ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇದಾರನಾಥ: ವಾರದಲ್ಲಿ 1.30 ಲಕ್ಷ ಭಕ್ತರ ಭೇಟಿ, ಭದ್ರತಾ ಪಡೆ ನಿಯೋಜನೆ

|
Google Oneindia Kannada News

ನವದೆಹಲಿ, ಮೇ 13: ಚಾರ್‌ಧಾಮ್ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಉತ್ತರಾಖಂಡ್‌ನ ಕೇದಾರನಾಥ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ತೀವ್ರ ಏರಿಕೆಯಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಭಕ್ತರನ್ನು ನಿಯಂತ್ರಿಸಲು ಶುಕ್ರವಾರದಿಂದ ಇಂಡೋ-ಟಿಬೆಟಿಯನ್ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.

ಚಾರ್‍‌ ಧಾಮ್ ಯಾತ್ರೆ ಆರಂಭವಾದ ನಂತರ ಕೇದಾರನಾಥಕ್ಕೆ ಪ್ರಯಾಣಿಸುವ ಮಾರ್ಗದಲ್ಲಿ ವಿವಿಧ ಕಾರಣಗಳಿಂದ ಗುರುವಾರ 28 ಪ್ರವಾಸಿಗರು ಸಾವನ್ನಪ್ಪಿದ್ದಾರೆ. ಭಕ್ತರ ಸಂಖ್ಯೆ ಹೆಚ್ಚಾದ ಕಾರಣ ಉತ್ತರಾಖಂಡ ಸರ್ಕಾರ ಉನ್ನತ ಅಧಿಕಾರಿಗಳ ಸಭೆ ನಡೆಸಿದರು.

ಭಕ್ತರನ್ನು ನಿಯಂತ್ರಿಸಲು ಇಂಡೋ-ಟಿಬೆಟಿಯನ್ ಭದ್ರತಾ ಪಡೆ ನಿಯೋಜಿಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ (ಎನ್‌ಡಿಆರ್‍‌ಎಫ್‌) ಕೂಡ ದೇವಸ್ಥಾನದ ಬಳಿ ಜನಸಂದಣಿ ನಿಯಂತ್ರಿಸಲು ನಿಯೋಜನೆಗೊಂಡಿದೆ.

Kedarnath witnesses huge influx of pilgrims, ITBP deployed for crowd management

"ಭದ್ರತೆ ಮತ್ತು ಕೇದಾರನಾಥ ದೇವಾಲಯ ದರ್ಶನ ಸುಗಮಗೊಳಿಸುವ ಸಲುವಾಗಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ಕೇದಾರನಾಥ ದೇವಸ್ಥಾನ, ಮತ್ತು ಕೇದಾರನಾಥ ಕಣಿವೆಯಲ್ಲಿ ಹೆಚ್ಚಿನ ಜನಸಂದಣಿಯನ್ನು ನಿಯಂತ್ರಿಸುವ ಕಾರ್ಯವನ್ನು ಭದ್ರತಾ ಪಡೆ ಮಾಡುತ್ತದೆ" ಎಂದು ಇಂಡೋ-ಟಿಬೆಟಿಯನ್ ಭದ್ರತಾ ಪಡೆ ವಕ್ತಾರರಾದ ವಿವೇಕ್ ಕುಮಾರ್ ಪಾಂಡೆ ತಿಳಿಸಿದ್ದಾರೆ. ಪ್ರತಿದಿನ ಕೇದಾರನಾಥ ದೇವಸ್ಥಾನಕ್ಕೆ 20 ಸಾವಿರಕ್ಕೂ ಹೆಚ್ಚಿನ ಭಕ್ತರು ಭೇಟಿ ನೀಡುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ.

ಸೋನ್ ಪ್ರಯಾಗ್, ಉಖಿಮಠ, ಮತ್ತು ಕೇದಾರನಾಥ ಕ್ಷೇತ್ರಗಳು ಯಾತ್ರಾರ್ಥಿಗಳಿಂದ ತುಂಬಿ ಹೋಗಿದ್ದು, ಎಲ್ಲಾ ಕ್ಷೇತ್ರಗಳಲ್ಲೂ ಮುನ್ನೆಚ್ಚರಿಕಾ ಕ್ರಮವಾಗಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದ್ದು. ಯಾವುದೇ ಅಹಿತಕರ ಘಟನೆ ನಡೆಯದಂತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ವಿಪತ್ತು ನಿರ್ವಹಣಾ ತಂಡಗಳಿಗೂ ಸನ್ನದ್ಧವಾಗಿರುವಂತೆ ತಿಳಿಸಿದ್ದು, ರಾಜ್ಯ ಸರ್ಕಾರದ ಸಹಾಯದೊಂದಿಗೆ ವೈದ್ಯಕೀಯ ತಂಡಗಳು, ಆಮ್ಲಜನ ಸಿಲಿಂಡರ್, ತುರ್ತು ವೈದ್ಯಕೀಯ ಚಿಕಿತ್ಸೆಗಾಗಿ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ. ಇನ್ನು ಅಗತ್ಯ ಬಿದ್ದರೆ ವೈದ್ಯಕೀಯ ತುರ್ತು ಸಂದರ್ಭದಲ್ಲಿ ಸ್ಥಳಾಂತರಿಸಲು ಕೂಡ ಬೇಕಾದ ಸಿದ್ಧತೆ ಮಾಡಿಕೊಳ್ಳಲಾಗಿದೆ.

Kedarnath witnesses huge influx of pilgrims, ITBP deployed for crowd management

ಒಂದು ವಾರದಲ್ಲೇ 1.30 ಲಕ್ಷ ಭಕ್ತರ ಭೇಟಿ:
ಮೇ 6 ರಿಂದ ಕೇದಾರನಾಥ ದೇವಾಲಯ ಪ್ರವೇಶಕ್ಕೆ ಅನುಮತಿ ನೀಡಿದ್ದು ಈವರೆಗೆ 1.30 ಲಕ್ಷ ಭಕ್ತಾದಿಗಳು ದೇವಸ್ಥಾನಕ್ಕೆ ಭೇಟಿ ನೀಡಿರುವುದಾಗಿ ವಿವೇಕ್ ಕುಮಾರ್ ಪಾಂಡೆ ತಿಳಿಸಿದ್ದಾರೆ.

ಚಾರ್‍‌ ಧಾಮ್‌ನ ಮತ್ತೊಂದು ಪುಣ್ಯಕ್ಷೇತ್ರವಾದ ಬದ್ರಿನಾಥ ದೇವಾಲಯಕ್ಕೂ ಕೂಡ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಿದ್ದು, ಅಲ್ಲಿಯೂ ಸುರಕ್ಷತೆಗಾಗಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.

ಕೋವಿಡ್ ನಿಯಮಗಳ ಕಾರಣದಿಂದಾಗಿ ಎರಡು ವರ್ಷಗಳ ನಂತರ ಚಾರ್‍‌ ಧಾಮ್ ಯಾತ್ರೆಗೆ ಅನುಮತಿ ನೀಡಲಾಗಿದ್ದು ವಿಪರೀತ ಜನಸಂದಣಿಗೆ ಕಾರಣವಾಗಿದೆ ಎನ್ನಲಾಗಿದೆ.

English summary
After an unprecedented number of devotees turned up at the Kedarnath Temple, the Indo-Tibetan Border Force was deployed for crowd management on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X