ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

69ನೇ ಗಣರಾಜ್ಯೋತ್ಸವದಲ್ಲಿ ಗಮನ ಸೆಳೆದ ರಾಜ್ಯದ ಸ್ತಬ್ಧಚಿತ್ರ

By Manjunatha
|
Google Oneindia Kannada News

ನವ ದೆಹಲಿ, ಜನವರಿ 26: ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಕರ್ನಾಟಕದ ಅರಣ್ಯ ಸಂಪತ್ತನ್ನು ಪ್ರತಿಬಿಂಬಿಸುವ ಸ್ತಬ್ಧಚಿತ್ರ ಪ್ರೇಕ್ಷಕರ ಗಮನ ಸೆಳೆಯಿತು.

ಕಳೆದ ಬಾರಿ ರಾಜ್ಯದ ಜನಪದ ಕಲೆಗಳ ಮೇಲೆ ಬೆಳಕು ಚೆಲ್ಲುವ ಸ್ತಬ್ಧ ಚಿತ್ರ ಮಾಡಿ ಗಮನ ಸೆಳೆದಿದ್ದ ರಾಜ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಈ ಬಾರಿ ರಾಜ್ಯದ ಅರಣ್ಯ ಸಂಪತ್ತನ್ನು ದೃಷ್ಠಿಯಲ್ಲಿರಿಸಿಕೊಂಡು ಅದನ್ನು ಪ್ರತಿನಿಧಿಸುವ ಸ್ತಪ್ಧಚಿತ್ರ ತಯಾರಿಸಿದೆ.

ಗಣರಾಜ್ಯೋತ್ಸವ ಸಮಾರಂಭಕ್ಕೆ ವಿಶೇಷ ಅತಿಥಿಗಳಾಗಿ 10 ಆಸಿಯಾನ್ ನಾಯಕರುಗಣರಾಜ್ಯೋತ್ಸವ ಸಮಾರಂಭಕ್ಕೆ ವಿಶೇಷ ಅತಿಥಿಗಳಾಗಿ 10 ಆಸಿಯಾನ್ ನಾಯಕರು

ರಾಜ್ಯದ ವಿಶೇಷ ಮುಸುವ (ಕೋತಿ), ಆನೆ, ಹುಲಿ, ಪಶ್ಚಿಮ ಘಟ್ಟದ ಅರಣ್ಯ ಸಂಪತ್ತು, ಜೀವ ವೈವಿಧ್ಯವನ್ನು ರಾಜ್ಯದ ಸ್ತಪ್ಧಚಿತ್ರ ಪ್ರತಿಬಿಂಬಿಸುತ್ತಿತ್ತು. ಸರಳವಾಗಿದ್ದರೂ ಹಸಿರು ಮಯವಾಗಿದ್ದ ರಾಜ್ಯದ ಸ್ತಬ್ಧಚಿತ್ರ ತನ್ನ ಸರಳತೆಯಿಂದ ಜನರನ್ನು ಸೆಳೆಯಿತು.

Karnataka tableau on Republic day parade

ರಾಜ್ಯದ ಸ್ತಬ್ಧಚಿತ್ರ ಪರೇಡ್‌ನಲ್ಲಿ ಬಂದಾಗ ರಾಜ್ಯದ ಕೇಂದ್ರ ಸಚಿವ ಅನಂತ್‌ಕುಮಾರ್ ಅವರು ಎದ್ದು ನಿಂತು ಚಪ್ಪಾಳೆ ತಟ್ಟಿ ಸಂತಸ ವ್ಯಕ್ತಪಡಿಸಿದರು.

English summary
Karnataka tableau Reflecting Forest resource of Karnataka state Attracted attention on Republic day parade in New delhi. Karnataka Department of Information and Public Relations made this tableau .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X