ಲೋ ಅಭಿವೃದ್ಧಿ ಒಳಜಗಳಗಳಿಂದಲೇ ಮರೆಯಾಗುತ್ತಿದೆ ಎನ್ನುವ ಅನುಮಾನ ಮತ್ತು ಆತಂಕ ಜನರಲ್ಲಿ ಮನೆ ಮಾಡಿದೆ. ಆರ್ಥಿಕ ಸಂಕಷ್ಟ ಎದುರಾಗಿರುವಾಗ ಜನರಿಗೆ ಅಭಿವೃದ್ಧಿ ಕಾರ್ಯಗಳು ಆಗಬೇಕು ಎನ್ನುವ ನಿರೀಕ್ಷೆಗಳು ಇವೆ. ಧಾರ್ಮಿಕ ಯುದ್ಧ, ರಾಜಕೀಯ ಕೆಸರೆರೆಚಾಟದ ನಡುವೆ ಅರವಿಂದ್ ಕೇಜ್ರಿವಾಲ್ ಅವರ ಅಭಿವೃದ್ಧಿ ಕಾರ್ಯಗಳು ಜನ ಮನ್ನಣೆಯನ್ನು ಪಡೆದುಕೊಂಡಿದೆ.

English summary
Delhi Chief Minister Arvind Kejriwal on Monday said that his government will redevelop five markets in the city and make them 'world class'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X